AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತ್ರೆಗಳಿಲ್ಲದೆ ತಲೆನೋವನ್ನು ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್

ಪದೇ ಪದೇ ಬರುವ ತಲೆ ನೋವಿನಿಂದ ಮುಕ್ತಿ ಪಡೆಯಲು ಮಾತ್ರೆಗಳ ಮೊರೆ ಹೋಗುವುದು ಸರಿಯಲ್ಲ, ಜೊತೆಗೆ ಅದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ನೀವು ತಲೆನೋವು ಬರದಂತೆ ಕಾಪಾಡಿಕೊಳ್ಳಬೇಕು ಅಥವಾ ಬಂದಾಗ ಮನೆ ಮದ್ದಿನಿಂದಲೇ ಅದನ್ನು ಕಡಿಮೆ ಮಾಡಿಕೊಂಡು ಮಾತ್ರೆ ಬಳಕೆಯನ್ನು ಕಡಿಮೆ ಮಾಡಬೇಕು. ಹಾಗಾದರೆ ನೈಸರ್ಗಿಕ ರೀತಿಯಲ್ಲಿ ತಲೆನೋವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸರಳ ಸಲಹೆಗಳು.

ಮಾತ್ರೆಗಳಿಲ್ಲದೆ ತಲೆನೋವನ್ನು ಕಡಿಮೆ ಮಾಡಲು ಇಲ್ಲಿದೆ ಸಿಂಪಲ್ ಟಿಪ್ಸ್
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Mar 04, 2025 | 3:15 PM

Share

ತಲೆನೋವು ಸಣ್ಣ ಸಮಸ್ಯೆಯಂತೆ ಕಂಡರೂ ಒಮ್ಮೆ ಬಂದರೆ ದಿನವಿಡೀ ತಾಳ್ಮೆ ಕಳೆದುಕೊಳ್ಳುವಷ್ಟು ಕಿರಿಕಿರಿಯಾಗುತ್ತದೆ. ಸಾಮಾನ್ಯವಾಗಿ ನಮ್ಮ ಜೀವನಶೈಲಿ, ಒತ್ತಡ, ಕಳಪೆ ನಿದ್ರೆ, ದೀರ್ಘಕಾಲದ ವರೆಗೆ ಮೊಬೈಲ್ ಅಥವಾ ಟಿವಿ ನೋಡುವುದು, ಹಸಿವಾದಾಗ ಸರಿಯಾಗಿ ತಿನ್ನದಿರುವುದು ಮುಂತಾದ ಅಂಶಗಳು ತಲೆನೋವಿಗೆ ಕಾರಣವಾಗಿರಬಹುದು. ಆದರೆ ಪದೇ ಪದೇ ಬರುವ ತಲೆ ನೋವಿನಿಂದ ಮುಕ್ತಿ ಪಡೆಯಲು ಮಾತ್ರೆಗಳ ಮೊರೆ ಹೋಗುವುದು ಸರಿಯಲ್ಲ, ಜೊತೆಗೆ ಅದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ. ನೀವು ತಲೆನೋವು ಬರದಂತೆ ಕಾಪಾಡಿಕೊಳ್ಳಬೇಕು ಅಥವಾ ಬಂದಾಗ ಮನೆ ಮದ್ದಿನಿಂದಲೇ ಅದನ್ನು ಕಡಿಮೆ ಮಾಡಿಕೊಂಡು ಮಾತ್ರೆ ಬಳಕೆಯನ್ನು ಕಡಿಮೆ ಮಾಡಬೇಕು. ಹಾಗಾದರೆ ನೈಸರ್ಗಿಕ ರೀತಿಯಲ್ಲಿ ತಲೆನೋವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ಸರಳ ಸಲಹೆಗಳು.

ತಲೆನೋವಿಗೆ ಕಾರಣಗಳು;

ಒತ್ತಡ ಮತ್ತು ಆತಂಕ

ದೇಹದಲ್ಲಿ ನೀರಿನ ಕೊರತೆ

ಇದನ್ನೂ ಓದಿ
Image
ವೈದ್ಯರು ನಿಯಮಿತವಾಗಿ ಆವಕಾಡೊ ಸೇವನೆ ಮಾಡಿ ಎನ್ನಲು ಕಾರಣವೇನು?
Image
ಟ್ಯಾಟೂ ಹಾಕಿಸುವ ಮೊದಲು ಈ ಅಂಶ ನೆನಪಿನಲ್ಲಿರಲಿ
Image
ಹಕ್ಕಿ ಜ್ವರ ಹೇಗೆ ಹರಡುತ್ತೆ? ರೋಗಲಕ್ಷಣಗಳೇನು? ಬರದಂತೆ ತಡೆಯಲು ಈ ಸಲಹೆ
Image
ಅಣಬೆಗಳು ಈ ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ

ನಿದ್ರೆಯ ಕೊರತೆ

ಮೊಬೈಲ್ ಅಥವಾ ಟಿವಿ ಮುಂದೆ ಹೆಚ್ಚು ಸಮಯ ಕಳೆಯುವುದು

ಹಸಿವಾದಾಗ ತಿನ್ನದಿರುವುದು

ದೊಡ್ಡ ಶಬ್ದಗಳು, ಬೆಳಕಿನ ಪರಿಣಾಮ

ಮೈಗ್ರೇನ್ ಅಥವಾ ಸೈನಸ್ ಸಮಸ್ಯೆಗಳು

ತಲೆನೋವಿಗೆ ಐಸ್ ಕ್ಯೂಬ್ ಗಳು;

