Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಸರ್ಗಿಕ ಹೂವಿನಿಂದ ಬಟ್ಟೆಗಳಿಗೆ ಹೊಸ ವಿನ್ಯಾಸ ನೀಡಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ ಭುವನೇಶ್ವರಿ

ಶತಮಾನಗಳಿಂದ ಫ್ಯಾಷನ್ ಉದ್ಯಮದಲ್ಲಿ ಹೂವಿನ ವಿನ್ಯಾಸಗಳು ಜನಪ್ರಿಯವಾಗಿದೆ. ತಂತ್ರಜ್ಞಾನದ ಪ್ರಗತಿ ಹಾಗೂ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಬಟ್ಟೆಗಳ ಮೇಲಿನ ಹೂವಿನ ವಿನ್ಯಾಸಗಳ ಬಳಕೆಯು ವಿಕಸನಗೊಂಡಿದೆ. ಇದೀಗ ಬಟ್ಟೆಯ ಮೇಲೆ ಹೂವುಗಳ ಸಾರವನ್ನು ಸೆರೆ ಹಿಡಿಯುವ ಮೂಲಕ ನೆನಪುಗಳನ್ನು ಶಾಶ್ವತವಾಗಿ ಉಳಿಯುವಂತೆ ಮಾಡುತ್ತಿದ್ದಾರೆ ವಿನ್ಯಾಸಕಿ ಭುವನೇಶ್ವರಿ ಎಂ. ಹೌದು, ನೈಸರ್ಗಿಕವಾದ ಹೂವನ್ನು ಬಳಸಿ ಇಕೋ ಪ್ರಿಂಟಿಂಗ್ ಮೂಲಕ ಬಟ್ಟೆಗಳಿಗೆ ಹೊಸ ವಿನ್ಯಾಸ ನೀಡುತ್ತಿದ್ದಾರೆ. ಇಂಜಿನಿಯರ್ ಪದವಿದ ಇವರು ವಿನ್ಯಾಸಕಿಯಾಗಿ ಯಶಸ್ಸು ಕಂಡದ್ದು ಹೇಗೆ? ಇವರ ಯಶಸ್ಸಿನ ಹಾದಿ ಹೇಗಿತ್ತು? ಎನ್ನುವ ಮಾಹಿತಿ ಇಲ್ಲಿದೆ.

ನೈಸರ್ಗಿಕ ಹೂವಿನಿಂದ ಬಟ್ಟೆಗಳಿಗೆ ಹೊಸ ವಿನ್ಯಾಸ ನೀಡಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ ಭುವನೇಶ್ವರಿ
ವೈರಲ್​ ವಿಡಿಯೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 08, 2025 | 5:28 PM

ಪ್ರತಿದಿನ, ಪ್ರತಿಕ್ಷಣ ಹೊಸತನಕ್ಕೆ ತೆರೆದುಕೊಳ್ಳುವ ಫ್ಯಾಷನ್ ಕ್ಷೇತ್ರದಲ್ಲಿನ ಸಣ್ಣಪುಟ್ಟ ಬದಲಾವಣೆಗಳೂ ಫ್ಯಾಷನ್‌ ಪ್ರಿಯರ ಮನಗೆಲ್ಲುತ್ತವೆ. ಅನೇಕ ವಿನ್ಯಾಸಕರು ಸುಂದರವಾದ ಮತ್ತು ಪರಿಸರ ಸ್ನೇಹಿ ಹೂವಿನ ವಿನ್ಯಾಸ (Flower Designs) ಗಳನ್ನು ರಚಿಸಲು ಹೂವುಗಳು, ಸಸ್ಯಗಳು ಮತ್ತು ಇತರ ನೈಸರ್ಗಿಕ ಮೂಲಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳತ್ತ ಮುಖ ಮಾಡುತ್ತಿದ್ದಾರೆ. ಈ ರೀತಿ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿ ಕಾಣುತ್ತಿರುವವರಲ್ಲಿ ಇನ್ಫೋಸಿಸ್ ನ ಮಾಜಿ ತರಬೇತುದಾರ ಹಾಗೂ ವಿನ್ಯಾಸಕಿ ಭುವನೇಶ್ವರಿ ಎಂ (Bhuvaneshwari M) ಕೂಡ ಒಬ್ಬರು.

