Viral: ಜಾಗ ಮಾರಾಟಕ್ಕಿದೆ, ಆದ್ರೆ ಸಸ್ಯಹಾರಿಗಳಿಗೆ ಮಾತ್ರ; ವೈರಲ್ ಆಯ್ತು ಜಾಹೀರಾತು ಫಲಕ
ಸಾಮಾನ್ಯವಾಗಿ ನೀವೆಲ್ಲರೂ ಸೈಟ್ ಮಾರಾಟಕ್ಕಿದೆ ಎಂದು ಖಾಲಿ ಸೈಟ್ ಪಕ್ಕದಲ್ಲಿ ಜಾಹೀರಾತು ಫಲಕಗಳನ್ನು ಹಾಕಿರುವಂತಹ ದೃಶ್ಯಗಳನ್ನು ನೋಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಜಾಹೀರಾತಿನ ಫೋಟೋ ವೈರಲ್ ಆಗಿದ್ದು, ಈ ಜಾಹೀರಾತಿನಲ್ಲಿ ಜಾಗ ಕೇವಲ ಸಸ್ಯಹಾರಿಗಳಿಗೆ ಮಾತ್ರ ಎಂದು ಬರೆಯಲಾಗಿದೆ. ಈ ವಿಶಿಷ್ಟ ಜಾಹೀರಾತು ಫಲಕವನ್ನು ಕಂಡು ಇದೇನಪ್ಪಾ ವಿಚಿತ್ರ ಎಂದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಶುದ್ಧ ಸಸ್ಯಹಾರಿ ಅಥವಾ ಸಸ್ಯಹಾರಿಗಳಿ ಮಾತ್ರ ಎಂಬ ಫ್ಲೆಕ್ಸ್, ಬೋರ್ಡ್ಸ್‌ಗಳನ್ನು ಹೆಚ್ಚಾಗಿ ಹೋಟೆಲ್, ಕ್ಯಾಂಟಿನ್‌ಗಳಲ್ಲಿ ಮಾತ್ರ ನೋಡಿರುತ್ತೀರಿ ಅಲ್ವಾ. ಬುಹುಶಃ ಹೋಟೆಲ್ ಬಿಟ್ಟು ಬೇರೆಲ್ಲೂ ಇಂತಹ ಬರಹವಿರುವ ಬೋರ್ಡ್‌ಗಳು ಕಾಣ ಸಿಗಲಿಕ್ಕಿಲ್ಲ. ಆದ್ರೆ ಇಲ್ಲೊಂದು ವಿಚಿತ್ರವೆನಿಸುವ ಇಂತಹ ಫೋಟೋ ವೈರಲ್ ಆಗಿದ್ದು, ಬಿಲ್‌ಬೋರ್ಡ್‌ನಲ್ಲಿ ಸಸ್ಯಹಾರಿಗಳಿಗಾಗಿ ಸೈಟ್ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ನೀಡಲಾಗಿದೆ. ಈ ವಿಚಿತ್ರ ಜಾಹೀರಾತು ಫಲಕವನ್ನು ಕಂಡು ಇರ್ಲಿ ನಿಮ್ಗೆಲ್ಲಾ ಎಲ್ಲಾ ಆಹಾರವನ್ನು ತಿನ್ನುವ ಹಕ್ಕಿರುವಂತೆ, ಅವರಿಗೆ ತಮ್ಮಿಷ್ಟದವರಿಗೆ ಜಾಗ ಮಾರುವ ಹಕ್ಕಿದೆ ಎಂದು ಇದರ ಪರವಾಗಿ ಮಾತನಾಡಿದರೆ ಇನ್ನೂ ಕೆಲವರು ಜನ ಹಿಂಗೂ ಇರ್ತಾರಾ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಜಾಗ ಸೈಟ್ ಮಾರಾಟದ ಜಾಹೀರಾತು ಫಲಕಗಳಲ್ಲಿ ಎಷ್ಟು ಜಾಗ ಸೇಲ್‌ಗಿದೆ, ಸ್ಥಳ ಎಲ್ಲಿ ಹಾಗೂ ಸಂಪರ್ಕ ವಿವರಗಳನ್ನು ನೀಡಲಾಗುತ್ತದೆ. ಆದ್ರೆ ಇಲ್ಲೊಂದು ಕಡೆ ಸಸ್ಯಹಾರಿಗಳಿಗೆ ಮಾತ್ರ ಜಾಗ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ನೀಡಿದ್ದಾರೆ.
ವೈರಲ್ ಫೋಟೋ ಇಲ್ಲಿದೆ ನೋಡಿ:
ಅಬಿ ಒಕ್ಕಲಿಗ ಎಂಬವರು ಈ ಕುರಿತ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ “ಸೈಟ್ ಮಾರಾಟಕ್ಕಿದೆ, ಕೇವಲ ಸಸ್ಯಹಾರಿಗಳಿಗೆ ಮಾತ್ರ” ಎಂದು ಜಾಹೀರಾತು ನೀಡಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಈ ಮಹಿಳೆಯ ಡ್ರೀಮ್ ಜಾಬ್ ಅಂತೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ 2 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಜಾತಿ ಹೆಸರಲ್ಲಿ ಕಲ್ಯಾಣ ಮಂಟಪ, ಸಮುದಾಯ ಭವನ ಕಟ್ಟುತ್ತಾರಂತೆ ಹಾಗಿರುವಾಗ ಇದ್ರಲ್ಲೇನೂ ತಪ್ಪಿಲ್ಲʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಹುಶಃ ಅಕ್ಕಪಕ್ಕದ ಮನೆಯವರು ಮಾಂಸ ಬೇಯಿಸಿದರೆ ಕಷ್ಟ ಆಗುತ್ತದೆ ಎಂಬ ನೋವಿರಬಹುದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅವನ ಜಾಗ, ಅವನಿಗೆ ಇಷ್ಟವಾದವರಿಗೆ ಮಾರುತ್ತಾನೆ, ನಿಮಗೇನು ಕಷ್ಟʼ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








