ಅಪ್ಪನನ್ನೇ ಜೈಲಿಗೆ ಕಳಿಸಿದ ಮಗನನ್ನು ರಾಜ್ಯಾಧ್ಯಕ್ಷ ಮಾಡಿಸಿದ ಬಳಿಕ ಯಡಿಯೂರಪ್ಪ ಮೇಲಿನ ಗೌರವ ಇಲ್ಲವಾಯಿತು: ಯತ್ನಾಳ್
ಕರ್ನಾಟಕದಿಂದ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದರೊಂದಿಗೆ ಇಂದು ಬಸನಗೌಡ ಯತ್ನಾಳ್ ಅವರ ತಂಡ ಸಭೆ ನಡೆಸಲಿದೆ. ಸಭೆಯಲ್ಲೇ ಯಾರನ್ನು ಭೇಟಿಯಾಗಬೇಕು ಅನ್ನೋದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರಂತೆ. ಯತ್ನಾಳ್ ತಂಡದ ಇತರ ಸದಸ್ಯರು ನಿನ್ನೆಯೇ ದೆಹಲಿಗೆ ಅಗಮಿಸಿ ಕೆಲ ವರಿಷ್ಠರನ್ನು ಭೇಟಿಯಾಗಿದ್ದಾರೆ. ಯತ್ನಾಳ್ ಇವತ್ತು ಆಗಮಿಸಿದ್ದಾರೆ.
ದೆಹಲಿ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಇಂದು ದೆಹಲಿಯಲ್ಲಿದ್ದಾರೆ. ಮಾಧ್ಯಮಗಳೊಂದಿಗೆ ಮಾತಾಡಿದ ಅವರು ರಾಜ್ಯದ ಲಿಂಗಾಯತರು ಈಗ ಯಡಿಯೂರಪ್ಪ ಅವರೊಂದಿಗಿಲ್ಲ, ಅದು ಮುಗಿದುಹೋದ ಅಧ್ಯಾಯ, ತನಗೆ ಯಡಿಯೂರಪ್ಪ ಬಗ್ಗೆ ಗೌರವ ಇತ್ತು, ಅದರೆ ಅವರನ್ನೇ ಜೈಲಿಗೆ ಕಳಿಸಿದ ಮಗನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿಸಿದ ಬಳಿಕ ಆ ಗೌರವವೆಲ್ಲ ಕೊಚ್ಚಿಕೊಂಡು ಹೋಯಿತು ಎಂದು ಹೇಳಿದರು. ರಾಜ್ಯದ ಕೆಲ ಸ್ವಾಮೀಜಿಗಳ ವಿರುದ್ಧ ಖಾರವಾಗಿ ಮಾತಾಡಿದ ಯತ್ನಾಳ್ ಅವರು ದುಡ್ಡು ಕೊಟ್ಟವರ ಪರ ಮಾತಾಡುತ್ತಾರೆ, ಒಂದು ಲಕ್ಷ ರೂ. ನೀಡಿದರೆ ನಿಮ್ಮ ಪರವಾಗಿ ಹೇಳಿಕೆ ನೀಡುವ ಸ್ವಾಮೀಜಿಗಳೂ ಇದ್ದಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಹಳ್ಳಿ ಗುಗ್ಗು, ವಿಜಯೇಂದ್ರಗೆ ಇಂಗ್ಲಿಷ್ ಗೊತ್ತು, ರಾಷ್ಟ್ರೀಯ ಕಾರ್ಯದರ್ಶಿಯಾಗಲು ಅವರೇ ಸೂಕ್ತ: ಯತ್ನಾಳ್
Latest Videos