Viral: ಮಲಗಿದ್ದ ವೇಳೆ ಸಹ ಪ್ರಯಾಣಿಕನಿಗೆ ಮುತ್ತಿಟ್ಟ ವ್ಯಕ್ತಿ; ರೈಲಿನಲ್ಲಿ ನಡೆಯಿತು ಹೈಡ್ರಾಮಾ
ರೈಲಿನಲ್ಲಿ ಪ್ರಯಾಣಿಕರು ಮಾಡುವಂತಹ ಎಡವಟ್ಟು, ಅವಾಂತರಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಟ್ರೈನ್‌ನಲ್ಲಿ ಸಹ ಪ್ರಯಾಣಿಕನಿಗೆ ಮುತ್ತಿಟ್ಟು ವದೆ ತಿಂದಿದ್ದಾನೆ. ವ್ಯಕ್ತಿಯೊಬ್ಬ ಮಲಗಿದ್ದವನಿಗೆ ಬಲವಂತವಾಗಿ ಮುತ್ತಿಟ್ಟಿದ್ದು, ಇದರಿಂದ ಕೋಪಗೊಂಡ ಆ ಸಹಪ್ರಯಾಣಿಕ ಅಸಭ್ಯ ವರ್ತನೆ ತೋರಿದಾತನ ಗ್ರಹಚಾರ ಬಿಡಿಸಿದ್ದಾನೆ.

ಅಗ್ಗದ ಮತ್ತು ಆರಾಮದಾಯಕ ಪ್ರಯಾಣಕ್ಕೆ ಉತ್ತಮ ಎಂದು ಹೆಚ್ಚಿನವರು ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಹೀಗೆ ರೈಲಿನಲ್ಲಿ ಪ್ರಯಾಣಿಸುವಾಗ ಕೆಲವೊಂದು ಪ್ರಯಾಣಿಕರು ಸಹ ಪ್ರಯಾಣಿಕರ ಮೈಮುಟ್ಟುವಂತಹದ್ದು ಅಥವಾ ಚೈನ್ ಎಳೆಯುವಂತಹದ್ದು, ಸೀಟ್‌ಗಾಗಿ ಜಗಳವಾಡುವಂತಹದ್ದು ಹೀಗೆ ಕೆಲವೊಂದಷ್ಟು ಅಧಿಕಪ್ರಸಂಗಗಳನ್ನು ಮಾಡ್ತಿರ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಕಾಣಸಿಗುತ್ತಿರುತ್ತವೆ. ಇಲ್ಲೊಂದು ಕಡೆ ಅಂತಹದ್ದೇ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಟ್ರೈನ್‌ನಲ್ಲಿ ಸಹ ಪ್ರಯಾಣಿಕನಿಗೆ ಮುತ್ತಿಟ್ಟು ವದೆ ತಿಂದಿದ್ದಾನೆ. ವ್ಯಕ್ತಿಯೊಬ್ಬ ಮಲಗಿದ್ದವನಿಗೆ ಬಲವಂತವಾಗಿ ಮುತ್ತಿಟ್ಟಿದ್ದು, ಇದರಿಂದ ಕೋಪಗೊಂಡ ಆ ಸಹಪ್ರಯಾಣಿಕ ಅಸಭ್ಯ ವರ್ತನೆ ತೋರಿದಾತನ ಗ್ರಹಚಾರ ಬಿಡಿಸಿದ್ದಾನೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ವ್ಯಕ್ತಿಯೊಬ್ಬ ನಾನು ಮಲಗಿದ್ದ ವೇಳೆ ಆತ ನನಗೆ ಬಲವಂತವಾಗಿ ಮುತ್ತು ಕೊಟ್ಟ ಎಂದು ಆರೋಪಿಸಿ ಸಹ ಪ್ರಯಾಣಿಕನ ಕಾಲರ್ ಹಿಡಿದು ಸರಿಯಾಗಿ ಏಟು ಕೊಟ್ಟಿದ್ದಾನೆ. ನನಗೆ ಹಾಗೆ ಮಾಡಬೇಕೆಂದೆನಿಸಿತು ಎಂದು ಚುಂಬಿಸಿದಾತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
The guy kissed another guy in train while sleeping. Then said- “maaf kardo, chhod de”
All the bystanders are not even taking this seriously until the man started to get beaten. pic.twitter.com/YtQP3P7cG2
— ShoneeKapoor (@ShoneeKapoor) March 4, 2025
ಶೋನಿ ಕಪೂರ್ (ShoneeKapoor) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಈತ ನನಗೆ ಬಲವಂತವಾಗಿ ಮುತ್ತು ಕೊಟ್ಟಿದ್ದಾನೆ ಎಂದು ಆರೋಪಿಸುತ್ತಿರುವುದನ್ನು ಕಾಣಬಹುದು. ತಪ್ಪು ಮಾಡಿದಾತ ನನಗೆ ಹಾಗೆ ಮಾಡಬೇಕೆಂದೆನಿಸಿತು ಅದಕ್ಕೆ ಕೊಟ್ಟೆ ಎಂದು ತನ್ನ ತಪ್ಪನ್ನು ಸಮರ್ಥಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಇನ್ನಿತರೆ ಪ್ರಯಾಣಿಕರು ಈ ವ್ಯಕ್ತಿ ಸಹಾಯಕ್ಕೆ ಬಾರದಿದ್ದಾಗ ಇದೇ ಜಾಗದಲ್ಲಿ ಒಬ್ಬ ಮಹಿಳೆಯಿದ್ದರೆ ನೀವು ಸುಮ್ಮನಿರುತ್ತಿದ್ದರೇ ಎಂದು ತನ್ನ ಕೋಪವನ್ನು ಹೊರ ಹಾಕಿ ನಂತರ ತಪ್ಪು ಮಾಡಿದಾತನ ಕಾಲರ್ ಎಳೆದು ಎಲ್ಲರೆದುರಲ್ಲೇ ಆತನ ಕಪಾಳಕ್ಕೆ ಬಾರಿಸಿದ್ದಾರೆ.
ಇದನ್ನೂ ಓದಿ: ರೋಡಲ್ಲಿ ನಡ್ಕೊಂಡು ಬರ್ತಿದ್ದ ಬಾಲಕನನ್ನು ಅಟ್ಟಾಡಿಸಿಕೊಂಡು ಬಂದ ಬೀದಿ ನಾಯಿಗಳು; ಮುಂದೇನಾಯ್ತು ನೋಡಿ
ಮಾರ್ಚ್ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 23 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆತ ಹೇಳಿದ್ದು ಸರಿ, ಇದೇ ಜಾಗದಲ್ಲಿ ಒಬ್ಬ ಹೆಣ್ಣು ಮಗುವಿದ್ದರೆ ಅವರೆಲ್ಲ ಸುಮ್ಮನಿರುತ್ತಿದ್ದರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼರೈಲಿನಲ್ಲಿ ಇದೆಂಥಾ ಪರಿಸ್ಥಿತಿʼ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಲಿಯುಗದಲ್ಲಿ ಸಮಾಜ ತುಂಬಾ ಹದಗೆಟ್ಟಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನೂ ಓದಲು ಇಲ್ಲಿ ಕ್ಲಿಕ್ ಮಾಡಿ








