ಮೈಕ್ರೋವೇವ್ ಗಳ ಬಳಕೆಯಲ್ಲಿ ಎಂದಿಗೂ ಈ ತಪ್ಪುಗಳನ್ನು ಮಾಡಬೇಡಿ
ಮೈಕ್ರೋವೇವ್ ನಲ್ಲಿ ಎಲ್ಲಾ ರೀತಿಯ ಆಹಾರವನ್ನು ಬಿಸಿ ಮಾಡುವುದು ಸುರಕ್ಷಿತವಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ವಿಷಯ ನಿಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ಸತ್ಯ. ಮೈಕ್ರೋವೇವ್ ನಲ್ಲಿ ಕೆಲವು ಆಹಾರಗಳನ್ನು ಬಿಸಿ ಮಾಡುವುದರಿಂದ ಲಾಭಕ್ಕಿಂತ ಅಪಾಯವೇ ಹೆಚ್ಚು ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಗಾದರೆ ಇದಕ್ಕೆ ಕಾರಣವೇನು? ಯಾವ ಆಹಾರಗಳನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಮೈಕ್ರೋವೇವ್ ಓವನ್ ಗಳು ಪ್ರತಿ ಮನೆಯಲ್ಲೂ ಕಾಣಸಿಗುತ್ತವೆ. ಸಾಮಾನ್ಯವಾಗಿ ಫ್ರಿಜ್ ನಲ್ಲಿ ಸಂಗ್ರಹಿಸಿಟ್ಟ ಆಹಾರವನ್ನು ಬಿಸಿ ಮಾಡಲು ಅವುಗಳನ್ನು ಬಳಸಲಾಗುತ್ತದೆ. ಯಾವುದೇ ರೀತಿಯ ಆಹಾರವಾಗಿರಲಿ ಬಿಸಿ ಮಾಡಲು ಅವುಗಳನ್ನು ಬಳಕೆ ಮಾಡುತ್ತೇವೆ. ಆದರೆ ಮೈಕ್ರೋವೇವ್ ನಲ್ಲಿ ಎಲ್ಲಾ ರೀತಿಯ ಆಹಾರವನ್ನು ಬಿಸಿ ಮಾಡುವುದು ಸುರಕ್ಷಿತವಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಈ ವಿಷಯ ನಿಮಗೆ ಆಶ್ಚರ್ಯ ಹುಟ್ಟಿಸಬಹುದು ಆದರೆ ಇದು ಸತ್ಯ. ಮೈಕ್ರೋವೇವ್ ನಲ್ಲಿ ಕೆಲವು ಆಹಾರಗಳನ್ನು ಬಿಸಿ ಮಾಡುವುದರಿಂದ ಲಾಭಕ್ಕಿಂತ ಅಪಾಯವೇ ಹೆಚ್ಚು ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಹಾಗಾದರೆ ಇದಕ್ಕೆ ಕಾರಣವೇನು? ಯಾವ ಆಹಾರಗಳನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಮೊಟ್ಟೆಗಳು
ಮೈಕ್ರೋವೇವ್ ನಲ್ಲಿ ಮೊಟ್ಟೆಗಳನ್ನು ಬಿಸಿ ಮಾಡುವುದು ಅಪಾಯಕಾರಿ. ಮೊಟ್ಟೆಯ ಹಳದಿ ಲೋಳೆ ಮತ್ತು ಬಿಳಿ ಭಾಗದಲ್ಲಿ ನೀರಿನ ಅಂಶ ಅಧಿಕವಾಗಿರುತ್ತದೆ. ಬಿಸಿ ಮಾಡಿದಾಗ, ಒಳಗಿನ ನೀರು ಆವಿಯಾಗಿ ಒತ್ತಡ ಉಂಟಾಗಿ ಮೊಟ್ಟೆಗಳು ಒಡೆಯಬಹುದು. ಇದರಿಂದ ಮೈಕ್ರೋವೇವ್ ನ ಒಳಭಾಗ ಕೊಳಕಾಗಬಹುದು. ಅದಲ್ಲದೆ ಇದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.
