Personality Test: ನಿಮ್ಮ ಕಣ್ಣಿನ ಆಕಾರ ಯಾವುದು? ಸಣ್ಣ ಕಣ್ಣುಗಳು ನಿಮ್ಮದಾಗಿದ್ರೆ ನೀವು ಅತೀ ಬುದ್ಧಿವಂತರು
ನಮ್ಮ ಕಣ್ಣುಗಳು ಮಾತನಾಡುತ್ತವೆ, ಹೌದು, ವ್ಯಕ್ತಿಗೆ ನೋವಾದಾಗ, ಸಿಟ್ಟು ಬಂದಾಗ, ಖುಷಿಯಾದಾಗ ಹೀಗೆ ನಾನಾ ಭಾವನೆಗಳನ್ನು ಈ ಕಣ್ಣುಗಳು ಹೇಳುತ್ತವೆ. ಯಾವುದೇ ವ್ಯಕ್ತಿಯ ಕಣ್ಣುಗಳನ್ನು ಎಚ್ಚರಿಕೆಯಿಂದ ನೋಡುವುದರಿಂದ, ಅವನ ಮನಸ್ಸಿನ ಆಂತರಿಕ ಸ್ಥಿತಿಯನ್ನು ತಅರಿತು ಕೊಳ್ಳಬಹುದು. ಹೀಗಾಗಿ ಎಷ್ಟೋ ಸಲ ಮನಸ್ಸಿನಲ್ಲಿರುವುದನ್ನು ಕಣ್ಣಿನಿಂದಲೇ ಅರ್ಥೈಸಿಕೊಳ್ಳಬಹುದು. ಕಣ್ಣಿನ ಆಕಾರದಿಂದಲೇ ವ್ಯಕ್ತಿಯ ವ್ಯಕ್ತಿತ್ವ ಹೇಗೆಂದು ತಿಳಿಯಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

ಕಣ್ಣಿಲ್ಲದೇ ಹೋದರೆ ಹೇಗಿರಬಹುದು ಎಂದು ಒಮ್ಮೆ ಊಹಿಸಿ. ಒಂದು ಕ್ಷಣ ಊಹಿಸಿಕೊಂಡರೆ ಮೈ ಜುಮ್ಮ್ ಎನ್ನುತ್ತದೆ. ಪ್ರಪಂಚವನ್ನು ನೋಡಲು ಸಹಾಯ ಮಾಡುವ ಅಂಗ ಈ ಕಣ್ಣು. ದೇಹದ ಅತ್ಯಂತ ಪ್ರಮುಖ ಅಂಗ ಇದಾಗಿದ್ದು, ಕಣ್ಣಿನಿಂದಲೇ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತದೆ. ಮನಸ್ಸಿನಲ್ಲಿರುವ ಅದೆಷ್ಟೋ ವಿಚಾರಗಳನ್ನು ಕಣ್ಣುಗಳು ಹೇಳುತ್ತವೆ. ನೀವು ಗಮನಿಸಿರಬಹುದು ಒಬ್ಬೊಬ್ಬರ ಕಣ್ಣು ಒಂದೊಂದು ರೀತಿಯ ಆಕಾರ ಹೊಂದಿರುತ್ತದೆ. ಈ ಕಣ್ಣಿನ ಆಕಾರವೇ ವ್ಯಕ್ತಿಯ ಗುಣಸ್ವಭಾವ ತಿಳಿಸುತ್ತದೆ. ಕೆಲವರ ಕಣ್ಣು ಚಿಕ್ಕದಾಗಿದ್ದರೆ, ಇನ್ನು ಕೆಲವರು ದೊಡ್ಡದಾದ ಅಗಲವಾದ ಕಣ್ಣನ್ನು ಹೊಂದಿರುತ್ತಾರೆ. ಇನ್ನು ಕೆಲವರ ಕಣ್ಣಿನ ಆಕಾರ ದುಂಡಗೆ ಇರುತ್ತದೆ. ಹಾಗಾದ್ರೆ ನಿಮ್ಮ ಕಣ್ಣು ಯಾವ ಆಕಾರದಲ್ಲಿದೆ ಎಂದು ಒಮ್ಮೆ ಗಮನಿಸಿ, ನಿಗೂಢ ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು.
- ದೊಡ್ಡ ಮತ್ತು ಅಗಲವಾದ ಕಣ್ಣುಗಳು : ದೊಡ್ಡ ಹಾಗೂ ಅಗಲವಾದ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ವಿಶಾಲವಾದ ಮನಸ್ಸಿನವರು. ವಿಭಿನ್ನ ದೃಷ್ಟಿಕೋನ ಹೊಂದಿದ್ದು, ಎಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧವಿರುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರಲ್ಲಿ ಈ ವ್ಯಕ್ತಿಗಳು ಸದಾ ಮುಂದು. ಸಂಬಂಧದಲ್ಲಿ ಪ್ರಾಮಾಣಿಕರಾಗಿದ್ದು, ಅತಿಯಾದ ಕಾಳಜಿ ತೋರಿಸುತ್ತಾರೆ. ಜೀವನದಲ್ಲಿ ಯಶಸ್ಸು ಕಾಣುವ ವ್ಯಕ್ತಿಗಳಾಗಿದ್ದು, ಯಾವುದೇ ವ್ಯವಹಾರಕ್ಕೆ ಕೈ ಹಾಕಿದರೂ ಲಾಭ ಪಡೆಯುತ್ತಾರೆ.