ಮದುವೆಯಲ್ಲಿ ಬಳಸಲಾಗುವ ಹೂವನ್ನು ಬಳಸಿ ನೆನಪುಗಳನ್ನು ಸ್ಮರಣೀಯವಾಗಿಸುವ ಮೂಲಕ ಬಟ್ಟೆಗಳಿಗೆ ಹೊಸ ರಂಗು ನೀಡಿ ಫ್ಯಾಷನ್ ಆಗಿ ಪರಿವರ್ತಿಸುತ್ತಿದ್ದಾರೆ. 2024 ರ ತಮ್ಮ ‘ಹೌಸ್ ಆಫ್ ಮುರಾಹ್’ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ, ಬಟ್ಟೆಯ ಮೇಲೆ ಸುಂದರವಾಗಿಸಲು ನೈಸರ್ಗಿಕ ಹೂವಿನ ಸಾರವನ್ನು ಬಳಸಿ ಗ್ರಾಹಕರ ಅಪರೂಪದ ನೆನಪುಗಳನ್ನು ಶಾಶ್ವತವಾಗಿ ಉಳಿಸುತ್ತಿದ್ದಾರೆ. ಇವರಿಗೆ ಸಣ್ಣ ವಯಸ್ಸಿನಿಂದಲೂ ಫ್ಯಾಷನ್ ಡಿಸೈನರ್ ಆಗಬೇಕೆನ್ನುವ ಕನಸಿತ್ತು. ಆದರೆ ಮನೆಯವರ ನಿರೀಕ್ಷೆಯ ಮೇರೆಗೆ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಪದವಿ ಪಡೆಯಲು ಕಾಲೇಜು ಸೇರಿಕೊಂಡರು. ಹೀಗಿರುವಾಗ ಇವರ ಬದುಕಿಗೆ ಹೊಸ ಅರ್ಥ ಬರೆದವರೇ ಸೂರ್ಯ ಮುರುಳಿ ಹಾಗೂ ಅಪರ್ಣ. ಈ ಅಪರ್ಣ ಅವರೂ ನೀಡಿದ ಬೆಂಬಲವು ತಮ್ಮದೇ ಹಾದಿಯನ್ನು ರೂಪಿಸಿಕೊಳ್ಳಲು ಧೈರ್ಯ ತುಂಬಿತಂತೆ.

ಇದನ್ನೂ ಓದಿ
Image
ಮೈಕ್ರೋವೇವ್ ಗಳ ಬಳಕೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
Image
ಹೃದಯಾಘಾತ ಆಗುವ 30 ದಿನಗಳ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ
Image
ಈ ತರಕಾರಿ ಕೊಲೆಸ್ಟ್ರಾಲ್​​ಗೆ ಬ್ರಹ್ಮಾಸ್ತ್ರ
Image
ಪ್ರೈವೇಟ್ ಪಾರ್ಟ್ ನಲ್ಲಿ ತುರಿಕೆ ಬರುವುದನ್ನು ತಡೆಯಲು ಈ ರೀತಿ ಮಾಡಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ತಮ್ಮ ಜೀವನದ ಅನುಭವಗಳನ್ನು ಬೆಟರ್ ಇಂಡಿಯಾದೊಂದಿಗೆ ಹಂಚಿಕೊಂಡಿದ್ದು, ‘ನಾನು ನನ್ನ 7 ನೇ ಸೆಮಿಸ್ಟರ್‌ನಲ್ಲಿದ್ದಾಗ, ನನಗೆ ಇನ್ಫೋಸಿಸ್ ಮತ್ತು ವಿಪ್ರೋದಲ್ಲಿ ಎರಡು ಉದ್ಯೋಗಗಳು ಸಿಕ್ಕವು. ಮೈಸೂರಿನ ಇನ್ಫೋಸಿಸ್‌ನಲ್ಲಿ ತರಬೇತಿಯನ್ನು ಕೈಗೊಳ್ಳುವ ನಿರ್ಧಾರವು ಅವರ ಅಂತಿಮ ಗುರಿಯತ್ತ ಒಂದು ಲೆಕ್ಕಾಚಾರದ ಹೆಜ್ಜೆಯಾಗಿತ್ತು. ಅದಲ್ಲದೇ, ಫ್ಯಾಷನ್ ವೃತ್ತಿಜೀವನವನ್ನು ಮುಂದುವರಿಸಲು ನಾನು ನನ್ನ ಕುಟುಂಬದ ಮೇಲೆ ಆರ್ಥಿಕವಾಗಿ ಅವಲಂಬಿತನಾಗಲು ಬಯಸುವುದಿಲ್ಲ ಎಂದು ನನಗೆ ಖಚಿತವಾಗಿತ್ತು. ಕಾಲೇಜಿನಿಂದಲೂ, ನಾನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುತ್ತಿದ್ದೆ. ನನ್ನ ಉಳಿತಾಯದಿಂದ ನನ್ನ ಮೊದಲ ಹೊಲಿಗೆ ಯಂತ್ರವನ್ನು ಖರೀದಿಸಿದ್ದೆ’ ಎಂದು ಹೇಳಿದ್ದಾರೆ.

