Maha Kumbh Mela 2025: ಸಂಗಮ್ ಘಾಟ್​ನಲ್ಲಿ ಪುಣ್ಯಸ್ನಾನ ಮಾಡಿ ಮಾ ಗಂಗಾಗೆ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ

Maha Kumbh Mela 2025: ಸಂಗಮ್ ಘಾಟ್​ನಲ್ಲಿ ಪುಣ್ಯಸ್ನಾನ ಮಾಡಿ ಮಾ ಗಂಗಾಗೆ ಪೂಜೆ ನೆರವೇರಿಸಿದ ಪ್ರಧಾನಿ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 05, 2025 | 1:15 PM

Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್​ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು 45 ದಿನಗಳ ಧಾರ್ಮಿಕ ಉತ್ಸವವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 5ರಂದು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವುದು ಬಹಳ ಹಿಂದೆ ನಿಗದಿಯಾಗಿತ್ತು. ಅವರು ಮಾ ಗಂಗಾಗೆ ಪೂಜೆ ಸಲ್ಲಿಸುವಾಗ ಎಡಭಾಗದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿಂತಿದ್ದರು.

ಪ್ರಯಾಗ್​ರಾಜ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಯಾಗ್​ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಭಾಗಿಯಾಗಿ ಸಂಗಮ್ ಘಾಟ್ ನಲ್ಲಿ ಇಂದು ಪುಣ್ಯಸ್ನಾನ ಮಾಡಿದ ಬಳಿಕ ಗಂಗಾ ನದಿಗೆ ಆರತಿ ಬೆಳಗಿ ಪೂಜೆ ನೆರವೇರಿಸಿದರು. ಪ್ರಧಾನಿ ಮೋದಿಯವರು ಗಂಗಾಜಲ, ಕ್ಷೀರ, ವಸ್ತ್ರ, ಹೂವು, ಹಣ್ಣು ಮೊದಲಾದವುಗಳನ್ನು ಒಂದೊಂದಿಗೆ ಗಂಗಾ ನದಿಗೆ ಬಿಡುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪ್ರಧಾನ ಮತ್ತು ಬೇರೆ ಅರ್ಚಕರು ಮಾಡುತ್ತಿದ್ದ ಮಂತ್ರಘೋಷಗಳು ಹಿನ್ನೆಲೆಯಲ್ಲಿ ಕೇಳಿಬರುತ್ತಿರುವಂತೆಯೇ ಪ್ರಧಾನಿ ಮೋದಿಯವರು ಪೂಜಾವಿಧಿಗಳನ್ನು ಪೂರೈಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಮಹಾಕುಂಭದ ತ್ರಿವೇಣಿ ಸಂಗಮದಲ್ಲಿ ಪ್ರಧಾನಿ ಮೋದಿ ಪುಣ್ಯ ಸ್ನಾನ