
International Women's Day
ಪ್ರತಿ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಸ್ಮರಿಸುವ ದಿನವಾಗಿದ್ದು, ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಲಾಗುತ್ತದೆ. ಮಾರ್ಚ್ 8, 1975 ರಂದು, ಅಂತರಾಷ್ಟ್ರೀಯ ಮಹಿಳಾ ವರ್ಷದಲ್ಲಿ, ವಿಶ್ವಸಂಸ್ಥೆಯು ತನ್ನ ಮೊದಲ ಅಧಿಕೃತ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುವ ವಿಶ್ವ ಮಹಿಳಾ ದಿನದ ಲೇಖನಗಳು ಇಲ್ಲಿದೆ.
ಲಖ್ಪತಿ ದೀದಿ ಫಲಾನುಭವಿಗಳೊಂದಿಗೆ ಮೋದಿ ವಿಶೇಷ ಸಂವಾದ: ಟಿಪ್ಪಣಿ ಮಾಡಿಕೊಂಡ ಪ್ರಧಾನಿ
ಮಾರ್ಚ್ 8ರಂದು, ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರು ಲಖ್ಪತಿ ದೀದಿ ಯೋಜನೆಯ ಫಲಾನುಭವಿ ಮಹಿಳೆಯರೊಂದಿಗೆ ವಿಶೇಷ ಸಂವಾದ ನಡೆಸಿದರು. ಯೋಜನೆಯ ಯಶಸ್ಸು ಮತ್ತು ಭವಿಷ್ಯದ ಗುರಿಗಳ ಬಗ್ಗೆ ಚರ್ಚಿಸಲಾಯಿತು. ಮಹಿಳೆಯರು ತಮ್ಮ ಯಶಸ್ಸಿನ ಕಥೆಗಳನ್ನು ಹಂಚಿಕೊಂಡರು. ವ್ಯಾಪಾರ ವಿಸ್ತರಣೆ ಮತ್ತು ಆನ್‌ಲೈನ್ ಮಾರುಕಟ್ಟೆಗೆ ಬಗ್ಗೆ ಪ್ರಧಾನಿ ಮೋದಿ ಸಲಹೆ ನೀಡಿದರು.
- Web contact
- Updated on: Mar 8, 2025
- 8:14 pm
ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ: ಇವರೇ ನೋಡಿ ಶಾಂತ ಕ್ರಾಂತಿಕಾರಿ ಮಹಿಳಾ ನಾಯಕಿ
ಭಾನುಮತಿ ನರಸಿಂಹನ್ ಅವರು ಭಾರತದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದಾರೆ. ನಕ್ಸಲ್ ಪ್ರದೇಶಗಳು ಸೇರಿದಂತೆ ಸವಾಲಿನ ಪರಿಸರದಲ್ಲಿರುವ ಮಕ್ಕಳಿಗೆ ಶಾಲೆಗಳನ್ನು ಸ್ಥಾಪಿಸಿ, ಅವರ ಜೀವನವನ್ನು ಬದಲಾಯಿಸುತ್ತಿದ್ದಾರೆ. ಶೈಕ್ಷಣಿಕ ಜ್ಞಾನದ ಜೊತೆಗೆ, ಧ್ಯಾನ ಮತ್ತು ಉಸಿರಾಟ ತಂತ್ರಗಳ ಮೂಲಕ ಭಾವನಾತ್ಮಕ ಬಲವರ್ಧನೆಯ ಮೇಲೆ ಒತ್ತು ನೀಡಲಾಗುತ್ತದೆ.
