AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನ ಅರಸಿ ಬೆಂಗಳೂರಿಗೆ ಬಂದಿದ್ದ ಸುರಪುರದ ದಂಪತಿ, ಅನೈತಿಕ ಸಂಬಂಧ ಶಂಕೆಯಿಂದ ಹೆಂಡತಿಯ ಹತ್ಯೆ ಮಾಡಿದನಾ ಪತಿ?

ಪತ್ನಿಯ ಶೀಲ ಶಂಕಿಸಿ ಪತಿಯಿಂದ ಕೊಲೆ ಆರೋಪ.. ಅನೈತಿಕ ಸಂಬಂಧವೇ ಇಬ್ಬರ ಮಧ್ಯೆ ಜಗಳಕ್ಕೆ ಕಾರಣ ಆಗಿದೆಯಾ? ತಾನಾಗಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ಳಾ ಇಲ್ಲವೇ ಪತಿಯೇ ಕೊಲೆ ಮಾಡಿದನಾ.. ಯಾದಗಿರಿಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಈ ವಿದ್ಯಮಾನಗಳು ನಡೆದಿವೆ.

ಜೀವನ ಅರಸಿ ಬೆಂಗಳೂರಿಗೆ ಬಂದಿದ್ದ ಸುರಪುರದ ದಂಪತಿ, ಅನೈತಿಕ ಸಂಬಂಧ ಶಂಕೆಯಿಂದ ಹೆಂಡತಿಯ ಹತ್ಯೆ ಮಾಡಿದನಾ ಪತಿ?
ಅನೈತಿಕ ಸಂಬಂಧ ಶಂಕೆಯಿಂದ ಹೆಂಡತಿಯ ಹತ್ಯೆ ಮಾಡಿದನಾ ಪತಿ?
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​|

Updated on: Feb 23, 2024 | 2:15 PM

Share

ಅವರಿಬ್ಬರಿಗೆ ಕಳೆದ ಎಂಟು ವರ್ಷಗಳ ಹಿಂದೆ ಮದುವೆಯಾಗಿದೆ. ಇಬ್ಬರ ವಿವಾಹ ಬಂಧನಕ್ಕೆ ಸಾಕ್ಷಿ ಎಂಬಂತೆ ಮೂರು ಜನ ಮುದ್ದಾದ ಮಕ್ಕಳು ಇದ್ದಾರೆ.. ಹೊಟ್ಟೆ ಪಾಡಿಗಾಗಿ ದೂರದ ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಇಬ್ಬರ ಮಧ್ಯೆ (couple) ಜಗಳ ನಡೆದ ಕಾರಣಕ್ಕಾಗಿ ಬೆಂಗಳೂರು ಬಿಟ್ಟು ಊರಿಗೆ ಬಂದು ಸೇರಿದ್ದರು. ಆದ್ರೆ ಮೊನ್ನೆ ಬುಧವಾರ ರಾತ್ರಿ ಪತ್ನಿಯ ಶೀಲ ಶಂಕಿಸಿ (illicit relationship) ಪತಿ ಕೊಲೆ ಮಾಡಿದ್ದಾನೆ ಅಂತ ಆರೋಪಿಸಲಾಗಿದೆ.

ಪತ್ನಿಯ ಶೀಲ ಶಂಕಿಸಿ ಪತಿಯಿಂದ ಕೊಲೆ ಆರೋಪ.. ಅನೈತಿಕ ಸಂಬಂಧವೇ ಇಬ್ಬರ ಮಧ್ಯೆ ಜಗಳಕ್ಕೆ ಕಾರಣ ಆಗಿದೆಯಾ? ತಾನಾಗಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ಳಾ ಇಲ್ಲವೇ ಪತಿಯೇ ಕೊಲೆ ಮಾಡಿದನಾ.. ಯಸ್ ಈ ವಿದ್ಯಮಾನಗಳು ನಡೆದಿರುವುದು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ (Surpur, yadgir)..

ಹೌದು ತಿಂಥಣಿ ಗ್ರಾಮದಲ್ಲಿ ದಕ್ಷಿಣ ಕಾಶಿಯೆಂದೆ ಪ್ರಸಿದ್ಧಿಯಾಗಿರುವ ಮೌನೇಶ್ವರ ದೇವರ ಜಾತ್ರೆ ನಡೆದಿದೆ. ಜಾತ್ರೆಗೆ ನಾನಾ ಕಡೆಯಿಂದ ಲಕ್ಷಾಂತರ ಭಕ್ತರ ದಂಡೆ ಹರಿದು ಬರ್ತಾಯಿದೆ. ಇದರ ಮಧ್ಯೆ ಗ್ರಾಮದಲ್ಲಿ ಮೊನ್ನೆ ರಾತ್ರಿ ಕೊಲೆ ನಡೆದಿರೋ ಆರೋಪ ಕೇಳಿ ಬಂದಿದೆ. ಗ್ರಾಮದ 30 ವರ್ಷದ ಹನುಮಂತ ಎಂಬಾತ ತನ್ನ ಪತ್ನಿಯನ್ನ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. 26 ವರ್ಷದ ಮಾಲಾಶ್ರೀ ಎಂಬಾಕೆ ಪರ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ಳು ಅಂತ ಗಂಡ ಶಂಕೆ ವ್ಯಕ್ತಪಡಿಸಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಜಗಳ ಆಗ್ತಾಯಿತ್ತು. ಇದೇ ವಿಚಾರಕ್ಕೆ ಮೊನ್ನೆ ಮಕ್ಕಳ ಜೊತೆ ಮಾಲಾಶ್ರೀ ಮಲಗಿದ್ದಾಗ ಬಟ್ಟೆಯಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ‌ ಮಾಡಿದ ಕೂಡಲೇ ಹನುಮಂತ ನೇರವಾಗಿ ಸುರಪುರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇನ್ನು ಇಬ್ಬರಿಗೂ ಎಂಟು ವರ್ಷಗಳ ಹಿಂದೆ ಮದುವೆಯಾಗಿದೆ. ಊರಲ್ಲಿ ಕೆಲಸ ಇಲ್ಲದ ಕಾರಣಕ್ಕೆ ಇಬ್ಬರೂ ಬೆಂಗಳೂರಿನಲ್ಲೇ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ರು. ದಂಪತಿಗೆ ಮೂರು ಜನ ಮಕ್ಕಳು ಸಹ ಇದ್ದಾರೆ. ಈ ಇಬ್ಬರು ಬೆಂಗಳೂರಿನಲ್ಲಿ ಶೆಡ್ ನಲ್ಲಿ ವಾಸ ಮಾಡಿಕೊಂಡು ಗಾರೆ ಕೆಲಸ ಮಾಡಿಕೊಂಡಿದ್ರು.