ನಿಮಗೆ ತಲೆನೋವು ಬಂದಾಗ, ತಕ್ಷಣ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು ಮನೆಯಲ್ಲಿಯೇ ನೈಸರ್ಗಿಕ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಎರಡು ಐಸ್ ಕ್ಯೂಬ್ ಗಳನ್ನು ತೆಗೆದುಕೊಂಡು ಅವುಗಳನ್ನು ಸಣ್ಣ ತಟ್ಟೆ ಅಥವಾ ದೊಡ್ಡ ಬೌಲ್ ನಲ್ಲಿ ಹಾಕಿ. ಅದರ ನಂತರ, ನಿಮ್ಮ ಬೆರಳುಗಳನ್ನು ಈ ಐಸ್ ಕ್ಯೂಬ್ ಗಳ ಮೇಲೆ ಇರಿಸಿ, ಸ್ವಲ್ಪ ಸಮಯದ ನಂತರ, ಅದನ್ನು ತೆಗೆದು ನಿಧಾನವಾಗಿ ಮಸಾಜ್ ಮಾಡಿ. ಇದನ್ನು ಎರಡು ನಿಮಿಷಗಳ ಕಾಲ ಮಾಡಿದರೆ ತಲೆನೋವು ಕಡಿಮೆಯಾಗುತ್ತದೆ. ಈ ಮನೆಮದ್ದನ್ನು ಕೇಳಿ ನಿಮಗೆ ಸ್ವಲ್ಪ ಆಶ್ಚರ್ಯ ಎನಿಸಿದರೂ ಇದು ನಿಮ್ಮ ತೆಲೆನೋವನ್ನು ಕಡಿಮೆ ಮಾಡುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: ಕೀಲು ನೋವಿಗೆ ವೀಳ್ಯದೆಲೆ ನೀರಿನಲ್ಲಿದೆ ಪರಿಹಾರ

ಈ ಮನೆಮದ್ದು ಹೇಗೆ ಕೆಲಸ ಮಾಡುತ್ತದೆ?

ನಮ್ಮ ಬೆರಳುಗಳ ನರಗಳು ನೇರವಾಗಿ ತಲೆಯ ನರಗಳಿಗೆ ಸಂಪರ್ಕ ಹೊಂದಿವೆ. ಮಂಜುಗಡ್ಡೆ ಅಥವಾ ಐಸ್ ಕ್ಯೂಬ್ ತಂಪು ಮಾಡುವುದರಿಂದ, ನರಗಳ ಒತ್ತಡ ಕಡಿಮೆಯಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ತಲೆನೋವು ಕಡಿಮೆಯಾಗುವ ಸಾಧ್ಯತೆಯಿದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಚಿಕಿತ್ಸೆಯಾಗಿರುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲ. ಈ ಮನೆಮದ್ದಿಗೆ ಐಸ್ ವಾಟರ್ ಗಳನ್ನೂ ಕೂಡ ಬಳಕೆ ಮಾಡಿಕೊಳ್ಳಬಹುದು. ಇದರ ಹೊರತಾಗಿ ಇತರ ನೈಸರ್ಗಿಕ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

*ಸಾಕಷ್ಟು ನೀರು ಕುಡಿಯಿರಿ; ಸಾಮಾನ್ಯವಾಗಿ ನಿರ್ಜಲೀಕರಣ ತಲೆನೋವಿಗೆ ಕಾರಣವಾಗಬಹುದು. ಹಾಗಾಗಿ ಸರಿಯಾಗಿ ನೀರು ಕುಡಿಯಿರಿ.

*ನಿಧಾನವಾಗಿ ಉಸಿರಾಡುವುದು; ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ತಲೆನೋವನ್ನು ಕಡಿಮೆ ಮಾಡುತ್ತದೆ.

*ಸ್ವಲ್ಪ ಯೋಗ ಮತ್ತು ಮಸಾಜ್; ಕುತ್ತಿಗೆ ಮತ್ತು ತಲೆಯ ಪ್ರದೇಶಗಳನ್ನು ನಿಧಾನವಾಗಿ ಮಸಾಜ್ ಮಾಡುವುದರಿಂದ ಪರಿಹಾರ ಸಿಗುತ್ತದೆ.

*ಪುದೀನಾ ಅಥವಾ ಶುಂಠಿ ಚಹಾ; ಈ ಚಹಾ ನೈಸರ್ಗಿಕ ನೋವು ನಿವಾರಣೆಗೆ ಬಹಳ ಉಪಯುಕ್ತವಾಗಿವೆ. ಈ ಸಲಹೆಗಳನ್ನು ಅನುಸರಿಸುವುದರಿಂದ ತಲೆನೋವನ್ನು ಸುಲಭವಾಗಿ ಕಡಿಮೆ ಮಾಡಬಹುದು. ನಿಮಗೆ ತಲೆನೋವು ಬಂದಾಗ ಒಮ್ಮೆ ಐಸ್ ಮಸಾಜ್ ಪ್ರಯತ್ನಿಸುವುದನ್ನು ಮಾತ್ರ ಮರೆಯಬೇಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?