ಈ ತರಕಾರಿ ಕೊಲೆಸ್ಟ್ರಾಲ್ಗೆ ಬ್ರಹ್ಮಾಸ್ತ್ರ, ಇದನ್ನು ಹಸಿಯಾಗಿ ತಿಂದರೆ ಉತ್ತಮ
ಕೊಲೆಸ್ಟ್ರಾಲ್ ತುಂಬಾ ಅಪಾಯಕಾರಿ. ಇದು ನಮ್ಮ ದೇಹದ ಮೇಲೆ ಅನೇಕ ರೀತಿ ಅನಾರೋಗ್ಯದ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇದು ಮಾತ್ರವಲ್ಲದೇ ಗಂಭೀರ ಕಾಯಿಲೆಗಳಿಗೂ ಕಾರಣವಾಗುತ್ತದೆ. ಅದಕ್ಕಾಗಿ ಈ ಕೆಟ್ಟ ಕೊಲೆಸ್ಟ್ರಾಲ್ ಬರದಂತೆ ತಡೆಗಟ್ಟುವುದು ಉತ್ತಮ. ಇದನ್ನು ತಡೆಯಲು ತಜ್ಞರು ಅನೇಕ ಉಪಯುಕ್ತ ಆಹಾರಗಳನ್ನು ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ಈಗಿನ ಕಾಲದಲ್ಲಿ ಕೊಲೆಸ್ಟ್ರಾಲ್ (cholesterol) ತುಂಬಾ ಅಪಾಯಕಾರಿ. ಇದು ಮಾನವನ ಆರೋಗ್ಯಕ್ಕೆ ಹಾನಿ ಮಾಡುವುದರ ಜತೆಗೆ ಅನೇಕ ಗಂಭೀರ ಕಾಯಿಲೆಗಳಿಗೆ ಗುರಿ ಮಾಡುತ್ತದೆ. ಕೊಲೆಸ್ಟ್ರಾಲ್ ಜೀವಕೋಶ ಪೊರೆಗಳಲ್ಲಿ ಕಂಡುಬರುವ ಕೊಬ್ಬಿನ, ಎಣ್ಣೆಯುಕ್ತ ಸ್ಟೀರಾಯ್ಡ್ ಆಗಿದೆ. ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹವಾಗಲು ಕಾರಣವಾಗುತ್ತದೆ. ಇದು ರಕ್ತ ಪೂರೈಕೆಗೆ ಅಡಚಣೆಯನ್ನು ಉಂಟುಮಾಡುತ್ತದೆ. ರಕ್ತದ ಹರಿವು ನಿಧಾನವಾದಂತೆ, ಹೃದಯಕ್ಕೆ ಪಂಪ್ ಮಾಡಲು ಹೆಚ್ಚಿನ ಒತ್ತಡ ಬೇಕಾಗುತ್ತದೆ. ಇದು ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ವಾಸ್ತವವಾಗಿ ಎರಡು ರೀತಿಯ ಕೊಲೆಸ್ಟ್ರಾಲ್‌ಗಳಿವೆ. ಒಂದು ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟೀನ್ (HDL) ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಹೇಳಲಾಗುತ್ತದೆ. ಎರಡನೇಯದ್ದು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (LDL) ಅನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಆರೋಗ್ಯಕರ ಹೃದಯಕ್ಕಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕು. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಆಹಾರದಲ್ಲಿ ಯಾವ ತರಕಾರಿಗಳನ್ನು ಸೇರಿಸಬೇಕು? ತಜ್ಞರು ಈ ಬಗ್ಗೆ ತಿಳಿಸಿದ್ದಾರೆ.
ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಅನೇಕ ಜನರು ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ ಸಲಾಡ್‌ಗೆ ಹಸಿರು ಈರುಳ್ಳಿ ಸೇರಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.
