ಅಣಬೆಗಳು ಈ ಆರೋಗ್ಯ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ
ಅಣಬೆಯನ್ನು ಬಹಳ ಹಿಂದಿನಿಂದಲೂ ಬಳಸುತ್ತಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಮಶ್ರೂಮ್‌ನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು, ವಿಷಕಾರಿ ಅಣಬೆಯನ್ನು ಆಯ್ಕೆ ಮಾಡಬಾರದು. ಬಟನ್ ಮಶ್ರೂಮ್ ದೇಹಕ್ಕೆ ಆರೋಗ್ಯಕಾರಿ ಎಂದು ತಜ್ಞರು ಹೇಳುತ್ತಾರೆ. ಆದರೆ, ಕೆಲವರು ಅಣಬೆಗಳನ್ನು ತಿನ್ನುವುದು ಸರಿಯಲ್ಲ. ಇದನ್ನು ಸೇವನೆ ಮಾಡಬಾರದು ಎಂದೆಲ್ಲಾ ಹೇಳುತ್ತಾರೆ. ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಬಾರದು ಜೊತೆಗೆ ಯಾರು ಸೇವನೆ ಮಾಡುವುದು ಒಳ್ಳೆಯದಲ್ಲ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಿ.

ಅಣಬೆ ಅಥವಾ ಮಶ್ರೂಮ್ ಸೇವನೆ ಮಾಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದು ಬರೀ ರುಚಿಗಷ್ಟೇ ಅಲ್ಲ ಇದರ ಸೇವನೆಯಿಂದ ಆರೊಗ್ಯಕ್ಕೂ ಹಲವಾರು ಲಾಭಗಳಿವೆ. ಅಣಬೆಯನ್ನು ಬಹಳ ಹಿಂದಿನಿಂದಲೂ ಬಳಸುತ್ತಿದ್ದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿದೆ. ಮಶ್ರೂಮ್‌ನ್ನು ಆಯ್ಕೆ ಮಾಡುವಾಗ ಎಚ್ಚರದಿಂದಿರಬೇಕು, ವಿಷಕಾರಿ ಅಣಬೆಯನ್ನು ಆಯ್ಕೆ ಮಾಡಬಾರದು. ಮಶ್ರೂಮ್‌ನಲ್ಲಿ ಬಟನ್ ಮಶ್ರೂಮ್ ದೇಹಕ್ಕೆ ಆರೋಗ್ಯಕಾರಿ ಎಂದು ತಜ್ಞರು ಹೇಳುತ್ತಾರೆ. ಇದು ಉತ್ತಮ ಪೋಷಕಾಂಶಗಳಿಂದ ತುಂಬಿರುವ ಅತ್ಯುತ್ತಮ ಆಹಾರವಾಗಿದ್ದು ಪೋಷಕಾಂಶಗಳ ಶಕ್ತಿ ಕೇಂದ್ರ ಎಂದೂ ಕರೆಯಲಾಗುತ್ತದೆ. ಇದರಲ್ಲಿ ವಿಟಮಿನ್ ಡಿ, ವಿಟಮಿನ್ ಬಿ, ಸೆಲೆನಿಯಂ, ಪೊಟ್ಯಾಸಿಯಮ್ ಅಂದರೆ ಖನಿಜ ಗಳು, ಬೀಟಾ-ಗ್ಲುಕಾನ್ಗಳು ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಇತರ ಅನೇಕ ಸಂಯುಕ್ತಗಳಿವೆ. ಆದರೆ, ಕೆಲವರು ಅಣಬೆಗಳನ್ನು ತಿನ್ನುವುದು ಸರಿಯಲ್ಲ. ಇದನ್ನು ಸೇವನೆ ಮಾಡಬಾರದು ಎಂದೆಲ್ಲಾ ಹೇಳುತ್ತಾರೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ಯಾಕಾಗಿ ಸೇವನೆ ಮಾಡಬಾರದು ಜೊತೆಗೆ ಯಾರು ಸೇವನೆ ಮಾಡುವುದು ಒಳ್ಳೆಯದಲ್ಲ ಎಂಬುದನ್ನು ವಿವರವಾಗಿ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಅಣಬೆಗಳನ್ನು ಸೇವಿಸುವುದರಿಂದ ನಮ್ಮ ದೇಹವು ರೋಗಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ನಿಯಮಿತವಾಗಿ ಸೇವನೆ ಮಾಡಬಹುದು. ಅಣಬೆಗಳಲ್ಲಿ ಅನೇಕ ವಿಧಗಳಿವೆ. ಅದರಲ್ಲಿ ಬಟನ್ ಮಶ್ರೂಮ್ ತಿನ್ನುವುದರಿಂದ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದು ಎಂದು ಇತ್ತೀಚಿನ ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ.