ಹಣ್ಣುಗಳು
ದ್ರಾಕ್ಷಿ, ಚೆರ್ರಿ ಮತ್ತು ಬ್ಲೂಬೆರ್ರಿಗಳಂತಹ ಹಣ್ಣುಗಳಲ್ಲಿ ನೀರಿನ ಅಂಶ ಅಧಿಕವಾಗಿರುತ್ತದೆ. ಇವುಗಳನ್ನು ಮೈಕ್ರೋವೇವ್ ನಲ್ಲಿ ಇಟ್ಟಾಗ ಅದರ ಶಾಖದಿಂದ, ನೀರು ವೇಗವಾಗಿ ಆವಿಯಾಗುವುದರಿಂದ ಹಣ್ಣುಗಳಲ್ಲಿ ಒತ್ತಡ ಹೆಚ್ಚಾಗಿ ಒಡೆಯಬಹುದು. ಹಾಗಾಗಿ ಇಂತಹ ಹಣ್ಣುಗಳನ್ನು ಬಿಸಿ ಮಾಡುವಾಗ ಬಹಳ ಜಾಗೃತೆ ವಹಿಸುವುದು ಅನಿವಾರ್ಯ.
ಪಾಲಕ್ ಸೊಪ್ಪು
ಈ ಸೊಪ್ಪನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್ ಸಮೃದ್ಧವಾಗಿದ್ದು ಮೈಕ್ರೋವೇವ್ ಶಾಖದಿಂದ ಅವು ನೈಟ್ರೋಸಮೈನ್ ಗಳಾಗಿ ಬದಲಾಗುತ್ತದೆ. ಇವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಇದಲ್ಲದೆ, ಈ ಸೊಪ್ಪಿನಲ್ಲಿ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳು ಇರುವುದಿಲ್ಲ. ಹಾಗಾಗಿ ಇದು ಆಹಾರದ ಮೌಲ್ಯವನ್ನು ಕಡಿಮೆ ಮಾಡುತ್ತದೆ.
ಮಾಂಸ
ಮೈಕ್ರೋವೇವ್ ನಲ್ಲಿ ಬಿಸಿ ಮಾಡಿದಾಗ ಮಾಂಸದ ದೊಡ್ಡ ತುಂಡುಗಳು ಸಮಾನವಾಗಿ ಬೇಯುವುದಿಲ್ಲ. ಮೈಕ್ರೋವೇವ್ ಮಾಂಸದ ಹೊರಭಾಗವನ್ನು ವೇಗವಾಗಿ ಬಿಸಿ ಮಾಡುತ್ತದೆ. ಆದರೆ ಒಳಗೆ, ಅದು ತಂಪಾಗಿರುತ್ತದೆ. ಹೊರಗಿನ ಭಾಗವು ಗಟ್ಟಿಯಾಗಿ ಒಳಭಾಗ ಹಸಿಯಾಗಿ ಉಳಿಯುತ್ತದೆ. ಸರಿಯಾಗಿ ಬೇಯಿಸದ ಮಾಂಸದಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯಿದೆ. ಇಂತಹ ಆಹಾರ ವಿಷಕ್ಕೆ ಸಮನಾಗಿದೆ.
ಇದನ್ನೂ ಓದಿ: ಹೃದಯಾಘಾತ ಆಗುವ 30 ದಿನಗಳ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡುಬರುತ್ತದೆ
ಸಮುದ್ರಾಹಾರ
ಮೀನು, ಏಡಿ ಮತ್ತು ಸೀಗಡಿಗಳು ಮೈಕ್ರೋವೇವ್ ಶಾಖಕ್ಕೆ ಸೂಕ್ತವಲ್ಲ. ಏಕೆಂದರೆ ಇದರಲ್ಲಿ ಆಹಾರ ಬಿಸಿ ಮಾಡಿದಾಗ ಆಹಾರ ತನ್ನ ಮೂಲ ರುಚಿಯನ್ನು ಕಳೆದುಕೊಳ್ಳುತ್ತದೆ. ದೀರ್ಘಕಾಲದ ವರೆಗೆ ಬಿಸಿ ಮಾಡಿದರೆ, ಸಮುದ್ರಾಹಾರವು ರಬ್ಬರ್ ನಂತೆ ಗಟ್ಟಿಯಾಗುತ್ತದೆ. ವಾಸನೆಯೂ ಹೋಗುವುದಿಲ್ಲ, ಆಹಾರದಲ್ಲಿಯೂ ರುಚಿ ಇರುವುದಿಲ್ಲ. ಹಾಗಾಗಿ ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ, ಮೈಕ್ರೋವೇವ್ ಬಳಕೆಯನ್ನು ಹೆಚ್ಚು ಸುರಕ್ಷಿತವಾಗಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