‘ಡಿಸೆಂಬರ್ 2016 ರಿಂದ ಮೇ 2017 ರವರೆಗೆ ಆರ್ಥಿಕವಾಗಿ ಸ್ವತಂತ್ರರಾಗಲು ನಿರ್ಣಾಯಕ ಬೆಂಬಲವನ್ನು ಒದಗಿಸಿತು. ತನ್ನ ಫ್ಯಾಷನ್ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕೆನ್ನುವ ಕನಸಿಗೆ ಅಗತ್ಯವಾದ ಹಣವನ್ನು ಪಡೆಯಲು ಸಹಾಯ ಮಾಡಿತು. ಈ ತರಬೇತಿಯು ನನ್ನ ಕುಟುಂಬದಿಂದ ವಿವಾಹದ ಸಾಮಾಜಿಕ ಒತ್ತಡಗಳಿಂದ ತಾತ್ಕಾಲಿಕವಾಗಿ ಪಾರಾಗಲು ಅವಕಾಶ ಮಾಡಿಕೊಟ್ಟಿತು.

ಇದಾದ ಬಳಿಕ ನನಗೆ ಇನ್ಫೋಸಿಸ್‌ನಿಂದ ಜಾಯಿನ್ ಲೆಟರ್ ಮತ್ತು ಎನ್‌ಐಎಫ್‌ಟಿಯಿಂದ ಇಂಟರ್ವ್ಯೂ ಲೆಟರ್ ಒಂದೇ ವಾರದಲ್ಲಿ ಸಿಕ್ಕಿತು. ಇಂದಿನವರೆಗೂ, ನಾನು ಆರಿಸಿಕೊಂಡ ಯಾವುದೇ ಮಾರ್ಗಗಳಲ್ಲಿ ಯಾವುದೇ ವಿಷಾದವಿಲ್ಲ’ ಎಂದು ಹೇಳುತ್ತಾರೆ. ಕೊನೆಗೆ ಭುವನೇಶ್ವರಿಯವರು ಧೈರ್ಯ ಮಾಡಿಕೊಂಡು ಚೆನ್ನೈನ ನಿಫ್ಟ್ ನಲ್ಲಿ ಫ್ಯಾಷನ್ ವೃತ್ತಿಯನ್ನು ಮುಂದುವರಿಸುವ ತನ್ನ ನಿರ್ಧಾರವನ್ನು ತನ್ನ ಹೆತ್ತವರಿಗೆ ತಿಳಿಸಿದರಂತೆ.

