AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day 2025: ಆಫೀಸಿನಲ್ಲಿ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್

ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಿಡುವ ದಿನ. ಪ್ರತಿ ವರ್ಷ ಈ ದಿನದಂದು ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನ (International Womens Day) ಆಚರಿಸಲಾಗುತ್ತದೆ. ಸಮಾಜದ ಅಭಿವೃದ್ದಿಗೆ ಪುರುಷರೊಂದಿಗೆ ಮಹಿಳೆಯರು ಸಹ ಸಮಾನವಾಗಿ ಕೊಡುಗೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಕುಟುಂಬ, ಮನೆ ಹಾಗೂ ವೃತ್ತಿ ಜೀವನವನ್ನು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ ಈ ಹೆಣ್ಣು. ಹೀಗಾಗಿ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಲು ಇದೊಂದು ಒಳ್ಳೆಯ ಅವಕಾಶವಾಗಿದೆ. ನಿಮ್ಮ ಆಫೀಸಿನಲ್ಲಿ ಮಹಿಳಾ ಉದ್ಯೋಗಿಗಳಿಗಿದ್ದರೆ ವಿಶೇಷ ದಿನವನ್ನು ಈ ರೀತಿ ಸೆಲೆಬ್ರೇಟ್ ಮಾಡಿ ಖುಷಿಪಡಿಸಬಹುದು. ಆಫೀಸಿನಲ್ಲಿ ಮಹಿಳಾ ದಿನ ಆಚರಿಸಲು ಇಲ್ಲಿದೆ ಟಿಪ್ಸ್.

Women's Day 2025: ಆಫೀಸಿನಲ್ಲಿ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2025 | 5:08 PM

ಹೆಣ್ಣು ಸಂಸಾರದ ಕಣ್ಣು, ಮನೆಯ ದೀಪ ಅಷ್ಟೇ ಅಲ್ಲದೇ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ನಿಭಾಯಿಸಿಕೊಂಡು ಹೋಗುವುದರಲ್ಲಿ ನಿಸ್ಸಿಮಳು. ಕೆಲವೊಮ್ಮೆ ಆಕೆಯ ಕೆಲಸವನ್ನು ಪ್ರಶಂಸ್ಸಿಸುವುದನ್ನು ಮರೆತು ಬಿಡುತ್ತೇವೆ. ಕುಟುಂಬಕ್ಕಾಗಿ ಎಷ್ಟೆಲ್ಲಾ ತ್ಯಾಗ ಮಾಡಿದರೂ ಅದೆಲ್ಲವನ್ನು ಹೇಳಿಕೊಳ್ಳುವುದೇ ಇಲ್ಲ. ಮಹಿಳೆಯರನ್ನು ಎಲ್ಲಾ ಸ್ತರಗಳಲ್ಲೂ ಮೇಲಕ್ಕೆತ್ತಬೇಕು, ಪುರುಷರಷ್ಟೇ ಸಮಾನ ಅವಕಾಶಗಳನ್ನು ನೀಡಬೇಕು ಹಾಗೂ ಆಕೆಯ ಸಾಧನೆಗಳನ್ನು ಗುರುತಿಸಬೇಕು ಎಂಬ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುವುದು. ಆಫೀಸಿನಲ್ಲಿರುವ ಪುರುಷ ಉದ್ಯೋಗಿಗಳು ಮಹಿಳಾ ದಿನಾಚರಣೆಯ ಪ್ರಯುಕ್ತ ಈ ರೀತಿ ಆಚರಿಸುವ ಮೂಲಕ ಮಹಿಳಾ ಸಹೋದ್ಯೋಗಿಗಳನ್ನು ಗೌರವಿಸಿ ಖುಷಿ ಪಡಿಸಬಹುದು.

