Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸನಗೌಡ ಯತ್ನಾಳ್​ರನ್ನು ಮನಬಂದಂತೆ ಬಯ್ಯುತ್ತಿದ್ದ ರೇಣುಕಾಚಾರ್ಯ ವಿಜಯಪುರ ಶಾಸಕ ತಮ್ಮ ನಾಯಕನೆಂದರು!

ಬಸನಗೌಡ ಯತ್ನಾಳ್​ರನ್ನು ಮನಬಂದಂತೆ ಬಯ್ಯುತ್ತಿದ್ದ ರೇಣುಕಾಚಾರ್ಯ ವಿಜಯಪುರ ಶಾಸಕ ತಮ್ಮ ನಾಯಕನೆಂದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 11, 2025 | 5:38 PM

ತಾನು ಮತ್ತು ಬಸನಗೌಡ ಯತ್ನಾಳ್ ಈಗಲೂ ಅತ್ಮೀಯರು, ತನ್ನಿಂದಲೂ ತಪ್ಪುಗಳಾಗಿವೆ, ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ರೇಣುಕಾಚಾರ್ಯ ಹೇಳುತ್ತಾರೆ. ವೀರಶೈವ ಲಿಂಗಾಯತ ಸಮಾಜದ ಮುಂದೆ, ಯಡಿಯೂರಪ್ಪ, ವಿಜಯೇಂದ್ರ, ಯತ್ನಾಳ್ ಮೊದಲಾದವರೆಲ್ಲ ದೊಡ್ಡವರಲ್ಲ, ಸಮಾಜ ಎಲ್ಲರಿಗಿಂತ ದೊಡ್ಡದು, ದಾವಣಗೆರೆಯಲ್ಲಿ ನಡೆಯುವ ವೀರಶೈವ ಲಿಂಗಾಯತ ಸಮುದಾಯದ ಸಭೆಯಲ್ಲಿ ನಿರ್ಣಯಗಳನ್ನು ಪಾಸು ಮಾಡಲಾಗುವುದು ಎಂದು ಅವರು ಹೇಳಿದರು.

ಬಳ್ಳಾರಿ, ಮಾರ್ಚ್ 11: ದಿನಬೆಳಗಾದರೆ ಬಸನಗೌಡ ಪಾಟೀಲ್ ಯತ್ನಾಳ್​​ರನ್ನು (Basangouda Patil Yatnal) ಹಿಗ್ಗಾಮುಗ್ಗ ಬಯ್ಯುತ್ತಿದ್ದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಇವತ್ತು ಬಳ್ಳಾರಿಯಲ್ಲಿ ವಿಜಯಪುರ ಶಾಸಕನನ್ನು ನಮ್ಮ ನಾಯಕ ಅಂತ ಹೇಳಿದ್ದು ಆಶ್ಚರ್ಯ ಹುಟ್ಟಿಸುತ್ತದೆ. ಅವರು ನಮ್ಮ ಸಮಾಜದ ಪ್ರಮುಖ ನಾಯಕ, ಹಿಂದೆ ಕೇಂದ್ರದಲ್ಲಿ ಸಚಿವರಾಗಿದ್ದವರು, ಅದರೆ ಕೆಲ ದುಷ್ಟಶಕ್ತಿಗಳು ಅವರ ಮೂಲಕ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿವೆ, ಅವರು ಬಲಿಪಶು ಆಗಬಾರದೆನ್ನುವುದಷ್ಟೇ ತಮ್ಮ ಉದ್ದೇಶ ಎಂದು ರೇಣುಕಾಚಾರ್ಯ ಹೇಳಿದರು. ದುಷ್ಟಶಕ್ತಿಗಳು ಯಾರು ಅಂತ ಕೇಳಿದರೆ, ಸಮಯ ಸಂದರ್ಭ ಕೂಡಿಬಂದಾಗ ಹೇಳುತ್ತೇನೆ ಅನ್ನುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ವಿಜಯೇಂದ್ರರನ್ನು ಟೀಕಿಸಿದರೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಟೀಕಿಸಿದಂತೆ: ಎಂಪಿ ರೇಣುಕಾಚಾರ್ಯ