ಅದಲ್ಲದೇ, ವಿಶೇಷ ಕ್ಷಣಗಳನ್ನು ಸಂರಕ್ಷಿಸುವ ಬಯಕೆಯಿಂದ ಹುಟ್ಟಿಕೊಂಡದ್ದೆ ಈ ‘ಹೌಸ್ ಆಫ್ ಮುರಾಹ್’ ಎನ್ನುವ ಸಂಸ್ಥೆ. 2020 ರಲ್ಲಿ ಸೂರ್ಯ ಅವರಿಗೆ ಪುಷ್ಪಗುಚ್ಛವನ್ನು ಉಡುಗೊರೆಯಾಗಿ ನೀಡಿದಾಗ ಈ ರೀತಿ ಐಡಿಯಾ ಮೊದಲ ಬಾರಿಗೆ ಬಂದಿತ್ತು. ಆದರೆ ಮೊದಲ ಪ್ರಯತ್ನ ಸ್ವಲ್ಪ ಮಟ್ಟಿಗೆ ಯಶಸ್ಸು ಕೊಟ್ಟರೂ ಅಷ್ಟೇನು ಆಕರ್ಷಕವಾಗಿ ಕಾಣಲಿಲ್ಲ. 2023 ರಲ್ಲಿ ಮುರಾಹ್ ಅವರ ಮದುವೆಯ ನಂತರದಲ್ಲಿ ಹೂವುಗಳನ್ನು ಪ್ರದರ್ಶನದ ವಸ್ತುವಾಗಿ ಮಾಡುವ ಬದಲು ಹೆಚ್ಚು ಬಳಕೆಗೆ ಯೋಗ್ಯವಾಗಿಸುವತ್ತ ನಾನು ಹೆಚ್ಚು ಗಮನಹರಿಸಿದೆ” ಎನ್ನುತ್ತಾರೆ ಭುವನೇಶ್ವರಿ.

ಹೀಗಾಗಿ ಇಕೋ ಪ್ರಿಂಟಿಂಗ್ ಗೆ ಸಂಬಂಧ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಲು ಕಾರ್ಯಾಗಾರದಲ್ಲಿ ಭಾಗಿಯಾದ ಭುವನೇಶ್ವರಿ ತನ್ನ ಮದುವೆಯ ಹೂವುಗಳನ್ನು ಸೀರೆ, ಶರ್ಟ್ ಮತ್ತು ಕುರ್ತಾ ರೂಪದಲ್ಲಿ ಸಂರಕ್ಷಿಸುವಲ್ಲಿ ಯಶಸ್ವಿಯಾದರು. ಈ ಪ್ರಯತ್ನವೇ ಹೌಸ್ ಆಫ್ ಮುರಾಹ್ ಗೆ ಅಡಿಪಾಯ ಹಾಕಿತು.

ಇದನ್ನೂ ಓದಿ: ಕನ್ನಡವನ್ನು ಬೆಳೆಸುವ ಅಗತ್ಯವಿಲ್ಲ, ಬಳಸಬೇಕು : ಆಂಧ್ರ ವ್ಯಕ್ತಿಗೆ ಕನ್ನಡದಲ್ಲೇ ವ್ಯಾಪಾರ ಮಾಡುವ ಟ್ರಿಕ್ಸ್ ಹೇಳಿಕೊಟ್ಟ ಕನ್ನಡಿಗ

ಹೂವುಗಳನ್ನು ಬಳಸಿ ಇಕೋ ಪ್ರಿಂಟಿಂಗ್ ಪ್ರಕ್ರಿಯೆ ಹೇಗಿರುತ್ತದೆ?

