ಶ್ವೇತಾ ಜೊತೆ ಬದುಕಲಾರಂಭಿಸಿದ ನಂತರ ಸೂರ್ಯ ತನ್ನ ಪತ್ನಿ ಮತ್ತು ತಾಯಿಯನ್ನು ಮನೆಯಿಂದ ಹೊರಹಾಕಿದ್ದ!
ಸೂರ್ಯನಿಂದ ದೂರವಾದ ಮೇಲೆ ದೀಪಿಕಾ ತನ್ನಿಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋದರೆ ಅವರ ಅತ್ತೆ ಅಂದರೆ ಸೂರ್ಯನ ತಾಯಿ ಕೂಡ ತನ್ನಮ್ಮನ ಊರಿಗೆ ಹೋಗಿ ಅಲ್ಲೇ ವಾಸಮಾಡಲಾರಂಭಿಸಿದ್ದಾರೆ. ಕೊಲೆ ನಡೆದಿರೋದು ಶ್ವೇತಾ ಮತ್ತು ಸೂರ್ಯ ವಾಸವಾಗಿದ್ದ ಮನೆಯಲ್ಲಿ. ದೀಪಿಕಾ ಹೇಳುವಂತೆ ಶ್ವೇತಾ ಹಣಕ್ಕಾಗಿ ಸೂರ್ಯನನ್ನು ಪೀಡಿಸಲಾರಂಭಿಸಿದ್ದಳು.
ಮೈಸೂರು, 14 ಮಾರ್ಚ್: ಮೈಸೂರು ತಾಲ್ಲೂಕಿನ ಅನುಗನಹಳ್ಳಿಯಲ್ಲಿ ನಿನ್ನೆ ರಾತ್ರಿ ಸೂರ್ಯ ಹೆಸರಿನ ವ್ಯಕ್ತಿಯ ಕೊಲೆ ನಡೆದಿದ್ದು ಅವನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಶ್ವೇತಾ ಎಂಬ ಯುವತಿಯೇ ತನ್ನ ಪತಿಯನ್ನು ಸಾಯಿಸಿದ್ದಾಳೆಂದು ಸೂರ್ಯನ ಪತ್ನಿ ದೀಪಿಕಾ ಹೇಳುತ್ತಾರೆ. ಖಾಸಗಿ ವಾಹಿನಿಯೊಂದರಲ್ಲಿ ಉದ್ಯೋಗಿಯಾಗಿರುವ ಶ್ವೇತಾ ಇನ್ಸ್ಟಾಗ್ರಾಮ್ ಮೂಲಕ ಸೂರ್ಯನಿಗೆ ಹತ್ತಿರವಾಗಿದ್ದಳಂತೆ. ಶ್ವೇತಾಳೊಂದಿಗೆ ಬದುಕಲಾರಂಭಿಸಿದ್ದ ಸೂರ್ಯ ಹೆಂಡತಿ-ಮಕ್ಕಳು ಮತ್ತು ಹೆತ್ತ ತಾಯಿಯನ್ನೂ ಮನೆಯಿಂದ ಹೊರಹಾಕಿದ್ದ ಎಂದು ದೀಪಿಕಾ ಹೇಳುತ್ತಾರೆ. ನಿನ್ನೆ ರಾತ್ರಿ ಸೂರ್ಯ ಮತ್ತು ಶ್ವೇತಾ ಜೊತೆಗಿದ್ದರೆಂದು ಅವರು ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜೀವನ ಅರಸಿ ಬೆಂಗಳೂರಿಗೆ ಬಂದಿದ್ದ ಸುರಪುರದ ದಂಪತಿ, ಅನೈತಿಕ ಸಂಬಂಧ ಶಂಕೆಯಿಂದ ಹೆಂಡತಿಯ ಹತ್ಯೆ ಮಾಡಿದನಾ ಪತಿ?