Viral: ರೋಡಲ್ಲಿ ನಡ್ಕೊಂಡು ಬರ್ತಿದ್ದ ಬಾಲಕನನ್ನು ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳು; ಮುಂದೇನಾಯ್ತು ನೋಡಿ
ರೋಡಲ್ಲಿ ತಮ್ಮ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದವರ ಮೇಲೆ, ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ಏಕಾಏಕಿ ದಾಳಿ ಮಾಡಿದಂತಹ ಆಘಾತಕಾರಿ ಘಟನೆಗಳು ಸಾಕಷ್ಟು ನಡೆದಿವೆ. ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕೋಚಿಂಗ್ ಕ್ಲಾಸ್ ಮುಗಿಸಿ ರೋಡಲ್ಲಿ ನಡ್ಕೊಂಡು ಬರ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪೊಂದು ಅಟ್ಯಾಕ್ ಮಾಡಲು ಮುಂದಾಗಿದೆ. ಬಾಲಕ ತನ್ನ ಸಮಯ ಪ್ರಜ್ಞೆಯಿಂದ ಕಾಂಪೌಂಡ್ ಹಾರುವ ಮೂಲಕ ನಾಯಿಗಳ ದಾಳಿಯಿಂದ ಪಾರಾಗಿದ್ದು, ಈ ಬೆಚ್ಚಿ ಬೀಳಿಸುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಶೇಷವಾಗಿ ಶ್ವಾನಗಳನ್ನು (Dogs) ಮನುಷ್ಯನ ಉತ್ತಮ ಸ್ನೇಹಿತ ಅಂತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಬೀದಿ ನಾಯಿಗಳು ಮನುಷ್ಯನ ಮೇಲೆ ದಾಳಿ ಮಾಡುವ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಆಟವಾಡುತ್ತಿದ್ದ ಮಗುವಿನ ಮೇಲೆ, ಬೀದಿಯಲ್ಲಿ ನಡ್ಕೊಂಡು ಹೋಗ್ತಿದ್ದವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದಂತಹ ಸಾಕಷ್ಟು ಆಘಾತಕಾರಿ ಘಟನೆಗಳು ಸಂಭವಿಸಿದೆ. ಇಲ್ಲೊಂದು ಅದೇ ರೀತಿಯ ಘಟನೆ ನಡೆದಿದ್ದು, ರೋಡಲ್ಲಿ ಒಂಟಿಯಾಗಿ ನಡ್ಕೊಂಡು ಬರ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪೊಂದು ಏಕಾಏಕಿ ಅಟ್ಯಾಕ್ ಮಾಡಲು ಮುಂದಾಗಿದೆ. ಬಾಲಕ ಪ್ರಾಣ ಉಳಿದರೆ ಸಾಕೆನ್ನುತ್ತಾ ಕಾಂಪೌಂಡ್ ಹಾರುವ ಮೂಲಕ ನಾಯಿಗಳ ದಾಳಿಯಿಂದ ಪಾರಾಗಿದ್ದು, ಈ ಬೆಚ್ಚಿ ಬೀಳಿಸುವ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಕನೊಬ್ಬ ಕೋಚಿಂಗ್ ಕ್ಲಾಸ್ ಮುಗಿಸಿ ಒಂಟಿಯಾಗಿ ರೋಡಲ್ಲಿ ನಡ್ಕೊಂಡು ಬರ್ತಿದ್ದ ಸಂದರ್ಭದಲ್ಲಿ ಸುಮಾರು ನಾಲ್ಕರಿಂದ ಐದು ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದಿವೆ. ತಕ್ಷಣ ಬಾಲಕ ಅಲ್ಲೇ ಪಕ್ಕದಲ್ಲಿದ್ದ ಕಾಂಪೌಂಡ್ ಹಾರುವ ಮೂಲಕ ದಾಳಿಯಿಂದ ಪಾರಾಗಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Stray Dogs Chased a Guy who was returning From Coaching Classes: pic.twitter.com/l38agdYbbv
— Ghar Ke Kalesh (@gharkekalesh) March 5, 2025
gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ರೋಡಲ್ಲಿ ಒಬ್ಬಂಟಿಯಾಗಿ ನಡ್ಕೊಂಡು ಬರ್ತಿದ್ದ ಬಾಲಕನನ್ನು ಬೀದಿ ನಾಯಿಗಳ ಗುಂಪೊಂದು ಏಕಾಏಕಿ ಅಟ್ಟಾಡಿಸಿಕೊಂಡು ಬಂದಂತಹ ದೃಶ್ಯವನ್ನು ಕಾಣಬಹುದು. ಹೀಗೆ ನಾಯಿಗಳು ದಾಳಿ ಮಾಡಲು ಮುಂದಾದಾಗ ಬಾಲಕ ಕಾಂಪೌಂಡ್ ಹಾರುವ ಮೂಲಕ ಶ್ವಾನಗಳ ಅಟ್ಯಾಕ್‌ನಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಜಾಗ ಮಾರಾಟಕ್ಕಿದೆ, ಆದ್ರೆ ಸಸ್ಯಹಾರಿಗಳಿಗೆ ಮಾತ್ರ; ವೈರಲ್ ಆಯ್ತು ಜಾಹೀರಾತು ಫಲಕ
ಮಾರ್ಚ್ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ಭಯಾನಕ ಸಮಸ್ಯೆಯಾಗಿ ಕಾಡುತ್ತಿವೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಬಗ್ಗೆ ಎಷ್ಟು ಜಾಗೃತವಾಗಿದ್ದರೂ ಕಮ್ಮಿಯೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬೀದಿ ನಾಯಿಗಳು ತುಂಬಾನೇ ಭಯಾನಕವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