ಈ ಇಬ್ಬರು ಕೆಲಸ ಮಾಡುವ ಸ್ಥಳದಲ್ಲೇ ಸುರಪುರ ತಾಲೂಕಿನ ಕರ್ನಾಳ್ ಗ್ರಾಮದ ವ್ಯಕ್ತಿ ಶೆಡ್ ಹಾಕಿಕೊಂಡು ಕೆಲಸ ಮಾಡಿಕೊಂಡಿದ್ದ. ಕರ್ನಾಳ್ ಗ್ರಾಮದ ವ್ಯಕ್ತಿ ಈ ಹನುಮಂತನ ಪತ್ನಿಗೆ ಗಾಳ ಹಾಕಿದ ಅಂತ ಹೇಳಲಾಗುತ್ತಿದೆ. ಇತ್ತ ತನ್ನ ಪತ್ನಿ ಪರ ಪುರುಷನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಹನುಮಂತನಿಗೆ ಶಂಕೆ ಹುಟ್ಟಿಕೊಂಡಿತ್ತು. ಇದೆ ಕಾರಣಕ್ಕೆ ಪತ್ನಿ ಜೊತೆ ಪದೆ ಪದೆ ಜಗಳ ಮಾಡಿಕೊಳ್ಳುತ್ತಿದ್ದ. ಜಗಳ ಮಾಡಿಕೊಳ್ಳುತ್ತಿದ್ದ ಕಾರಣಕ್ಕೆ ಹಿರಿಯರು ಇಬ್ಬರಿಗೂ ಬುದ್ದಿ ಮಾತು ಹೇಳಿದ್ದಾರೆ.

ಬೆಂಗಳೂರಿನಲ್ಲೇ ಇದ್ರೆ ಇದೆ ಜಗಳ ಮಾಡಿಕೊಳ್ಳುತ್ತಾರೆ ಅಂತ ಮಾಲಾಶ್ರೀ ಪೋಷಕರು ಇಬ್ಬರನ್ನೂ ಊರಿಗೆ ಕರೆಸಿಕೊಂಡು ಇಲ್ಲೇ ಕೂಲಿ ಕೆಲಸ ಮಾಡಿಕೊಂಡು ವಾಸ ಮಾಡುವಂತೆ ಹೇಳಿದ್ದಾರೆ. ಇದೆ ಕಾರಣಕ್ಕೆ ಮೂರು ತಿಂಗಳ ಹಿಂದೆ ಗಂಡ ಹೆಂಡ್ತಿ ಇಬ್ಬರು ಬೆಂಗಳೂರು ಬಿಟ್ಟು ಊರಿಗೆ ಬಂದು ಸೇರಿಕೊಂಡಿದ್ದರು. ಆದ್ರೆ ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಜಾತ್ರೆ ನಡೆಯುತ್ತಿದೆ. ಮಾಲಾಶ್ರೀ ಜಾತ್ರೆಗೆ ಹೋದಾಗ ಕರ್ನಾಳ್ ಗ್ರಾಮದ ವ್ಯಕ್ತಿ ಕೂಡ ಬಂದು ಮಾಲಾಶ್ರೀಯನ್ನು ಕಂಡಿದ್ದ ಅಂತ ಹನುಮಂತ ಶಂಕೆ ವ್ಯಕ್ತಪಡಿಸಿದ್ದಾನೆ. ಇದೆ ಕಾರಣಕ್ಕೆ ಮೊನ್ನೆ ರಾತ್ರಿ ಜಗಳ ಆಗಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಒಟ್ನಲ್ಲಿ ಸಮಾಧಾನದಿಂದ ಮಾತಾಡಿಕೊಂಡು ಬಗೆಹರಿಸುವ ವಿಷಯಕ್ಕೆ ಜಗಳ ಮಾಡಿಕೊಂಡು ಕೊಲೆ ಮಾಡಲಾಗಿದೆ. ಆದ್ರೆ ಇದು ಕೊಲೆಯೋ, ಆತ್ಮಹತ್ಯೆನೋ ಅಂತ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಬಯಲು ಮಾಡಬೇಕಾಗಿದೆ.