ನಾಡಿನ ಸ್ವಾಮೀಜಿಗಳನ್ನು ಅವಮಾನಿಸಿರುವ ಯತ್ನಾಳ್ ಕ್ಷಮೆ ಕೇಳಬೇಕು: ಎಂಪಿ ರೇಣುಕಾಚಾರ್ಯ
ಯಡಿಯೂರಪ್ಪನವರ ಸಹಿಯನ್ನು ವಿಜಯೇಂದ್ರ ಫೋರ್ಜರಿ ಮಾಡಿದ್ದಾರೆಂದು ಬಸನಗೌಡ ಯತ್ನಾಳ್ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ, ಯತ್ನಾಳ್ ಬಂಡವಾಳ ತನಗೆಲ್ಲ ಗೊತ್ತಿದೆ ಎನ್ನುವ ರೇಣುಕಾಚಾರ್ಯ ಬಸ್, ಟಿಕೆಟ್ ಅಂತ ಏನೋ ಹೇಳುತ್ತಾರೆ. ಯತ್ನಾಳ್ ಅವರಿಂದ ನಡೆದಿರುವ ಅವ್ಯವಹಾರಗಳ ಬಗ್ಗೆ ಹೇಳಿ ಸರ್ ಅಂತ ಕೇಳಿದಾಗ, ಈಗಲ್ಲ ಸಮಯ ಬಂದಾಗ ಹೇಳುತ್ತೇನೆ ಅನ್ನುತ್ತಾರೆ.
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಸ್ವಾಮೀಜಿಗಳು ಹಣ ತೆಗೆದುಕೊಂಡು ಹೇಳಿಕೆ ನೀಡುತ್ತಾರೆಂದು ಹೇಳುವ ಮೂಲಕ ಬಸನಗೌಡ ಪಾಟೀಲ್ ಯತ್ನಾಳ್ ಎಲ್ಲ ಸ್ವಾಮೀಜಿಗಳನ್ನು ಮತ್ತು ಇಡೀ ಲಿಂಗಾಯತ ಸಮುದಾಯವನ್ನು ಅವಮಾನಿಸಿದ್ದಾರೆ, ಅವರು ಕ್ಷಮೆ ಕೇಳಬೇಕೆಂದರು. ಯಡಿಯೂರಪ್ಪನವರು ಕೇವಲ ವೀರಶೈವ ಅಥವಾ ಲಿಂಗಾಯತ ಸಮುದಾಯದ ನಾಯಕರಲ್ಲ, ರಾಜ್ಯದ ಎಲ್ಲ ಸಮುದಾಯಗಳ ನಾಯಕರು, ಕೇವಲ ಒಂದು ಸಮುದಾಯದ ಬೆಂಬಲದಿಂದ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ, ಯಡಿಯೂರಪ್ಪರನ್ನು ಮೋಸದಿಂದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗ ವೀರಶೈವ ಲಿಂಗಾಯತರು ವಿಮುಖರಾಗಿದ್ದರು ಎಂದು ರೇಣುಕಾಚಾರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯತ್ನಾಳ್ ಒಬ್ಬ ಗೋಮುಖ ವ್ಯಾಘ್ರ, ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ: ರೇಣುಕಾಚಾರ್ಯ ವಾಗ್ದಾಳಿ