Viral: ಬೋರ್‌ವೆಲ್ ಕೊರೆಸುವಾಗ ಬಾನೆತ್ತರಕ್ಕೆ ಚಿಮ್ಮಿದ ನೀರು; ರೈತನಿಗೆ ಹರ್ಷ ತಂದ ಕ್ಷಣ ಹೇಗಿತ್ತು ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಕಾಣಸಿಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ನಮ್ಮ ಮನ ಗೆಲ್ಲುತ್ತವೆ. ಅಂತಹದ್ದೊಂದು ಹೃದಯಸ್ಪರ್ಶಿ ದೃಶ್ಯ ಇದೀಗ ವೈರಲ್ ಆಗಿದ್ದು, ರೈತರೊಬ್ಬರು ಬೋರ್‌ವೆಲ್ ಕೊರೆಸುವಾಗ ನೀರು ಸಿಕ್ಕ ಖುಷಿಗೆ ಹೃದಯ ತುಂಬಿ ಕುಣಿದಿದ್ದಾರೆ. ಕೃಷಿಯ ಸಲುವಾಗಿ ಜಮೀನಿನಲ್ಲಿ ಕೊಳವೆ ಬಾರಿ ಕೊರೆಸಿದ್ದು, ಹೀಗೆ ಬೋರ್‌ವೆಲ್ ಕೊರೆಯುವಾಗ ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು, ಈ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.

ಹೆಚ್ಚಿನವರು ಕೃಷಿಗಾಗಿ, ಕುಡಿಯುವ ನೀರಿಗಾಗಿ ಬೋರ್‌ವೆಲ್ (Borewell) ಕೊರೆಸುತ್ತಾರೆ. ಆದ್ರೆ ಬೋರ್‌ವೆಲ್ ಕೊರೆಸುವುದು ಅಷ್ಟು ಸುಲಭದ ಮಾತಲ್ಲ. ಹೌದು ಲಕ್ಷ ಲಕ್ಷ ಖರ್ಚು ಮಾಡಿ ಅದೆಷ್ಟೇ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗುವುದಿಲ್ಲ. ನೀರಿನ ಅಂಶವಿರುವ ಪಕ್ಕದಲ್ಲೇ ಕೊಳವೆ ಬಾವಿ ಕೊರೆದರೂ ನೀರು ಸಿಗದೇ ಹೋದ ಉದಾಹರಣೆಗಳಿವೆ. ಈ ಎಲ್ಲಾ ಸಮಸ್ಯೆಗಳಿರುವಾಗ ಬೋರ್‌ವೇಲ್ ಕೊರೆಸುವಾಗ ನೀರು ಸಿಕ್ಕಿದ್ರೆ ಅದರ ಖುಷಿಯೇ ಬೇರೆ. ಅದರಲ್ಲೂ ಪ್ರಮುಖವಾಗಿ ರೈತರ ಆನಂದಕ್ಕೆ ಪಾರವೇ ಇರುವುದಿಲ್ಲ. ಇದಕ್ಕೆ ಉದಾಹರಣೆಯಂತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ರೈತರೊಬ್ಬರು ಬೋರ್‌ವೆಲ್ ಕೊರೆಸುವಾಗ ನೀರು ಸಿಕ್ಕ ಖುಷಿಗೆ ಹೃದಯ ತುಂಬಿ ಕುಣಿದಿದ್ದಾರೆ. ಕೃಷಿಯ ಸಲುವಾಗಿ ಜಮೀನಿನಲ್ಲಿ ಕೊಳವೆ ಬಾರಿ ಕೊರೆಸಿದ್ದು, ಹೀಗೆ ಬೋರ್‌ವೆಲ್ ಕೊರೆಯುವಾಗ ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು, ಈ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಹೊಲದಲ್ಲಿ ಬೋರ್‌ವೇಲ್ ಕೊರೆಸುವಾಗ ನೀರು ಬಾನೆತ್ತರಕ್ಕೆ ಚಿಮ್ಮಿದ್ದು, ಗಂಗೆ ಸಿಕ್ಕ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಆ ನೀರನ್ನು ತೀರ್ಥದಂತೆ ಒರೆಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸಖತ್ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
అందరికీ అర్థం కాదు ఈ సంతోషం 🩷#Telangana #TelanganaPublicTalk pic.twitter.com/qjOoorRWbN
— నా తెలంగాణ 🫰🏻😍 (@NaaTelanganaa) March 2, 2025
NaaTelanganaa ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, “ಈ ಸಂತೋಷವೇನು ಎಂದು ಎಲ್ಲರಿಗೂ ಅರ್ಥವಾಗಲ್ಲ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೈತರೊಬ್ಬರು ಕೊಳವೆಬಾವಿ ಕೊರೆಸುವಾಗ ನೀರು ಸಿಕ್ಕ ಖುಷಿಗೆ ಕುಣಿದು ಕುಪ್ಪಳಿಸುವಂತಹ ದೃಶ್ಯವನ್ನು ಕಾಣಬಹುದು. ನಂತರ ಅದೇ ನೀರನ್ನು ತೀರ್ಥದಂತೆ ಸ್ವೀಕರಿಸಿ ಅದನ್ನು ತಲೆಗೆ ಒರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಮಲಗಿದ್ದ ವೇಳೆ ಸಹ ಪ್ರಯಾಣಿಕನಿಗೆ ಮುತ್ತಿಟ್ಟ ವ್ಯಕ್ತಿ; ರೈಲಿನಲ್ಲಿ ನಡೆಯಿತು ಹೈಡ್ರಾಮಾ
ಮಾರ್ಚ್ 02 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.9 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಸಂತಸ, ಅದಕ್ಕಿಂತ ಮೊದಲಾಗುವ ದಿಗಿಲು ಈ ಎಲ್ಲಾ ಭಾವನೆ ಕೇವಲ ರೈತನಿಗೆ ಮಾತ್ರ ಗೊತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಸಂತೋಷ ಏನೆಂದು ನಾನು ಅರ್ಥ ಮಾಡಬಲ್ಲೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