ಈರುಳ್ಳಿಯಿಂದ ಹಲವು ಪ್ರಯೋಜನ:
ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಇದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಫ್ಲೇವನಾಯ್ಡ್ ಉತ್ಕರ್ಷಣ ನಿರೋಧಕಗಳು ಹಸಿರು ಈರುಳ್ಳಿಯಲ್ಲಿ ಕಂಡುಬರುತ್ತವೆ. ಈರುಳ್ಳಿ ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರ ಜತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ನಿಮ್ಮ ಆಹಾರದಿಂದ ಎಣ್ಣೆಯುಕ್ತ ಆಹಾರವನ್ನು ತೆಗೆದುಹಾಕಿ.
ಊಟ ಮಾಡಲು ಸರಿಯಾದ ಸಮಯ
ನೀವು ಈರುಳ್ಳಿಯನ್ನು ತಪ್ಪಾಗಿ ತಿಂದರೆ, ಅದು ನಿಮಗೆ ಪ್ರಯೋಜನವಾಗುವುದಿಲ್ಲ. ಬದಲಾಗಿ, ಅದು ನಿಮಗೆ ಹಾನಿ ಮಾಡುತ್ತದೆ. ಈರುಳ್ಳಿಯ ಪ್ರಯೋಜನಗಳನ್ನು ಪಡೆಯಲು, ನೀವು ಅವುಗಳನ್ನು ಹಸಿಯಾಗಿ ತಿನ್ನಬೇಕು. ಇದನ್ನು ಸಲಾಡ್ ನಂತೆ ತಿನ್ನಬಹುದು. ನಿಮ್ಮ ದೈನಂದಿನ ಆಹಾರದಲ್ಲಿ ಒಂದು ಈರುಳ್ಳಿಯನ್ನು ಸೇರಿಸಲು ಮರೆಯದಿರಿ. ಊಟದ ಸಮಯದಲ್ಲಿ ಈರುಳ್ಳಿ ತಿನ್ನಬಹುದು. ಮಧ್ಯಾಹ್ನದ ಊಟಕ್ಕೆ ಈರುಳ್ಳಿ ತಿನ್ನುವುದು ತುಂಬಾ ಪ್ರಯೋಜನಕಾರಿ. ಇದಲ್ಲದೆ, ನೀವು ರಾತ್ರಿ ಊಟದಲ್ಲಿ ಈರುಳ್ಳಿಯನ್ನು ಸಹ ತಿನ್ನಬಹುದು.
ಇದನ್ನೂ ಓದಿ: ವೈದ್ಯರು ನಿಯಮಿತವಾಗಿ ಆವಕಾಡೊ ಸೇವನೆ ಮಾಡಿ ಎನ್ನಲು ಕಾರಣವೇನು?
ಜಂಕ್ ಫುಡ್ ಸೇವನೆಯನ್ನು ಕಡಿಮೆ ಮಾಡಿ
ಕೊಲೆಸ್ಟ್ರಾಲ್ ಇರುವ ರೋಗಿಯು ಜಂಕ್ ಫುಡ್ ತಿನ್ನಬಾರದು. ಜಂಕ್ ಫುಡ್ ಸೇವನೆಯಿಂದ ಕೊಲೆಸ್ಟ್ರಾಲ್ ಸಮಸ್ಯೆಗಳು ಹೆಚ್ಚಾಗುತ್ತವೆ. ನೀವು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬಯಸಿದರೆ, ನಿಮ್ಮ ಆಹಾರದಿಂದ ಜಂಕ್ ಫುಡ್‌ಗಳನ್ನು ತೆಗೆದುಹಾಕಿ. ಹೃದಯಕ್ಕೆ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ನಿಮ್ಮ ಜೀವನಶೈಲಿಯನ್ನು ಬದಲಾಯಿಸಿ. ಇದರ ಜತೆಗೆ ವ್ಯಾಯಾಮ ಮಾಡಿ, ಹೀಗೆ ಮಾಡಿದ್ರೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