ಎಂಆರ್ಪಿಗಿಂತ ದುಪ್ಪಟ್ಟು ಹಣ ವಸೂಲಿ: ಮದ್ಯಪ್ರಿಯರಿಂದ ರಾತ್ರೋರಾತ್ರಿ ಪ್ರತಿಭಟನೆ
ಯಳಂದೂರು ಪಟ್ಟಣದ ಶ್ರೀರಂಗ್ ವೈನ್ಸ್ನಲ್ಲಿ MRP ಗಿಂತ ದುಪ್ಪಟ್ಟು ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮದ್ಯಪ್ರಿಯರು ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ರಾತ್ರಿ ಬಾರ್ ಮುಂದೆ ಬಿಲ್ ಮತ್ತು ಬಾಟಲಿಗಳನ್ನು ತೋರಿಸಿ ಮಾರಾಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಚಾಮರಾಜನಗರ, ಫೆಬ್ರವರಿ 05: ಎಂಆರ್ಪಿ ಬಾರ್ನಲ್ಲಿ ಹೆಚ್ಚಿನ ಹಣ ವಸೂಲಿ ಹಿನ್ನಲೆ ರೊಚ್ಚಿಗೆದ್ದ ಮದ್ಯಪ್ರಿಯರಿಂದ ಬಾರ್ ಮುಂದೆಯೇ ಪ್ರತಿಭಟನೆ ಮಾಡಿದ್ದಾರೆ. ಜಿಲ್ಲೆಯ ಯಳಂದೂರು ತಾಲೂಕಿನ ಯಳಂದೂರು ಪಟ್ಟಣದ ಶ್ರೀರಂಗ ವೈನ್ಸ್ ಮುಂದೆ ನಿನ್ನೆ ರಾತ್ರಿ ಹೈಡ್ರಾಮಾವೇ ನಡೆದಿದೆ. MRP ಬೋರ್ಡ್ ಹಾಕಿಕೊಂಡು ಮದ್ಯಪ್ರಿಯರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತಿತ್ತು. ಹೀಗಾಗಿ ಕೈಯಲ್ಲಿ ಬಾಟಲಿ ಹಾಗೂ ಬಿಲ್ ಹಿಡಿದು ವೈನ್ಸ್ ಸ್ಟೋರ್ ಮಾಲೀಕರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos