Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಕುಮಾರ್ ಜೊತೆ ರಾಜಕೀಯೇತರ ಸಂಬಂಧವಿದೆ, ಪ್ರತಿಸಲ ಆತ್ಮೀಯತೆಯಿಂದ ಮಾತಾಡುತ್ತಾರೆ: ರೇಣುಕಾಚಾರ್ಯ

ಶಿವಕುಮಾರ್ ಜೊತೆ ರಾಜಕೀಯೇತರ ಸಂಬಂಧವಿದೆ, ಪ್ರತಿಸಲ ಆತ್ಮೀಯತೆಯಿಂದ ಮಾತಾಡುತ್ತಾರೆ: ರೇಣುಕಾಚಾರ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 14, 2025 | 2:39 PM

ಡಿಸಿಎಂ ಡಿಕೆ ಶಿವಕುಮಾರ್ ಜೊತೆ ರಾಜಕೀಯಕ್ಕೆ ಮಿಗಿಲಾದ ಸಂಬಂಧವಿದೆ, ಕರೆ ಮಾಡಿದಾಗೆಲ್ಲ ಸ್ವೀಕರಿಸಿ ಅತ್ಮೀಯವಾಗಿ ಮಾತಾಡುತ್ತಾರೆ, ಇವತ್ತು ಕೂಡ ತನ್ನ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ರೇಣುಕಾಚಾರ್ಯ ಹೇಳಿದರು. ಅದರೆ ಅವರು ಶಿವಕುಮಾರ್​​ರನ್ನು ಭೇಟಿಯಾದಾಗಲೆಲ್ಲ ಬಿಜೆಪಿ ತೊರೆಯಲಿದ್ದಾರೆಯೇ ಎಂಬ ಗುಮಾನಿ ಹುಟ್ಟಿಕೊಳ್ಳುತ್ತದೆ.

ಬೆಂಗಳೂರು, 14 ಮಾರ್ಚ್: ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿಯಾಗಿ ಕ್ಷೇತ್ರದಲ್ಲಿ ನಿಂತುಹೋಗಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಸುಮಾರು 150 ಕೊಳವೆಬಾವಿಗಳು ಮತ್ತು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶುರುವಾದ ಹೊನ್ನಾಳಿ-ನ್ಯಾಮತಿ ಕ್ಷೇತ್ರದಲ್ಲಿರುವ ಕೆರೆತುಂಬಿಸುವ ಕೆಲಸ ನೆನೆಗುದಿಗೆ ಬಿದ್ದಿದೆ, ಅವುಗಳನ್ನು ಪೂರ್ಣಗಳಿಸಲು ಅನುದಾನ ಬಿಡುಗಡೆ ಮಾಡಬೇಕೆಂದು ಕೋರಿದ್ದಾಗಿ ರೇಣುಕಾಚಾರ್ಯ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ: ಡಿಕೆ ಶಿವಕುಮಾರ್ ಆಯೋಜಿಸಿದ ಔತಣಕೂಟದಲ್ಲಿ ಇಬ್ಬರು ಬಿಜೆಪಿ ಶಾಸಕರು

Published on: Mar 14, 2025 02:38 PM