- ಸಣ್ಣ ಕಣ್ಣುಗಳು: ಚಿಕ್ಕದಾದ ಕಣ್ಣು ಹೊಂದಿರುವ ಜನರು ಭಾವಜೀವಿಗಳು. ಯಾವುದೇ ಕೆಲಸಕ್ಕೆ ಕೈ ಹಾಕಿದರೂ ನಿಗದಿತ ಸಮಯದೊಳಗೆ ಮಾಡಿ ಮುಗಿಸುವ ಸಾಮರ್ಥ್ಯ ಈ ವ್ಯಕ್ತಿಗಳಲ್ಲಿ ಇರುತ್ತದೆ. ಬುದ್ಧಿವಂತರಾಗಿದ್ದು, ಈ ಗುಣದಿಂದಲೇ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಬೇರೆಯವರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ನೂರು ಬಾರಿ ಯೋಚಿಸುತ್ತಾರೆ.
- ಬಾದಾಮಿ ಆಕಾರದ ಕಣ್ಣುಗಳು: ಮಧ್ಯದಲ್ಲಿ ಸ್ವಲ್ಪ ಅಗಲವಾಗಿದ್ದು ಬಾದಾಮಿಯಂತೆ ಎರಡೂ ತುದಿಗಳಲ್ಲಿ ಸಮವಾಗಿದರೆ ಈ ವ್ಯಕ್ತಿಗಳು ಎಲ್ಲಾ ವಿಷಯದಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ. ಜೀವನದಲ್ಲಿ ಏನೇ ಎದುರಾದರೂ ಎಲ್ಲವನ್ನು ಧೈರ್ಯವಾಗಿ ಎದುರಿಸಲು ಸಮರ್ಥರಾಗಿರುತ್ತಾರೆ. ಇವರ ಕಣ್ಣುಗಳೇ ಇವರ ಸೌಂದರ್ಯಕ್ಕೆ ಮೆರಗು ನೀಡುತ್ತದೆ. ಈ ಜನರು ಮನಸ್ಸಿನಿಂದ ತುಂಬಾನೇ ಒಳ್ಳೆಯವರು, ಎಲ್ಲರನ್ನು ಕಣ್ಣು ಮುಚ್ಚಿ ನಂಬುವ ಕಾರಣ ಮೋಸ ಹೋಗುವ ಸಾಧ್ಯತೆಯೇ ಹೆಚ್ಚು
- ಕಣ್ಣುಗಳ ನಡುವೆ ಅಂತರವಿದ್ದರೆ : ಕೆಲವರ ಎರಡು ಕಣ್ಣುಗಳ ನಡುವೆ ಹೆಚ್ಚು ಅಂತರವಿದ್ದರೆ ಇದು ಮಂಗಳಕರ ಸಂಕೇತವಾಗಿದೆ. ಈ ರೀತಿ ಅಂತರ ಹೊಂದಿರುವ ಜಾಣರು ಸದಾ ಉತ್ಸುಕರಾಗಿದ್ದು, ಹೊಸದ್ದನ್ನು ಮಾಡಲು ಪ್ರಯತ್ನಿಸುತ್ತಾರೆ. ತನ್ನ ಸುತ್ತಮುತ್ತಲಿನವರೊಂದಿಗೆ ಬೆರೆಯುವುದರೊಂದಿಗೆ ಎಲ್ಲರಿಗೂ ಬೇಕಾದ ವ್ಯಕ್ತಿಗಳಾಗುತ್ತಾರೆ.
- ದುಂಡಗಿನ ಕಣ್ಣುಗಳು : ಎರಡು ಕಣ್ಣುಗಳು ದುಂಡಗೆ ಇದ್ದರೆ ತಾವು ಸಂತೋಷವಾಗಿದ್ದು, ತನ್ನ ಸುತ್ತಮುತ್ತ ಖುಷಿಯನ್ನು ಹರಡಲು ಇಷ್ಟ ಪಡುತ್ತಾರೆ. ಸೃಜನ ಶೀಲಾ ವ್ಯಕ್ತಿಗಳಾಗಿದ್ದು, ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದೆಂದರೆ ಈ ವ್ಯಕ್ತಿಗಳಿಗೆ ಇಷ್ಟ. ಅಪ್ರಾಯೋಗಿಕ ಆಲೋಚನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಈ ವ್ಯಕ್ತಿಗಳನ್ನು ನೂರಾರು ಭಾವನೆಗಳು ಕಾಡುತ್ತಿರುತ್ತದೆ. ಎಲ್ಲರನ್ನು ಪ್ರೀತಿಸುವ ಗುಣವಿದ್ದು, ತಮ್ಮ ವಿಭಿನ್ನ ವ್ಯಕ್ತಿತ್ವದಿಂದಲೇ ಎಲ್ಲರ ಗಮನವನ್ನು ಸೆಳೆಯುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