ನಾನು ಹಳ್ಳಿ ಗುಗ್ಗು, ವಿಜಯೇಂದ್ರಗೆ ಇಂಗ್ಲಿಷ್ ಗೊತ್ತು, ರಾಷ್ಟ್ರೀಯ ಕಾರ್ಯದರ್ಶಿಯಾಗಲು ಅವರೇ ಸೂಕ್ತ: ಯತ್ನಾಳ್

ನಾನು ಹಳ್ಳಿ ಗುಗ್ಗು, ವಿಜಯೇಂದ್ರಗೆ ಇಂಗ್ಲಿಷ್ ಗೊತ್ತು, ರಾಷ್ಟ್ರೀಯ ಕಾರ್ಯದರ್ಶಿಯಾಗಲು ಅವರೇ ಸೂಕ್ತ: ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 04, 2025 | 4:18 PM

ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ಶಿಫಾರಸ್ಸು ಮಾಡುವ ಆಫರ್ ನೊಂದಿಗೆ ಸುಮಾರು 6 ತಿಂಗಳ ಹಿಂದೆ ತನ್ನ ಜೊತೆ ಸಂಧಾನ ಮಾಡಿಕೊಳ್ಳಲು ಪಕ್ಷದ ನಾಯಕರಾದ ಎನ್ ರವಿಕುಮಾರ್, ವೀರಣ್ಣ ಚರಂತಿಮಠ ಮತ್ತು ಅಭಯ್ ಪಾಟೀಲ್ ರನ್ನು ತನ್ನಲ್ಲಿಗೆ ವಿಜಯೇಂದ್ರ ಕಳಿಸಿದ್ದರು. ಅದರೆ ಆಫರ್ ನಿರಾಕರಿಸಿ ಆ ಹುದ್ದೆಗೆ ವಿಜಯೇಂದ್ರನೇ ಲಾಯಕ್ಕು ಎಂದಿದ್ದೆ ಎಂದು ಯತ್ನಾಳ್ ಹೇಳಿದರು.

ಕಲಬುರಗಿ: ವಿಜಯೇಂದ್ರನ ಹಾಗೆ ತಾನು ಭಾರೀ ವಿದ್ಯಾವಂತನೇನೂ ಅಲ್ಲ, ಅವರ ಹಾಗೆ ಇಂಗ್ಲಿಷ್ ಮಾತಾಡಲು ಬರಲ್ಲ, ತಾನೊಬ್ಬ ಹಳ್ಳಿ ಗುಗ್ಗು, ಹಾಗಾಗಿ ರಾಷ್ಟ್ರ ರಾಜಕಾರಣಕ್ಕೆ ತನಗಿಂತ ಅವರೇ ಹೆಚ್ಚು ಸೂಟ್ ಆಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಒಂದು ಪಕ್ಷ ವರಿಷ್ಠರು ಯತ್ನಾಳ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಮಾಡಿದರೆ, ವಿಜಯೇಂದ್ರ ಪಾಡೇನು ಅಂತ ಕೇಳಿದ ಪ್ರಶ್ನೆಗೆ ಯತ್ನಾಳ್, ಅವರಿಗೆ ಇಂಗ್ಲಿಷ್ ಚೆನ್ನಾಗಿ ಬರುತ್ತದೆ, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಲು ಅವರೇ ಯೋಗ್ಯರು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಿಜಯೇಂದ್ರ ವಿರುದ್ಧ ದೆಹಲಿಯಲ್ಲಿ ಯತ್ನಾಳ್ ಬಣದಿಂದ ಅಂತಿಮ ಹಂತದ ಕದನ