ಬರೋಬ್ಬರಿ 5 ವರ್ಷಗಳ ಕಾನೂನು ಹೋರಾಟದ ಬಳಿಕ ಪತ್ನಿ ಹೂಡಿದ್ದ ಸುಳ್ಳು ವರದಕ್ಷಿಣೆ ಪ್ರಕರಣದಿಂದ ಮುಕ್ತಿ ಪಡೆದ ಪತಿರಾಯ
ಇತ್ತೀಚಿನ ದಿನಗಳಲ್ಲಿ ಸುಳ್ಳು ವರದಕ್ಷಿಣೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕೆಲವೊಂದಿಷ್ಟು ಮಹಿಳೆಯರು ಕಾನೂನನ್ನು ದುರುಪಯೋಗಡಿಸಿಕೊಂಡು ಪತಿ ಮತ್ತು ಕುಟುಂಬಸ್ಥರ ವಿರುದ್ಧ ಸುಳ್ಳು ವರದಕ್ಷಿಣೆ ಮತ್ತು ಕಿರುಕುಳದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಪ್ರಕರಣ ನಡೆದಿದ್ದು, ಪತ್ನಿಯು ತನ್ನ ಗಂಡನ ವಿರುದ್ಧವೇ ವರದಕ್ಷಿಣೆ ಮತ್ತು ದೌರ್ಜನ್ಯದ ಸುಳ್ಳು ಕೇಸ್ ದಾಖಲಿಸಿದ್ದಳು. ಇದೀಗ ಬರೋಬ್ಬರಿ 5 ವರ್ಷಗಳ ಕಾನೂನು ಹೋರಾಟದ ಬಳಿಕ ಗಂಡನಿಗೆ ಸುಳ್ಳು ಕೇಸ್‌ನಿಂದ ಸುಪ್ರೀಂಕೋರ್ಟ್ ಮುಕ್ತಿ ನೀಡಿದೆ.

ಮಹಿಳೆಯರು ತಮಗಿರುವ ಕಾನೂನನ್ನು ದುರುಪಯೋಗಪಡಿಸಿಕೊಂಡು ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಸುಳ್ಳು ವರದಕ್ಷಿಣೆ ಮತ್ತು ಕಿರುಕುಳದ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಈ ಸುಳ್ಳು ಕೇಸ್, ನ್ಯಾಯ ಯಾವತ್ತೂ ನಮ್ಮ ಪರವಾಗಿರಲ್ಲ ಹಾಗೂ ಹೆಂಡ್ತಿಯರ ಕಾಟ ಈ ಎಲ್ಲದರಿಂದ ಬೇಸತ್ತು ಅದೆಷ್ಟೋ ಪುರುಷರು ಆತ್ಮಹತ್ಯೆ ಮಾಡಿಕೊಂಡಿಕೊಂಡಿದ್ದಾರೆ. ಅದೇ ರೀತಿ ಇಲ್ಲೊಂದು ಪ್ರಕರಣ ನಡೆದಿದ್ದು, ಪತ್ನಿಯು ತನ್ನ ಗಂಡನ ವಿರುದ್ಧವೇ ವರದಕ್ಷಿಣೆ ಮತ್ತು ದೌರ್ಜನ್ಯದ ಸುಳ್ಳು ಕೇಸ್ ದಾಖಲಿಸಿದ್ದಳು. ಇದೀಗ ಬರೋಬ್ಬರಿ 5 ವರ್ಷಗಳ ಕಾನೂನು ಹೋರಾಟದ ಬಳಿಕ ಗಂಡನಿಗೆ ಸುಳ್ಳು ಕೇಸ್‌ನಿಂದ ಸುಪ್ರೀಂಕೋರ್ಟ್ ಮುಕ್ತಿ ನೀಡಿದೆ.
2019 ರಲ್ಲಿ ಮಹಿಳೆಯೊಬ್ಬಳು ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಹಾಗೂ ದೌರ್ಜನ್ಯದ ಸುಳ್ಳು ಕೇಸ್ ದಾಖಲಿಸಿದ್ದಳು. ಆಕೆಯ ದೂರಿನ ಆಧಾರದ ಮೇಲೆ ಪೊಲೀಸರು 2019 ರಲ್ಲಿ ಆಕೆಯ ಪತಿ ಮತ್ತು ಆಕೆಯ ಅತ್ತೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ 498A , 504, 506 ದೌರ್ಜನ್ಯ ಕಾಯ್ದೆ ಮತ್ತು ವರದಕ್ಷಿಣೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
2023 ರಲ್ಲಿ ಮೈಸೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಆ ಮಹಿಳೆ ತನ್ನ ಪತಿ ‘ಲೈಂಗಿಕ ಹುಚ್ಚ’ ಮತ್ತು ‘ಮಾದಕ ವ್ಯಸನಿ’ ಎಂಬ ಆರೋಪವನ್ನು ಹೊರೆಸಿದ್ದಳು. ಅಷ್ಟೇ ಅಲ್ಲದೆ ತನ್ನ ತಂದೆ ನನ್ನ ಪತಿಯ ಬೇಡಿಕೆಯ ಮೇರೆಗೆ ಬಾಡಿಗೆ, ವಿದೇಶ ಪ್ರವಾಸಕ್ಕೆ ಸೇರಿದಂತೆ ಹಲವಾರು ವಿಷಯಗಳಿಗೆ ಹಣವನ್ನು ಕೊಟ್ಟಿದ್ದಾರೆ. ಜೊತೆಗೆ ಅತ್ತೆಮಾವ ಬೆಂಗಳೂರಿನ ನಮ್ಮ ಮನೆಗೆ ಬಂದಾಗಲೆಲ್ಲಾ ನನಗೆ ಕಿರುಕುಳ ನೀಡುತ್ತಿದ್ದರು, ಜಾತಿ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಳು. ಆದರೆ ಆಕೆ ಪತಿ ವಿರುದ್ಧ ನೀಡಿದ್ದ ಲೈಂಗಿಕ ಹುಚ್ಚ ಮತ್ತು ಮಾದಕ ವ್ಯಸನಿ ಆರೋಪವನ್ನು ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಮತ್ತು 2023 ರಲ್ಲಿ, ಹೈಕೋರ್ಟ್ SC/ST ಕಾಯ್ದೆ ಮತ್ತು ಸೆಕ್ಷನ್ 504 ಮತ್ತು 506 ರ ಅಡಿಯಲ್ಲಿ ಆರೋಪಗಳನ್ನು ರದ್ದುಗೊಳಿಸುವ ಮೂಲಕ ಗಂಡನಿಗೆ ಭಾಗಶಃ ಪರಿಹಾರವನ್ನು ನೀಡಿತು ಆದರೆ ಸೆಕ್ಷನ್ 498A ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಗೆ ಸಂಬಂಧಿಸಿದ ಕೇಸ್‌ಗೆ ಯಾವುದೇ ಪರಿಹಾರವನ್ನು ನೀಡಿರಲಿಲ್ಲ. ಹೀಗಾಗಿ ತಾನು ನಿರಪರಾಧಿ ಎಂದು ಸಾಬೀತು ಪಡಿಸಲು ಪತಿ ಸುಪ್ರೀಂ ಕೋರ್ಟ್ ಮೊರೆ ಹೋದನು. ಇದೀಗ ಕೋರ್ಟ್ ಬರೋಬ್ಬರಿ 5 ವರ್ಷಗಳ ಬಳಿಕ ಅಂತಿಮವಾಗಿ ಅವನ ಪರವಾಗಿ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ತೀರ್ಪು:
ಐದು ವರ್ಷಗಳ ಕಾನೂನು ಹೋರಾಟದ ನಂತರ, ಸುಪ್ರೀಂ ಕೋರ್ಟ್ ಸೆಕ್ಷನ್ 498A, SC/ST ದೌರ್ಜನ್ಯ ಕಾಯ್ದೆ ಮತ್ತು ವರದಕ್ಷಿಣೆ ಕಾಯ್ದೆಯಡಿಯಲ್ಲಿ ದಾಖಲಿಸಲಾಗಿದ್ದ ಸುಳ್ಳು ಕೇಸ್ ಹಾಗೂ ಆರೋಪಗಳಿಂದ ಮುಕ್ತಿ ನೀಡಿ ಪತಿಯ ಪರವಾಗಿ ತೀರ್ಪು ನೀಡಿದೆ.
