ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದರೆ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ

ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಸೆಳೆದುಕೊಳ್ಳುವ ಪ್ರಯತ್ನ ಮಾಡಿದರೆ ನಾವು ಹೆದರಲ್ಲ: ಹೆಚ್ ಡಿ ರೇವಣ್ಣ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 05, 2025 | 4:28 PM

ಕಾಂಗ್ರೆಸ್ ಪಕ್ಷ ಏನೇ ಮಾಡಿದರೂ ಜೆಡಿಎಸ್ ಹೆದರಲ್ಲ, ದೇವೇಗೌಡರ ಕಣ್ಣ ಮುಂದೇನೇ ಈ ರಾಜ್ಯಕ್ಕೆ ಏನು ಕಾದಿದೆ ಅನ್ನೋದನ್ನು ನೋಡಬೇಕಿದೆ, ಆದರೆ ಇದು ಅಸಲಿ ಕಾಂಗ್ರೆಸ್ ಅಲ್ಲ, ಅಂದರೆ ಮಹಾತ್ಮಾ ಗಾಂಧಿಯವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಲ್ಲ, ಆ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿನ ಕಾಂಗ್ರೆಸ್ ಪಕ್ಷವೇ ಬೇರೆ, ಈಗೀರೋದು 75 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಎಂದು ರೇವಣ್ಣ ಹೇಳಿದರು.

ಹಾಸನ: ಅಸೆಂಬ್ಲಿ ಚುನಾವಣೆಯಲ್ಲಿ 136 ಸ್ಥಾನ ಗೆದ್ದರೂ ಕಾಂಗ್ರೆಸ್ ಪಕ್ಷಕ್ಕೆ ಅಭದ್ರತೆ ಕಾಡುತ್ತಿದೆ, ಹಾಗಾಗೇ ಅದರ ನಾಯಕರು ಬೇರೆ ಪಕ್ಷದ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎಂದು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಹೇಳಿದರು. ಡಿಸಿಎಂ ಡಿಕೆ ಶಿವಕುಮಾರ್ ಜೆಡಿಎಸ್ ಶಾಸಕರು ಮತ್ತು ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುತ್ತಿರುವ ಬಗ್ಗೆ ತನಗೆ ಮಾಹಿತಿ ಇಲ್ಲ, ಆದರೆ ಅದು ನಿಜವೇ ಆಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವ ಸ್ಥಿತಿಕಂಡು ಮರುಕ ಹುಟ್ಟುತ್ತದೆ, ಅವರಿಗೆ ಅಗತ್ಯವಿದ್ದಾಗ ಮಾತ್ರ ದೇವೇಗೌಡರ ಮತ್ತು ಕುಮಾರಸ್ವಾಮಿಯ ಪಾದಕ್ಕೆ ನಮಸ್ಕರಿಸುತ್ತೇವೆ ಅನ್ನುತ್ತಾರೆ ಎಂದು ರೇವಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹೆಚ್​ಡಿ ರೇವಣ್ಣ ಜೊತೆ ಸೆಲ್ಫಿಗೆ ಮುಗಿಬಿದ್ದ ಹೆಣ್ಮಕ್ಕಳು