Viral: ಚಿಕಿತ್ಸೆಯ ನೆಪದಲ್ಲಿ 1 ಲಕ್ಷ ರೂ. ಪಾವತಿಸುವಂತೆ ಒತ್ತಾಯಿಸಿದ್ದಾರೆ; ಬ್ರೀಥಿಂಗ್ ಪೈಪ್ ಸಮೇತ ಐಸಿಯುನಿಂದ ತಪ್ಪಿಸಿಕೊಂಡು ಹೋದ ರೋಗಿ
ಚಿಕಿತ್ಸೆಯ ನೆಪದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ಹಣ ಪೀಕುತ್ತವೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ಆಘಾತಕಾರಿ ಘಟನೆ ನಡೆದಿದ್ದು, ಆಸ್ಪತ್ರೆಯ ಹಗರಣಗಳನ್ನು ಬಯಲು ಮಾಡಲು ರೋಗಿಯೊಬ್ಬ ಐಸಿಯುನಿಂದಲೇ ಓಡಿ ಹೋಗಿ, ನಾನು ಕೋಮಾದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಚಿಕಿತ್ಸೆಯ ನೆಪದಲ್ಲಿ ನನ್ನ ಕುಟುಂಬದವರಿಂದ 1 ಲಕ್ಷ ರೂ. ಹಣ ಪಾವತಿ ಮಾಡುವಂತೆ ಹೇಳಿದ್ದಾರೆ ಎಂದು ಆರೋಪಿಸಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ಮಧ್ಯ ಪ್ರದೇಶ, ಮಾ. 07: ಖಾಸಗಿ ಆಸ್ಪತ್ರೆಗಳು (Privet Hospitals) ಚಿಕಿತ್ಸೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆಯುವ ಮೂಲಕ ಬಡ ಜನರ ಜೀವವನ್ನು ಹಿಂಡುತ್ತವೆ ಎಂದು ಜನ ಮಾತಾಡಿಕೊಳ್ಳುವುದನ್ನು ಅಥವಾ ದೂರುಗಳು ಕೇಳಿ ಬರುವುದನ್ನು ನೋಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಘಟನೆ ಬೆಳಕಿಗೆ ಬಂದಿದ್ದು, ಖಾಸಗಿ ಆಸ್ಪತ್ರೆಯಲ್ಲಿ ನಡೆಯುವ ಹಗರಣಗಳನ್ನು ಎಲ್ಲರೆದುರಲ್ಲೂ ಬಯಲು ಮಾಡಲು ರೋಗಿಯೊಬ್ಬ ಐಸಿಯುನಿಂದಲೇ ಓಡಿ ಹೋಗಿದ್ದಾನೆ. ನಾನು ಕೋಮಾದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಚಿಕಿತ್ಸೆಯ ನೆಪದಲ್ಲಿ ನನ್ನ ಕುಟುಂಬದವರಿಂದ 1 ಲಕ್ಷ ರೂ. ಹಣ ಪಾವತಿ ಮಾಡುವಂತೆ ಹೇಳಿದ್ದಾರೆ ಎಂದು ಆತ ಆರೋಪಿಸಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಮಧ್ಯಪ್ರದೇಶ ರತ್ಲಂನಲ್ಲಿ ನಡೆದಿದ್ದು, ನನ್ನನ್ನು ಐಸಿಯುನಲ್ಲಿ ಕೂಡಿ ಹಾಕಿ ನನ್ನ ಕುಟುಂಬದವರ ಬಳಿ 1 ಲಕ್ಷ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ರೋಗಿಯೊಬ್ಬ ಖಾಸಗಿ ಆಸ್ಪತ್ರೆಯ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾನೆ. ಐಸಿಯುನಲ್ಲಿದ್ದ ಆತ ಬ್ರೀಥಿಂಗ್ ಪೈಪ್ ಸಮೇತ ತಪ್ಪಿಸಿಕೊಂಡು ಹೋಗಿ, ಆಸ್ಪತ್ರೆಯ ಆವರಣದಲ್ಲಿ ನಿಂತು, ಅದೇ ಆಸ್ಪತ್ರೆಯ ವಿರುದ್ಧ ಪ್ರತಿಭಟಿಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Patient held captive in ICU and money extorted from relatives! Patient Ran escaped (A Pvt Hospital in Ratlam restrained a patient in the ICU and told the family that he went to coma and extorted 2 lacs from them in the name of treatment) Ratlam MP pic.twitter.com/zk94rWzZ2u