ಯಾರಿಗೆ ಒಳ್ಳೆಯದಲ್ಲ?
ಇದು ಆರೋಗ್ಯಕ್ಕೆ ಬಹಳ ಒಳ್ಳೆಯದಾದರೂ ಕೂಡ, ಇವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ. ಏಕೆಂದರೆ ಇದನ್ನು ಹೆಚ್ಚು ಹೆಚ್ಚು ಸೇವನೆ ಮಾಡಿದಲ್ಲಿ ಮೂಗಿನಿಂದ ರಕ್ತಸ್ರಾವ, ಒಣ ಮೂಗು ಮತ್ತು ಒಣ ಗಂಟಲಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವರು ತಲೆನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರು ಅಣಬೆಗಳನ್ನು ತಿನ್ನದಿರುವುದು ಉತ್ತಮ. ಏಕೆಂದರೆ ಇದು ತಲೆನೋವಿನ ಸಮಸ್ಯೆಯನ್ನು ಹೆಚ್ಚಿಸಬಹುದು. ಇದೆಲ್ಲದರ ಜೊತೆಗೆ ಅಜೀರ್ಣ, ಉಬ್ಬರ, ಹೊಟ್ಟೆ ನೋವು, ಗ್ಯಾಸ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಅಂತವರಿಗೂ ಅಣಬೆ ಒಳ್ಳೆಯದಲ್ಲ.ಇದನ್ನು ಸೇವನೆ ಮಾಡಿದ ತಕ್ಷಣ ಅತಿಸಾರ ಆರಂಭವಾಗುತ್ತದೆ. ಹಾಗಾಗಿ ಜೀರ್ಣಕಾರಿ ಸಮಸ್ಯೆ ಇರುವವರು ಅವುಗಳನ್ನು ತಿನ್ನದಿರುವುದು ಉತ್ತಮ.
ಇದನ್ನೂ ಓದಿ: ಪೋಷಕರೇ, ನಿಮ್ಮ ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಗೆ ಇದೇ ಕಾರಣ
ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಅಣಬೆಗಳನ್ನು ತಿನ್ನಬಾರದು. ಅಣಬೆಗಳನ್ನು ಸೇವನೆ ಮಾಡಿದಾಗ ಆತಂಕ ಮತ್ತು ಒತ್ತಡದಂತಹ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಗರ್ಭಿಣಿ ಅಥವಾ ಹಾಲುಣಿಸುವ ತಾಯಂದಿರು ಸಹ ಅವುಗಳನ್ನು ಮಿತವಾಗಿ ತಿನ್ನಲು ಸೂಚಿಸಲಾಗುತ್ತದೆ ಇನ್ನು ಕೆಲವರಿಗೆ ಇದನ್ನು ಅಪ್ಪಿತಪ್ಪಿಯೂ ತಿನ್ನಬೇಡಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಅಣಬೆಗಳು ಲಭ್ಯವಿದೆ. ಇವುಗಳಲ್ಲಿ ಕೆಲವು ಆರೋಗ್ಯಕ್ಕೆ ಹಾನಿಕಾರಕ. ಅದಕ್ಕಾಗಿಯೇ ಅವುಗಳನ್ನು ಖರೀದಿಸುವ ಮೊದಲು ನೀವು ಕಡ್ಡಾಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಆರೋಗ್ಯಕ್ಕೆ ಒಳ್ಳೆಯದನ್ನು ಮಾತ್ರ ಸೇವನೆ ಮಾಡಿ. ಕಡಿಮೆ ಹಣಕ್ಕೆ ಸಿಗುವ ಹಾನಿಕಾರಕ ಅಣಬೆಗಳನ್ನು ಖರೀದಿಸದಿರುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