ವೈಯಕ್ತಿಕ ದ್ವೇಷಕ್ಕಾಗಿ ಸೆಕ್ಷನ್ 498A ಅನ್ನು ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ಸುಪ್ರೀಂ ಕೋರ್ಟ್ ಎಚ್ಚರಿಕೆ:
ಜನವರಿ 15, 2025 ರಂದು ನೀಡಿದ ತನ್ನ ತೀರ್ಪಿನಲ್ಲಿ, ಸುಪ್ರೀಂ ಕೋರ್ಟ್ ಸೆಕ್ಷನ್ 498A ಯ ದುರುಪಯೋಗವನ್ನು ಬಲವಾಗಿ ಖಂಡಿಸಿತು. ಕ್ರಿಮಿನಲ್ ಕಾನೂನನ್ನು ಕಿರುಕುಳ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ಒಂದು ಸಾಧನವಾಗಿ ಬಳಸಬಾರದು ಎಂದು ಎಚ್ಚರಿಕೆ ನೀಡಿದೆ. ಜೊತೆಗೆ “ಐಪಿಸಿ ಸೆಕ್ಷನ್ 498A ಮತ್ತು ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ದುರುಪಯೋಗವನ್ನು ತಡೆಗಟ್ಟಲು ಎಚ್ಚರಿಕೆಯಿಂದ ಮತ್ತು ಸಮತೋಲನದಿಂದ ಕಾರ್ಯ ನಿರ್ವಹಿಸಬೇಕು. ಈ ಕಾನೂನುಗಳು ಮಹಿಳೆಯರನ್ನು ಕ್ರೌರ್ಯ ಮತ್ತು ವರದಕ್ಷಿಣೆ ಕಿರುಕುಳದಿಂದ ರಕ್ಷಿಸಲು ಅಸ್ತಿತ್ವದಲ್ಲಿದ್ದರೂ, ಕೆಲವರು ವೈಯಕ್ತಿಕ ದ್ವೇಷಕ್ಕೆ ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹೀಗೆ ದುರುದ್ದೇಶಗಳಿಗೆ ಈ ಕಾನೂನು ದುರುಪಯೋಗವಾಗಬಾರದು” ಎಂದು ಹೇಳಿದೆ.
ಇದನ್ನೂ ಓದಿ: ಬೋರ್‌ವೆಲ್ ಕೊರೆಸುವಾಗ ಬಾನೆತ್ತರಕ್ಕೆ ಚಿಮ್ಮಿದ ನೀರು; ರೈತನಿಗೆ ಹರ್ಷ ತಂದ ಕ್ಷಣ ಹೇಗಿತ್ತು ನೋಡಿ
ಅಷ್ಟೇ ಅಲ್ಲದೆ ಇಂತಹ ದೂರುಗಳನ್ನು ದಾಖಲಿಸಿದಾಗ ಸಂಪೂರ್ಣ ತನಿಖೆಯನ್ನು ನಡೆಸಿಯೇ ಪ್ರಕರಣ ದಾಖಲಿಸಬೇಕು ಜೊತೆಗೆ ಆರೋಪಗಳು ಸುಳ್ಳು ಎಂದು ಸಾಬೀತಾದ ಪ್ರಕರಣಗಳಲ್ಲಿ ದೂರುದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:41 pm, Fri, 7 March 25