- Web contact
- Updated on: Mar 8, 2025
- 7:21 pm
Women’s Day: ಹೇಗಿದೆ ನೋಡಿ ಟಿವಿ9 ಕಚೇರಿ ಮಹಿಳಾ ದಿನಾಚರಣೆ: ಇಲ್ಲಿವೆ ಫೋಟೋಸ್
ಟಿವಿ9 ಕನ್ನಡ ವಾಹಿನಿಯಲ್ಲಿ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು ವ್ಯವಸ್ಥಾಪಕ ಸಂಪಾದಕ ರಾಹುಲ್ ಚೌಧರಿ ಕಾರ್ಯಕ್ರಮ ಉದ್ಘಾಟಿಸಿದರು. ವಾಹಿನಿಯ ಎಲ್ಲಾ ಮಹಿಳಾ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹಿರಿಯ ಆಂಕರ್ ರಂಗನಾಥ್ ಭಾರದ್ವಾಜ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- Web contact
- Updated on: Mar 8, 2025
- 6:52 pm
International Womens Day 2025: ಮಾರ್ಚ್ 8 ರಂದೇ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುವುದು ಏಕೆ?
ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಾದ ದಿನ. ಪ್ರತಿ ವರ್ಷ ಈ ದಿನದಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಲಿಂಗ ಸಮಾನತೆ ಹಾಗೂ ಜಗತ್ತಿನಾದ್ಯಂತ ಮಹಿಳೆಯರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. ಹೌದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆ ಮಾಡಿದ ಮಹಿಳೆಯರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತದೆ. ಹಾಗಾದ್ರೆ ಮಹಿಳಾ ದಿನಾಚರಣೆ ಆರಂಭವಾದದ್ದು ಯಾವಾಗ? ಈ ದಿನದ ಇತಿಹಾಸ ಹಾಗೂ ಮಹತ್ವವೇನು? ಎನ್ನುವ ಮಾಹಿತಿ ಇಲ್ಲಿದೆ.
- Sainandha P
- Updated on: Mar 7, 2025
- 3:44 pm
ಮಹಿಳಾ ದಿನಾಚರಣೆಯಂದು ಗುಜರಾತ್‌ಗೆ ಮೋದಿ: ‘ಲಖ್‌ಪತಿ ದೀದಿ’ ಕಾರ್ಯಕ್ರಮದಲ್ಲಿ ಭಾಗಿ
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಗುಜರಾತಿನಲ್ಲಿ "ಲಖ್ಪತಿ ದೀದಿ" ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ 1.1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ. ಇನ್ನು ಈ ಕಾರ್ಯಕ್ರಮದ ಸಂಪೂರ್ಣ ವ್ಯವಸ್ಥೆ ಮತ್ತು ಜವಾಬ್ದಾರಿ ಮಹಿಳಾ ಪೊಲೀಸರು ನಿರ್ವಹಿಸುತ್ತಿರುವುದು ವಿಶೇಷ.
- Web contact
- Updated on: Mar 6, 2025
- 10:53 pm
Women’s Day 2025: ಮಹಿಳಾ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಸಂದೇಶಗಳು
ಮಾರ್ಚ್ 8 ಮಹಿಳೆಯರಿಗೆ ಮೀಸಲಾಗಿರುವ ದಿನ. ಪ್ರತಿ ವರ್ಷ ಮಾರ್ಚ್ 8 ರಂದು ಭಾರತ ಮಾತ್ರವಲ್ಲದೇ, ವಿಶ್ವದಾದಂತ್ಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಹಿಳೆಯರ ಕೊಡುಗೆಗಳನ್ನು ಹಾಗೂ ಅವರು ಮಾಡಿದ ಸಾಧನೆಗಳನ್ನು ಗುರುತಿಸಿ ಗೌರವಿಸುವ ದಿನವಾಗಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಕುಟುಂಬಕ್ಕೆ ಸಾಕಷ್ಟು ತ್ಯಾಗಗಳನ್ನು ಮಾಡಿರುತ್ತಾಳೆ. ಅವರ ತ್ಯಾಗದ ಬಗ್ಗೆ ಯಾರು ಕೂಡ ಮಾತನಾಡುವುದೇ ಇಲ್ಲ. ತನ್ನ ಕುಟುಂಬ ಹಾಗೂ ಸಂಸಾರಕ್ಕಾಗಿ ಬದುಕನ್ನು ಸವೆಸುವ ಹೆಣ್ಣು ಮಕ್ಕಳಿಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶಗಳು.
