AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ… ಬರೋಬ್ಬರಿ 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಸೇಲ್ ಆದ ಅಂಡರ್‌ವೇರ್; ಇದರ ವಿಶೇಷತೆ ಏನು ಗೊತ್ತಾ?

ಕೆಲವೊಂದು ಪುರಾತಣ ಹಾಗೂ ವಿಶೇಷ ವಸ್ತುಗಳಿಗೆ ಬೆಲೆ ಜಾಸ್ತಿ. ಕೆಲವರಂತೂ ಲಕ್ಷ-ಲಕ್ಷ, ಕೋಟಿಗಟ್ಟಲೆ ಹಣ ಸುರಿದು ಬೇಕಾದರೂ ಹರಾಜಿನಲ್ಲಿ ಇಂತಹ ವಿಶೇಷ ವಸ್ತುಗಳನ್ನು ಖರೀದಿ ಮಾಡ್ತಾರೆ. ಹೀಗೆ ಹರಾಜಿನಲ್ಲಿ ಹಸು, ನಿಂಬೆ ಹಣ್ಣು, ಮದ್ಯ ದುಬಾರಿ ಮೊತ್ತಕ್ಕೆ ಮಾರಾಟವಾದಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಂದು ಅಂಡರ್‌ವೇರ್‌ ಬರೋಬ್ಬರಿ 7 ಲಕ್ಷ ರೂ. ದಾಖಲೆ ಬೆಲೆಗೆ ಸೇಲ್‌ ಆಗಿದೆ. ಅಷ್ಟಕ್ಕೂ ದುಬಾರಿ ಬೆಲೆಗೆ ಹರಾಜಾದ ಈ ಒಳಉಡುಪಿನ ವಿಶೇಷತೆ ಏನು ಎಂಬುದನ್ನು ನೋಡೋಣ ಬನ್ನಿ…

ಅಬ್ಬಬ್ಬಾ… ಬರೋಬ್ಬರಿ 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಸೇಲ್ ಆದ ಅಂಡರ್‌ವೇರ್; ಇದರ ವಿಶೇಷತೆ ಏನು ಗೊತ್ತಾ?
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Mar 05, 2025 | 5:25 PM

Share

ಕೆಲವೊಂದು ಪುರಾತಣ ಹಾಗೂ ವಿಶೇಷ ವಸ್ತುಗಳನ್ನು ಹರಾಜಿನಲ್ಲಿ (Auction) ಮಾರಾಟ ಮಾಡಲಾಗುತ್ತದೆ. ಐತಿಹಾಸಿಕ ಹಿನ್ನೆಲೆಯಿರುವ ವಸ್ತುಗಳು, ಸೆಲೆಬ್ರಿಟಿಗಳ ಉಡುಪುಗಳು, ಅವರು ಬಳಸಿದಂತಹ ವಸ್ತುಗಳು, ಹಸು, ಎಮ್ಮೆ ಸೇರಿದಂತೆ ಕೆಲವೊಂದು ವಿಶೇಷ ತಳಿಯ ಪ್ರಾಣಿಗಳನ್ನು ಸಹ ಹರಾಜಿನಲ್ಲಿ ಮಾರಾಟ ಮಾಡಲಾಗುತ್ತದೆ. ಇನ್ನೂ ಲಕ್ಷ-ಲಕ್ಷ, ಕೋಟಿಗಟ್ಟಲೆ ಹಣ ಸುರಿದು ಇಂತಹ ವಸ್ತುಗಳನ್ನು ಖರೀದಿ ಮಾಡುವವರೂ ಇದ್ದಾರೆ. ಅದೇ ರೀತಿ ಇದೀಗ ಇಲ್ಲೊಂದು ಹರಾಜಿನಲ್ಲಿ ಅಂಡರ್‌ವೇರ್‌ ಬರೋಬ್ಬರಿ 7 ಲಕ್ಷ ರೂ. ದಾಖಲೆ ಬೆಲೆಗೆ ಸೇಲ್‌ ಆಗಿದೆ. ಅಷ್ಟಕ್ಕೂ ದುಬಾರಿ ಬೆಲೆಗೆ ಹರಾಜಾದ ಈ ಒಳಉಡುಪಿನ ವಿಶೇಷತೆ ಏನು ಎಂಬುದನ್ನು ನೋಡೋಣ ಬನ್ನಿ…

ದುಬಾರಿ ಮೊತ್ತಕ್ಕೆ ಹರಾಜಾದ ಈ ಒಳ ಉಡುಪಿನ ವಿಶೇಷತೆ ಏನು?

ಅಮೆರಿಕದಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ 7 ಲಕ್ಷ ರೂ. ದಾಖಲೆ ಮೊತ್ತಕ್ಕೆ ಅಂಡರ್‌ವೇರ್‌ ಸೇಲ್‌ ಆಗಿದೆ. ಇಲ್ಲಿ ನಡೆದ ವಿಶಿಷ್ಟ ಹರಾಜಿನಲ್ಲಿ, ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ (ಜೆಎಫ್‌ಕೆ) ಧರಿಸಿದ್ದ ಒಳ ಉಡುಪು 7.5 ಲಕ್ಷ ರೂ.ಗೆ ಮಾರಾಟವಾಗಿದೆ. 1940 ರ ದಶಕದ ಈ ಒಳ ಉಡುಪುಗಳ ಮೇಲೆ ‘Jack’ ಎಂಬ ಕಸೂತಿ ಮಾಡಲಾಗಿತ್ತು. ಹೆಚ್ಚಿನ ಬಿಡ್‌ನಿಂದಾಗಿ ಈ ಹರಾಜು ಚರ್ಚೆಯ ವಿಷಯವಾಗಿತ್ತು. ಕೊನೆಗೆ ಇದು $9,100 ಡಾಲರ್‌ ಅಂದ್ರೆ ಸುಮಾರು ರೂ. 7.5 ಲಕ್ಷ ರೂ. ಗೆ ಮಾರಾಟವಾಗಿದೆ. ಅಷ್ಟೇ ಅಲ್ಲದೆ ಈ ಹರಾಜಿನಲ್ಲಿ ಫೇಸ್‌ಬುಕ್‌ ಸಹ-ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ಗೆ ಸೇರಿದ ಹೂಡಿ ಮತ್ತು ಆಪಲ್‌ ಸಹ-ಸಂಸ್ಥಾಪಕ ಸ್ಟೀವ್‌ ಜಾಬ್ಸ್‌ ಅವರ ಬೋ ಟೈಯನ್ನು ಕೂಡಾ ಹರಾಜಿನಲ್ಲಿ ಇಡಲಾಗಿತ್ತು. ಇನ್ನೂ ಮಾರ್ಕ್‌ ಜುಕರ್‌ಬರ್ಗ್‌ ಹೂಡಿ ಬಟ್ಟೆ $15,875 (ಸುಮಾರು 13 ಲಕ್ಷ ರೂ.) ಗೆ ಮಾರಾಟವಾಯಿತು. ಈ ವಿಶಿಷ್ಟ ಹರಾಜಿನ ಸುದ್ದಿ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
Image
ಸಂಗಾತಿಯನ್ನು ಆಯ್ಕೆ ಮಾಡೋ ಮುನ್ನ ಫ್ಲಡ್‌ಲೈಟಿಂಗ್‌ ಡೇಟಿಂಗ್‌ ಬಗ್ಗೆ ತಿಳಿಯಿ
Image
100 ಪುಟಗಳ ಬಜೆಟ್‌ ಪ್ರತಿಯನ್ನು ಕೈಯಲ್ಲೇ ಬರೆದು ಮಂಡಿಸಿ ದಾಖಲೆ ಬರೆದ ಸಚಿವ
Image
ರಶ್ಮಿಕಾ ತಲೆ ಬೋಳಿಸಿದ ಕುದ್ರೋಳಿ ಗಣೇಶ್‌; ಇಲ್ಲಿದೆ ನೋಡಿ ವಿಡಿಯೋ
Image
ಬೆಂಗಳೂರಿನಲ್ಲಿ ಪಿಜಿ ಓನರ್ ಆಗೋದೇ ಈ ಮಹಿಳೆಯ ಡ್ರೀಮ್ ಜಾಬ್ ಅಂತೆ

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