ಆಫೀಸಿನಲ್ಲಿ ಮಹಿಳಾ ದಿನ ಆಚರಿಸಲು ಇಲ್ಲಿದೆ ಕೆಲ ಐಡಿಯಾ

  • ಪ್ರೇರಣಾದಾಯಕ ಸೆಷನ್ಸ್, ಚರ್ಚಾ ಕಾರ್ಯಗಾರ ಆಯೋಜಿಸಿ : ಕೆಲಸದ ಸ್ಥಳದಲ್ಲಿ, ಆಫೀಸಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲು ಬಯಸಿದ್ರೆ ಪ್ರೇರಣಾದಾಯಕ ಸೆಷನ್ಸ್, ಚರ್ಚೆಗಳು ಮತ್ತು ಸೃಜನಶೀಲ ಕಾರ್ಯಾಗಾರಗಳನ್ನು ಒಳಗೊಂಡಿರುವ ಕಾರ್ಯಕ್ರಮವನ್ನು ಆಯೋಜಿಸುವುದು ಉತ್ತಮ. ಈ ಕಾರ್ಯಕ್ರಮಗಳು ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಮಹಿಳೆಯರ ಬೆಳವಣಿಗೆಯ ಮೇಲೆ ಕೇಂದ್ರಿಕರಿಸುವ ಆಗಿರಲಿ. ಈ ಕಾರ್ಯಕ್ರಮಗಳಿಗೆ ಅತಿಥಿ ಭಾಷಣಕಾರರಾಗಿ ಸಾಧನೆ ಮಾಡಿದ ಮಹಿಳೆಯರು, ಇಲ್ಲವಾದರೆ ಮಹಿಳಾ ಉದ್ಯಮಿಗಳನ್ನು ಆಹ್ವಾನಿಸಬಹುದು.
  • ಉಡುಗೆ ನೀಡಿ ಕೆಲಸವನ್ನು ಪ್ರಶಂಸಿಸಿ : ಮಹಿಳಾ ಉದ್ಯೋಗಿಗಳನ್ನು ಮೆಚ್ಚಿಸಲು ಹಾಗೂ ಅವರ ಕೆಲಸ ಕಾರ್ಯಗಳನ್ನು ಮೆಚ್ಚುಗೆ ಸೂಚಿಸಲು ಉಡುಗೊರೆಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಹೀಗಾಗಿ ಕೆಲಸದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳ ಪ್ರಯತ್ನಗಳನ್ನು ಶ್ಲಾಘಿಸಲು ವೈಯಕ್ತಿಕಗೊಳಿಸಿದ ಉಡುಗೊರೆಗಳು, ವೆಲ್‌ನೆಸ್ ಹ್ಯಾಂಪರ್‌ಗಳು, ಪರಿಸರ ಸ್ನೇಹಿ ಉತ್ಪನ್ನ, ಪ್ರೀಮಿಯಂ ಸ್ಟೇಷನರಿ, ಸ್ವಯಂ-ಆರೈಕೆ ಕಿಟ್‌ಗಳನ್ನು ನೀಡಬಹುದು.
  • ಗೇಮ್ಸ್ ಆಯೋಜಿಸಿ : ಮಹಿಳಾದಿನದಂದು ಮಹಿಳೆಯಾರಿಗಾಗಿ ಕಥೆ ಹೇಳುವ ಸ್ಪರ್ಧೆ, ಯಶಸ್ಸನ್ನು ಹಂಚಿಕೊಳ್ಳುವ ಕಾರ್ಯಕ್ರಮಗಳು, ಗೇಮ್ಸ್ ಇನ್ನಿತ್ತರ ಚಟುವಟಿಕೆಗಳನ್ನು ಆಯೋಜಿಸಬಹುದು. ಮಹಿಳಾ ದಿನದ ಥೀಮ್‌ಗೆ ಅನುಗುಣವಾಗಿ ಮಹಿಳಾ ದಿನವನ್ನು ಇನ್ನಷ್ಟು ರೋಮಾಂಚನಕಾರಿಯಾಗುವಂತೆ ಚಟುವಟಿಕೆ ಆಯೋಜಿಸುವುದು ಉತ್ತಮ.
  • ಟ್ರಿಪ್ ಆಯೋಜಿಸಿ :ಈ ವರ್ಷದ ಮಹಿಳಾ ದಿನಾಚರಣೆಯೂ ವಾರಾಂತ್ಯದಲ್ಲಿ ಬರುತ್ತಿದ್ದು, ಹೀಗಾಗಿ ಟ್ರಿಪ್ ಆಯೋಜಿಸುವ ಮೂಲಕ ಈ ದಿನ ಆಚರಿಸಬಹುದು. ಮಹಿಳಾ ಉದ್ಯೋಗಿಗಳಿಗಾಗಿ ವಾರಾಂತ್ಯದ ಟ್ರಿಪ್ ಆಯೋಜಿಸಿ ಒಂದು ದಿನವನ್ನು ಪ್ರವಾಸಿ ತಾಣಗಳನ್ನು ವೀಕ್ಷಿಸುವ ಮೂಲಕ ಕಳೆಯಬಹುದು. ಇದು ಬಾಂಧವ್ಯ ಹೆಚ್ಚಿಸುವುದಲ್ಲದೆ ಮನಸ್ಸನ್ನು ರಿಲ್ಯಾಕ್ಸ್ ಆಗಿಸುತ್ತದೆ.
  • ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸಿ : ಈಗಿನ ಕಾಲದಲ್ಲಿ ಕೌಶಲ್ಯವಿದ್ದರೆ ಕೆಲಸದ ಸ್ಥಳಗಳಲ್ಲಿ ಮನ್ನಣೆ ಹೆಚ್ಚು. ಹೀಗಾಗಿ ಮಹಿಳಾ ಉದ್ಯೋಗಿಗಳನ್ನು ಕೌಶಲ್ಯದಿಂದ ಸಜ್ಜುಗೊಳಿಸಲು, ನೀವು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿಬಹುದು. ಈ ತರಬೇತಿಯೂ ಕಅವರು ಮಾಡುವ ಕೆಲಸಕ್ಕೆ ಸಂಬಂಧಿಸಿದ್ದಾಗಿರಲಿ. ಒಳ್ಳೆಯ ಈ ಕೌಶಲ್ಯ ತರಬೇತಿ ನೀಡುವ ವ್ಯಕ್ತಿಗಳನ್ನು ಆಹ್ವಾನಿಸಿದರೆ ಈ ಕಾರ್ಯಕ್ರಮಕ್ಕೆ ಮಾಡಿದ್ದಕ್ಕೂ ಸಾರ್ಥಕವೆನಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್
ತಮ್ಮ ಭಾಷಣದಲ್ಲಿ ಶಿವಕುಮಾರ್​ರನ್ನು ಡೈನಾಮಿಕ್ ಲೀಡರ್ ಎಂದ ಪವನ್ ಕಲ್ಯಾಣ್