- Kannada News Photo gallery bangaluru: International Women's Day at TV9 Kannada: here is the photos, taja suddi
Women’s Day: ಹೇಗಿದೆ ನೋಡಿ ಟಿವಿ9 ಕಚೇರಿ ಮಹಿಳಾ ದಿನಾಚರಣೆ: ಇಲ್ಲಿವೆ ಫೋಟೋಸ್
ಟಿವಿ9 ಕನ್ನಡ ವಾಹಿನಿಯಲ್ಲಿ ಇಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು ವ್ಯವಸ್ಥಾಪಕ ಸಂಪಾದಕ ರಾಹುಲ್ ಚೌಧರಿ ಕಾರ್ಯಕ್ರಮ ಉದ್ಘಾಟಿಸಿದರು. ವಾಹಿನಿಯ ಎಲ್ಲಾ ಮಹಿಳಾ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹಿರಿಯ ಆಂಕರ್ ರಂಗನಾಥ್ ಭಾರದ್ವಾಜ್ ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Updated on: Mar 08, 2025 | 6:52 PM

ತಾಯಿಯಾಗಿ, ಸತಿಯಾಗಿ, ಅಕ್ಕ-ತಂಗಿಯಾಗಿ, ಗೆಳತಿ, ಗುರುವಾಗಿ ನಾನಾ ಪಾತ್ರವಹಿಸುವ ಮಹಿಳೆಯರಿಗೆ ಸರಿಸಾಟಿ ಯಾರು ಇಲ್ಲ. ಇತಂಹ ಮಹಿಳೆಯರ ದಿನಾಚರಣೆ ಇಂದು ಎಲ್ಲೆಡೆ ವಿಭಿನ್ನವಾಗಿ ಆಚರಿಸಲಾಗಿದೆ. ಅದೇ ರೀತಿಯಾಗಿ ಇತ್ತ ಟಿವಿ9 ಕನ್ನಡ ಸುದ್ದಿ ವಾಹಿನಿ ಕಚೇರಿಯಲ್ಲಿ ಕೂಡ ಅದ್ಧೂರಿಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗಿದೆ.

ಟಿವಿ9 ಕನ್ನಡ ವಾಹಿನಿಯ ವ್ಯವಸ್ಥಾಪಕ ಸಂಪಾದಕರಾದ ರಾಹುಲ್ ಚೌಧರಿ ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಟಿವಿ9 ಕನ್ನಡ ವಾಹಿನಿ ಕಚೇರಿಯ ಎಲ್ಲಾ ನಾರಿಮಣಿಗಳು ಕೇಕ್ ಕತ್ತರಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನವನ್ನ ಆಚರಿಸಿದರು. ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ರಾಹುಲ್ ಚೌಧರಿ ಅವರು ಟಿವಿ9 ಕನ್ನಡ ವಾಹಿನಿ ಕಚೇರಿಯ ಎಲ್ಲಾ ಮಹಿಳೆಯರಿಗೆ ಶುಭ ಕೋರಿದರು.

ಇನ್ನು ಕಾರ್ಯಕ್ರಮದಲ್ಲಿ ಹಿರಿಯ ಆ್ಯಂಕರ್ ರಂಗನಾಥ್ ಭಾರದ್ವಾಜ್ ಮತ್ತು ತಾಂತ್ರಿಕ ಮುಖ್ಯಸ್ಥ ಶ್ರೀಕಾಂತ್ ಮಾಗಂಟಿ ಸೇರಿದಂತೆ ಇತರರು ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಟಿವಿ9 ಕನ್ನಡ ವಾಹಿನಿಯ ಮಹಿಳಾ ಮಣಿಗಳು ಕಂಡದ್ದು ಹೀಗೆ.
























