ಗೇಟ್ ಕ್ಲೋಸ್ ಆಯಿತೆಂದು ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ ಸವಾರ; ವಿಡಿಯೋ ವೈರಲ್
ರೈಲ್ವೆ ಗೇಟ್ ಮುಚ್ಚಿದ ನಂತರವೂ ಕೆಲವೊಬ್ಬರು ಬೇಜವಾಬ್ದಾರಿಯಿಂದ ರೈಲ್ವೆ ಕ್ರಾಸಿಂಗ್ ದಾಟಲು ಯತ್ನಿಸಿರುವ ಘಟನೆಗಳನ್ನು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೈಲ್ವೆ ಗೇಟ್ ಮುಚ್ಚಿದ್ದ ಸಂದರ್ಭದಲ್ಲಿ ಇನ್ನೂ ಎಷ್ಟು ಹೊತ್ತು ಇಲ್ಲೇ ಕಾಯುತ್ತ ನಿಲ್ಲೋದು ಎಂದು ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈತನ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ರೈಲ್ವೆ ಕ್ರಾಸಿಂಗ್ ಬಳಿ ರೈಲು ಅತ್ತಿಂದಿತ್ತ ಓಡಾಡುವ ಸಮಯದಲ್ಲಿ ಒಂದಷ್ಟು ಹೊತ್ತುಗಳ ಕಾಲ ರೈಲ್ವೆ ಗೇಟ್ ಮುಚ್ಚುತ್ತಾರೆ. ಹೀಗೆ ಹೆಚ್ಚು ಹೊತ್ತು ರೈಲ್ವೆ ಗೇಟ್ ಮುಚ್ಚಿದಾಗ ಒಂದಷ್ಟು ವಾಹನ ಸವಾರರು ಇದರಿಂದ ಕಿರಿಕಿರಿ ಅನುಭವಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ರೈಲ್ವೆ ಗೇಟ್ ಮುಚ್ಚಿದ್ದ ಸಂದರ್ಭದಲ್ಲಿ ಅತ್ತಿಂದ ಇತ್ತ ಹೋಗಲು ಸಾಧ್ಯವಾಗದೆ ಇನ್ನೂ ಎಷ್ಟು ಹೊತ್ತು ಅಂತ ಇಲ್ಲೇ ಕಾಯುತ್ತ ನಿಲ್ಲೋದು, ಈ ಕಿರಿಕಿರಿಯೇ ಬೇಡ ಎನ್ನುತ್ತಾ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ್ದಾನೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈತನ ದುಸ್ಸಾಹಸವನ್ನು ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ದೃಶ್ಯಗಳು ನಮ್ಮನ್ನು ಬೆರಗು ಗೊಳಿಸುತ್ತವೆ. ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ರೈಲ್ವೆ ಗೇಟ್ ಮುಚ್ಚಿತ್ತು ಎಂದು ವ್ಯಕ್ತಿಯೊಬ್ಬ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಡಿ ಹೋಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
A guy Lifted his bike on his shoulders to Cross the Railway barrier: pic.twitter.com/ki4dx5BmZZ
— Ghar Ke Kalesh (@gharkekalesh) March 6, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟುತ್ತಿರುವ ದೃಶ್ಯವನ್ನು ಕಾಣಬಹುದು. ರೈಲ್ವೆ ಗೇಟ್ ಮುಚ್ಚಿದ್ದ ಸಂದರ್ಭದಲ್ಲಿ ಇನ್ನೂ ಎಷ್ಟು ಹೊತ್ತು ಇಲ್ಲೇ ಕಾಯುತ್ತ ನಿಲ್ಲೋದು ಎಂದು ಆತ ತನ್ನ ಬೈಕನ್ನು ಹೆಗಲ ಮೇಲೆ ಹೊತ್ತು ರೈಲ್ವೆ ಕ್ರಾಸಿಂಗ್ ದಾಟಿದ್ದಾನೆ.
ಇದನ್ನೂ ಓದಿ: ಹಸುವಿನೊಂದಿಗೆ ಮಿಲನವಾಗಲು ಹೋಗಿ ವೃದ್ಧನಿಗೆ ಗುದ್ದಿದ ಹೋರಿ, ರೈತನ ಪ್ರಾಣವೇ ಹೋಯ್ತು
ಮಾರ್ಚ್ 06 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರಿಗೆಲ್ಲಾ ಸುರಕ್ಷತೆ ಮುಖ್ಯವಲ್ಲ ಎಂದು ಕಾಣುತ್ತದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶಃ ಈತ ಭಾರತದ ಐರನ್ ಮ್ಯಾನ್ ಇರ್ಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತನಿಗೆ ಸಮಯ ವ್ಯರ್ಥ ಮಾಡುವುದು ಇಷ್ಟವಿಲ್ಲ ಎಂದು ಕಾಣಿಸುತ್ತದೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