ಅಮೆರಿಕದಿಂದ 104 ಭಾರತೀಯರ ಗಡೀಪಾರು; ಅಮೃತಸರಕ್ಕೆ ಬಂದಿಳಿದ ಮಿಲಿಟರಿ ವಿಮಾನ

ಅಮೆರಿಕದಿಂದ 104 ಭಾರತೀಯರ ಗಡೀಪಾರು; ಅಮೃತಸರಕ್ಕೆ ಬಂದಿಳಿದ ಮಿಲಿಟರಿ ವಿಮಾನ

ಸುಷ್ಮಾ ಚಕ್ರೆ
|

Updated on: Feb 05, 2025 | 4:52 PM

ಅಮೆರಿಕದಿಂದ ಭಾರತಕ್ಕೆ ಆಗಮಿಸಿದ 104 ವಲಸಿಗರನ್ನು ಕರೆತಂದ ಯುಎಸ್​ ಸಿ-17 ಮಿಲಿಟರಿ ವಿಮಾನ ಪಂಜಾಬ್​ನ ಅಮೃತಸರ ಏರ್​​ಪೋರ್ಟ್​ಗೆ ಬಂದಿಳಿದಿದೆ. ಮಕ್ಕಳು ಸೇರಿದಂತೆ 25 ಮಹಿಳೆಯರು, 79 ಪುರುಷರು ಈ ವಿಮಾನದಲ್ಲಿದ್ದಾರೆ. ಅಮೆರಿಕ, ಮೆಕ್ಸಿಕೋ ಗಡಿಯಲ್ಲಿದ್ದ ಭಾರತೀಯ ವಲಸಿಗರು ಭಾರತಕ್ಕೆ ಬಂದಿಳಿದಿದ್ದಾರೆ. ಯುದ್ಧ ವಿಮಾನದ ಮೂಲಕ ಮೊದಲ ಹಂತದಲ್ಲಿ 104 ವಲಸಿಗರನ್ನು ಅಮೆರಿಕ ಭಾರತಕ್ಕೆ ಕಳುಹಿಸಿದೆ.

ಅಮೃತಸರ: ಪಂಜಾಬ್​ನ ಅಮೃತಸರದಲ್ಲಿರುವ ಅಮೆರಿಕದಿಂದ 104 ಭಾರತೀಯರನ್ನು ಗಡೀಪಾರು ಮಾಡಲಾಗಿದೆ. ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಹೊರಟು ಅಮೃತಸರದ ಶ್ರೀ ಗುರು ರಾಮದಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 1.55ರ ಸುಮಾರಿಗೆ ಯುಎಸ್ ಮಿಲಿಟರಿ ವಿಮಾನ ಬಂದಿಳಿದಿದೆ. ಅಮೆರಿಕದಿಂದ ಗಡೀಪಾರು ಮಾಡಲಾದ ಸುಮಾರು 104 ಅಕ್ರಮ ಭಾರತೀಯ ವಲಸಿಗರು ಇಂದು ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣದಲ್ಲಿ ಯುಎಸ್ ಮಿಲಿಟರಿ ಸಿ -17 ವಿಮಾನದಲ್ಲಿ ಬಂದಿಳಿದಿದ್ದಾರೆ. ಇವರಲ್ಲಿ 30 ಮಂದಿ ಪಂಜಾಬ್‌ನವರು, 33 ಮಂದಿ ಹರಿಯಾಣ ಮತ್ತು 30 ಜನ ಗುಜರಾತ್‌ನವರು. ತಲಾ ಮೂವರು ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಹಾಗೂ ಇಬ್ಬರು ಚಂಡೀಗಢದಿಂದ ಬಂದಿಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