ಬೇರೆಯವರನ್ನು ತುಳಿಯುತ್ತ ಮೇಲೆ ಬಂದ ಯಡಿಯೂರಪ್ಪರನ್ನು ಈಗ ಯಾರಿಂದಲೂ ಉಳಿಸಲು ಸಾಧ್ಯವಿಲ್ಲ: ಯತ್ನಾಳ್

ಬೇರೆಯವರನ್ನು ತುಳಿಯುತ್ತ ಮೇಲೆ ಬಂದ ಯಡಿಯೂರಪ್ಪರನ್ನು ಈಗ ಯಾರಿಂದಲೂ ಉಳಿಸಲು ಸಾಧ್ಯವಿಲ್ಲ: ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 05, 2025 | 2:16 PM

ಮೈಯಲ್ಲಿ ಹುಷಾರಿಲ್ಲ ಎಂದು ಹೇಳುವ ಹೊಸ ನಾಟಕವನ್ನು ಯಡಿಯೂರಪ್ಪ ಶುರುಮಾಡಿದ್ದಾರೆ, ಮೈಗೆ ಹುಷಾರಿಲ್ಲದವರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಕಾಣಲು ಹೋಗಿದ್ದಾರೆ, ಅವರ ಕುಟುಂಬ ದೊಡ್ಡದು ಸಾಕಷ್ಟು ಮಕ್ಕಳು, ಮೊಮ್ಮಕ್ಕಳಿದ್ದಾರೆ, ಯಾವತ್ತಿಗೂ ಅವರಿಗೆ ಒಳ್ಳೆಯದಾಗಲಿ ಅಂತಲೇ ಬಯಸುತ್ತೇನೆ, 120ವರ್ಷಗಳ ಕಾಲ ಬದುಕಲಿ ಎಂದು ಯತ್ನಾಳ್ ಹೇಳಿದರು.

ದೆಹಲಿ: ಯಡಿಯೂರಪ್ಪ ಮೆರೆದಾಟವೆಲ್ಲ ಈಗ ಕೊನೆಗೊಂಡಿದೆ, ಮಗನ ಜೊತೆ ಸೇರಿ ಲಿಂಗಾಯತರನ್ನು ತುಳಿಯುವುದು ಬಿಟ್ಟರೆ ಬೇರೇನೂ ಅವರು ಮಾಡಿಲ್ಲ, ಬೇರೆಯವರನ್ನು ತುಳಿಯುತ್ತಾ ರಾಜಕೀಯಲ್ಲಿ ಮೇಲೆ ಬಂದ ವ್ಯಕ್ತಿ ಅವರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಯಡಿಯೂರಪ್ಪನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ ಮಾಜಿ ಸಂಸದ ಸಿದ್ದೇಶ್ವರ್, ಅವರ ವಾಸಕ್ಕೆ ಮನೆ ಬಿಟ್ಟು ಕೊಟ್ಟ ಮಲ್ಲಿಕಾರ್ಜುನಯ್ಯ, ಅನಂತಕುಮಾರ್, ಬಿಬಿ ಶಿವಪ್ಪ ಮೊದಲಾದವರನ್ನೆಲ್ಲ ತುಳಿದ ಯಡಿಯೂರಪ್ಪರನ್ನು ಉಳಿಸುವುದು ಈಗ ಯಾರಿಂದಲೂ ಸಾಧ್ಯವಿಲ್ಲ, ಮಾಧ್ಯಮದವರು ರಾಜಾಹುಲಿ, ಬೆಟ್ಟದ ಹುಲಿ ಅಂತ ಹೇಳಿದರೂ ಪ್ರಯೋಜನವಿಲ್ಲ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಪ್ಪನನ್ನೇ ಜೈಲಿಗೆ ಕಳಿಸಿದ ಮಗನನ್ನು ರಾಜ್ಯಾಧ್ಯಕ್ಷ ಮಾಡಿಸಿದ ಬಳಿಕ ಯಡಿಯೂರಪ್ಪ ಮೇಲಿನ ಗೌರವ ಇಲ್ಲವಾಯಿತು: ಯತ್ನಾಳ್