ನೈಸರ್ಗಿಕ ಬಣ್ಣಗಳು ಪರಿಸರದ ಮೇಲಾಗುವ ಪರಿಣಾಮವನ್ನು ಕಡಿಮೆ ಮಾಡುವುದಲ್ಲದೆ, ಸಂಶ್ಲೇಷಿತ ಬಣ್ಣಗಳಿಂದ ಸಾಧಿಸಲಾಗದ ವಿಶಿಷ್ಟ ಮತ್ತು ರೋಮಾಂಚಕ ಬಣ್ಣಗಳನ್ನು ಸಹ ಸೃಷ್ಟಿಸುತ್ತವೆ. ಹೀಗಾಗಿ ನಾವು ಗ್ರಾಹಕರಿಂದ ಹೂವುಗಳನ್ನು ಪಡೆದು ಗುಣಮಟ್ಟವನ್ನು ಪರಿಶೀಲಿಸುತ್ತೇವೆ. ಈ ಇಕೋ ಪ್ರಿಂಟಿಂಗ್ ನಲ್ಲಿ ಹಲವಾರು ಪ್ರಕ್ರಿಯೆಗಳು ಒಳಗೊಂಡಿರುತ್ತವೆ, ಸ್ಕೌರಿಂಗ್ ಮತ್ತು ಮಾರ್ಡಂಟಿಂಗ್ ನಿಂದ ಪ್ರಾರಂಭವಾಗುತ್ತದೆ. ಆಯ್ಕೆಮಾಡಿದ ಬಟ್ಟೆಯನ್ನು ತಯಾರಿಸಿ, ಆ ಬಳಿಕ ಹೂವುಗಳನ್ನು ಸೂಕ್ಷ್ಮವಾಗಿ ಜೋಡಿಸಲಾಗುತ್ತದೆ. ಬಟ್ಟೆಯ ಮೇಲೆ ಹೂವಿನ ವಿನ್ಯಾಸವು ಸುಂದರವಾಗಿರಲು ಚೆಂಡುಮಲ್ಲಿಗೆಯಂತಹ ಕೆಲವು ಹೂವುಗಳನ್ನು ಸೇರಿಸುತ್ತಾರಂತೆ. ಆರಂಭದಲ್ಲಿ, ಹೂವುಗಳನ್ನು ಒಣಗಿಸುವ ಪ್ರಕ್ರಿಯೆಯು ಅಪೇಕ್ಷಿತ ಟೋನ್ ಪಡೆಯಲು ಸಾಕಷ್ಟು ಸಮಯ ತೆಗೆದುಕೊಂಡಿತು. ಈಗ, ನಾನು ಕ್ಲೈಂಟ್‌ ಗಳಿಗೆ ಹೂವುಗಳನ್ನು ಗಾಳಿಯಲ್ಲಿ ಒಣಗಿಸಿ ನಂತರದಲ್ಲಿ ಇಕೋ ಪ್ರಿಂಟಿಂಗ್ ಗೆ ಕಳುಹಿಸಲು ಹೆಳುತ್ತೇನೆ. ಈ ಬಟ್ಟೆಗಳನ್ನು ನಾಲ್ಕು ವಾರಗಳೊಳಗೆ ಅದನ್ನು ತಲುಪಿಸುತ್ತೇವೆ ಎನ್ನುತ್ತಾರೆ.

ಸೂಕ್ಷ್ಮವಾದ ದುಪಟ್ಟಾಗಳಿಂದ ಹಿಡಿದು ಸೊಗಸಾದ ಲೆಹೆಂಗಾಗಳವರೆಗೆ, ಹೌಸ್ ಆಫ್ ಮುರಾಹ್ ವೈವಿಧ್ಯಮಯ ಅಭಿರುಚಿಗಳು ಮತ್ತು ಆದ್ಯತೆಗಳನ್ನು ಪೂರೈಸುವ ನಾರು ಸೇರಿದಂತೆ ವಿವಿಧ ಉಡುಪುಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬರುತ್ತಿದೆ. ಈ ವಿನ್ಯಾಸದ ಆರಂಭಿಕ ಬೆಲೆ 1,400 ರೂ ರಿಂದ 16,000 ರೂ.ಗಳವರೆಗೆ ಇದೆ. ದೇಶ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಆರ್ಡರ್‌ಗಳನ್ನು ಪಡೆಯುತ್ತಿದ್ದು, ಸಣ್ಣದಾಗಿ ಆರಂಭವಾದ ಹೌಸ್ ಆಫ್ ಮುರಾಹ್ ಕಳೆದ ವರ್ಷದಲ್ಲಿ 200 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆಯುವ ಮೂಲಕ ಉದ್ಯಮದಲ್ಲಿ ಯಶಸ್ಸು ಕಂಡಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sat, 8 March 25