- Sainandha P
- Updated on: Mar 6, 2025
- 11:23 am
Women’s Day 2025: ಆಫೀಸಿನಲ್ಲಿ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಪ್ಲ್ಯಾನ್ ಮಾಡಿಕೊಂಡಿದ್ದೀರಾ? ಇಲ್ಲಿದೆ ಸಿಂಪಲ್ ಟಿಪ್ಸ್
ಮಾರ್ಚ್ 8 ಮಹಿಳೆಯರಿಗಾಗಿ ಮೀಸಲಿಡುವ ದಿನ. ಪ್ರತಿ ವರ್ಷ ಈ ದಿನದಂದು ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನ (International Womens Day) ಆಚರಿಸಲಾಗುತ್ತದೆ. ಸಮಾಜದ ಅಭಿವೃದ್ದಿಗೆ ಪುರುಷರೊಂದಿಗೆ ಮಹಿಳೆಯರು ಸಹ ಸಮಾನವಾಗಿ ಕೊಡುಗೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ, ಕುಟುಂಬ, ಮನೆ ಹಾಗೂ ವೃತ್ತಿ ಜೀವನವನ್ನು ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ ಈ ಹೆಣ್ಣು. ಹೀಗಾಗಿ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಲು ಇದೊಂದು ಒಳ್ಳೆಯ ಅವಕಾಶವಾಗಿದೆ. ನಿಮ್ಮ ಆಫೀಸಿನಲ್ಲಿ ಮಹಿಳಾ ಉದ್ಯೋಗಿಗಳಿಗಿದ್ದರೆ ವಿಶೇಷ ದಿನವನ್ನು ಈ ರೀತಿ ಸೆಲೆಬ್ರೇಟ್ ಮಾಡಿ ಖುಷಿಪಡಿಸಬಹುದು. ಆಫೀಸಿನಲ್ಲಿ ಮಹಿಳಾ ದಿನ ಆಚರಿಸಲು ಇಲ್ಲಿದೆ ಟಿಪ್ಸ್.
- Sainandha P
- Updated on: Mar 5, 2025
- 5:08 pm
Women’s Day 2025: ಉದ್ಯೋಗಸ್ಥ ಮಹಿಳೆಯರೇ, ನಿಮ್ಮ ಹಣಕಾಸು ನಿರ್ವಹಣೆ ಹೀಗಿದ್ದರೆ ಬೆಸ್ಟ್
ಈಗಿನ ಕಾಲದಲ್ಲಿ ಎಷ್ಟು ದುಡಿದರೂ ಕೂಡ ಸಾಲುವುದಿಲ್ಲ. ಗಂಡ ಹೆಂಡಿರು ಇಬ್ಬರೂ ದುಡಿದರೂ ಕೂಡ ದುಬಾರಿ ದುನಿಯಾದಲ್ಲಿ ಮನೆ ಹಾಗೂ ಸಂಸಾರ ನಿರ್ವಹಣೆಗೆ ಅಷ್ಟು ಹಣವನ್ನು ವಿನಿಯೋಗಿಸಬೇಕಾಗುತ್ತದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಣಕಾಸು ನಿರ್ವಹಣೆ ಮಾಡುವುದು ಸವಾಲಿನ ಕೆಲಸವೇ ಆಗಿರಬಹುದು. ಆದರೆ ತಿಂಗಳ ಸಂಬಳವನ್ನು ಸರಿಯಾಗಿ ವಿನಿಯೋಗಿಸುವುದು ಆರ್ಥಿಕವಾಗಿ ಸದೃಢರಾಗಿರುವಂತೆ ಮಾಡುತ್ತದೆ. ಉದ್ಯೋಗದಲ್ಲಿರು ಮಹಿಳೆಯರಿಗೆ ತಮ್ಮ ಆರ್ಥಿಕ ಭವಿಷ್ಯದ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡುವ ಕೆಲವು ಆರ್ಥಿಕ ಸಲಹೆಗಳು ಇಲ್ಲಿವೆ.
