ಮಹಿಳೆಯೊಂದಿಗೆ ಕಿರಿಕ್: ಪುಂಡರ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಿದ ಪೊಲೀಸ್ರು
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ರೋಡ್ ರೇಜ್ ಘಟನೆಗಳನ್ನು ತಡೆಯಲು ಪೊಲೀಸರು ಹೊಸ ತಂತ್ರ ಅನುಸರಿಸುತ್ತಿದ್ದಾರೆ. ರೋಡ್ ರೇಜ್‌ನಲ್ಲಿ ಭಾಗಿಯಾದವರನ್ನು ಬಂಧಿಸಿ, ಘಟನೆಯ ಮೊದಲು ಮತ್ತು ನಂತರದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆರೋಪಿಗಳ ಮರ್ಯಾದೆ ತೆಗೆಯುತ್ತಿದ್ದಾರೆ. ಇತ್ತೀಚೆಗೆ ಕೆ.ಆರ್.ಪುರಂನಲ್ಲಿ ನಡೆದ ಘಟನೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಬೆಂಗಳೂರು, ಮಾರ್ಚ್ 14: ಸಿಗ್ನಲ್ ವಿಚಾರಕ್ಕೆ ಕಾರಿನಲ್ಲಿದ್ದ ಮಹಿಳೆಯೊಂದಿಗೆ ಇಬ್ಬರು ಯುವಕರು ಗಲಾಟೆ ಮಾಡಿ ಮಿರರ್ ಮುರಿದು ಪರಾರಿಯಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ರೋಡ್ ರೇಜ್ (road rage) ಮಾಡಿದ್ದ ಘಟನೆ ಕಳೆದ ಮಾರ್ಚ್ 9 ರಂದು ಬೆಂಗಳೂರು ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸದ್ಯ ಕೂಡಲೇ ಆರೋಪಿಗಳನ್ನು ಬಂಧಿಸಿದ ಪೊಲೀಸರು ಘಟನೆಗೂ ಮುಂಚೆ ಮತ್ತು ಘಟನೆ ನಡೆದ ನಂತರದ ವಿಡಿಯೋ ಮಾಡಿ ಆರೋಪಿಗಳ ಮರ್ಯಾದೆ ಕಳೆದಿದ್ದಾರೆ. ಸದ್ಯ ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Mar 14, 2025 02:48 PM
Latest Videos