— Ghar Ke Kalesh (@gharkekalesh) March 6, 2025
ಫ್ರೀ ಪ್ರೆಸ್ ಜರ್ನಲ್ ವರದಿ ಪ್ರಕಾರ, “ದೀನದಯಾಳ್ ನಗರದ ನಿವಾಸಿ ಬಂಟಿ ನಿನಾಮ ಎಂಬವ ಯಾವುದೋ ಜಗಳದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದನು. ಆತನ ಬೆನ್ನು ಮೂಳೆ ಮುರಿದು ಹೋದ ಪರಿಣಾಮ ಆತ ಕೋಮಾಗೆ ಜಾರಿದ್ದು, ತಕ್ಷಣ ದುಬಾರಿ ಚಿಕಿತ್ಸೆಯ ಅಗತ್ಯವಿದೆ, ಆದಷ್ಟು ಬೇಗ ಹಣ ಹೊಂದಿಸಿ ಎಂದು ಆತನ ಕುಟುಂಬಕ್ಕೆ ವೈದ್ಯರು ತಿಳಿಸಿದ್ದಾರೆ. ಗಂಡನ ಜೀವ ಉಳಿಸುವ ಸಲುವಾಗಿ ಆತನ ಪತ್ನಿ ಮತ್ತು ತಾಯಿ ಸಂಬಂಧಿಕರು ಹಾಗೋ ಹೀಗೋ 1 ಲಕ್ಷ ರೂಪಾಯಿ ಹಣವನ್ನು ಹೊಂದಿಸುತ್ತಾರೆ. ವೈದ್ಯರು ಹಣವನ್ನು ಪೀಕುವ ಸಲುವಾಗಿಯೇ ಹೀಗೆಲ್ಲಾ ಮಾಡ್ತಿದ್ದಾರೆ ಎಂದು ಅರಿತ ಆ ರೋಗಿ ಐಸಿಯುನಿಂದಲೇ ತಪ್ಪಿಸಿಕೊಂಡು ಹೋಗಿದ್ದಾನೆ. ಮತ್ತು ಆಸ್ಪತ್ರೆಯ ಆವರಣದಲ್ಲಿ ಜನರನ್ನು ಒಟ್ಟುಗೂಡಿಸಿ ಆಸ್ಪತ್ರೆಗಳು ಹೇಗೆಲ್ಲಾ ಜನರಿಗೆ ಮೋಸ ಮಾಡುತ್ತವೆ” ಎಂಬುದನ್ನು ತಿಳಿಸುತ್ತಾ ಆಕ್ರೋಶವನ್ನು ಹೊರ ಹಾಕಿದ್ದಾನೆ.
ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೋಗಿಯೊಬ್ಬ ಬ್ರೀಥಿಂಗ್ ಪೈಪ್ ಸಮೇತ ಐಸಿಯುನಿಮದ ತಪ್ಪಿಸಿಕೊಂಡು ಬಂದಂತಹ ದೃಶ್ಯವನ್ನು ಕಾಣಬಹುದು. ಜೊತೆಗೆ ಆತನ ಹೆಂಡತಿ ನಿಮ್ಮ ಗಂಡ ಕೋಮಾಗೆ ಹೋಗಿದ್ದಾರೆ ಎಂದು ಹೇಳಿ ವೈದ್ಯರು ದುಬಾರಿ ಔಷಧಿ ಮತ್ತು ಚಿಕಿತ್ಸೆಗಾಗಿ ಹಣವನ್ನು ಪೀಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 5 ವರ್ಷಗಳ ಕಾನೂನು ಹೋರಾಟದ ಬಳಿಕ ಪತ್ನಿ ಹೂಡಿದ್ದ ಸುಳ್ಳು ವರದಕ್ಷಿಣೆ ಪ್ರಕರಣದಿಂದ ಮುಕ್ತಿ ಪಡೆದ ಪತಿರಾಯ
ಮಾರ್ಚ್ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 73 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಹೆಚ್ಚಿನ ಆಸ್ಪತ್ರೆಯ ಸಮಸ್ಯೆಯಾಗಿದೆ. ಕಾರಣವಿಲ್ಲದೆ ಹೆಚ್ಚು ಹೆಚ್ಚು ಬಿಲ್ ಹಾಕ್ತಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಎತ್ತ ಸಾಗುತ್ತಿದ್ದ ಭಾರತದ ವೈದ್ಯಕೀಯ ಸ್ಥಿತಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಎಲ್ಲಾ ಸುಲಿಗೆಕೋರರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗ್ಲೇ ಬೇಕುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