- Sainandha P
- Updated on: Mar 5, 2025
- 3:16 pm
International Women’s Day : ಅಮ್ಮಂದಿರೇ ಹೆರಿಗೆ ಬಳಿಕ ನಿಮ್ಮ ಆರೋಗ್ಯವನ್ನು ಮರೆಯಬೇಡಿ, ಇಲ್ಲಿದೆ ಡಾ. ಲಿನ್‌ಸೆಲ್ ಟಿ ಸಲಹೆ
ಹೆರಿಗೆಯ ನಂತರ ತಾಯಿಯ ದೇಹ ಮತ್ತು ಮನಸ್ಸು ಹಲವು ಬದಲಾವಣೆಗಳನ್ನು ಎದುರಿಸುತ್ತದೆ. ಲೋಕಿಯಾ, ಹಾಲುಣಿಸುವ ಸಮಸ್ಯೆ, ಪೆರಿನಿಯಲ್ ನೋವು, ಮಲಬದ್ದತೆ ಮತ್ತು ಕೂದಲು ಉದುರುವಿಕೆ ಸಾಮಾನ್ಯ ಸಮಸ್ಯೆಗಳಾಗಿವೆ. ಪ್ರಸವಾನಂತರದ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳ ಬಗ್ಗೆಯೂ ಅರಿವು ಮುಖ್ಯ. ತಾಯಿ ಮತ್ತು ಕುಟುಂಬದ ಸದಸ್ಯರು ಪರಸ್ಪರ ಬೆಂಬಲಿಸುವುದು ಮತ್ತು ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ.
- Sainandha P
- Updated on: Mar 4, 2025
- 4:02 pm
ನಮೋ ಆ್ಯಪ್ ಮೂಲಕ ಮಹಿಳೆಯರ ಸ್ಫೂರ್ತಿದಾಯಕ ಪಯಣ ಹಂಚಿಕೊಳ್ಳುವ ಸುವರ್ಣಾವಕಾಶ
ಮೈಲಿಗಲ್ಲುಗಳನ್ನು ಸಾಧಿಸಿದ, ನಾವೀನ್ಯತೆಗಳನ್ನು ಮುನ್ನಡೆಸಿದ ಅಥವಾ ಅರ್ಥಪೂರ್ಣ ಪರಿಣಾಮವನ್ನು ಬೀರಿದ ಮಹಿಳೆಯರು ಈಗ ಈ ವೇದಿಕೆಯ ಮೂಲಕ ತಮ್ಮ ಕಥೆಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಒಂದು ಅನನ್ಯ ಅವಕಾಶವನ್ನು ಹೊಂದಿದ್ದಾರೆ. ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನದಂದು ನಾವು ಜೀವನದ ಎಲ್ಲಾ ಹಂತಗಳ ಮಹಿಳೆಯರ ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಸಾಧನೆಗಳನ್ನು ಆಚರಿಸುತ್ತೇವೆ. ವಿಶೇಷ ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪೂರ್ತಿದಾಯಕ ಉಪಕ್ರಮವನ್ನು ಘೋಷಿಸಿದರು. ಅವರು ತಮ್ಮ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಅಸಾಧಾರಣ ಮಹಿಳೆಯರಿಗೆ ಒಂದು ದಿನಕ್ಕಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮುಡಿಪಾಗಿಡಲಿದ್ದಾರೆ.
- Sushma Chakre
- Updated on: Mar 3, 2025
- 10:08 pm