Video: ಕಾರಿಗೆ ಸಿಲುಕಿ ಮಹಿಳೆ ಮೃತಪಟ್ಟರೂ ಪಶ್ಚಾತಾಪವಿಲ್ಲದೆ ದರ್ಪ ತೋರಿದ ಯುವಕ
ಗುಜರಾತ್ನ ವಡೋದರಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕುಡಿದ ಅಮಲಿನಲ್ಲಿದ್ದ ಯುವಕ ಕಾರು ಗುದ್ದಿಸಿ ಮಹಿಳೆ ಜೀವ ತೆಗೆದಿದ್ದರೂ ಕೂಡ ಪಶ್ಚಾತಾಪವಿಲ್ಲದೆ ದರ್ಪದಿಂದ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆತ ಇನ್ನೊಬ್ಬರ ಜೀವ ತೆಗೆಯುತ್ತೀನಿ ಎನ್ನುವಂತೆ ಅನದರ್ ರೌಂಡ್ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ವಡೋದರಾ, ಮಾರ್ಚ್ 14: ಗುಜರಾತ್ನ ವಡೋದರಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕುಡಿದ ಅಮಲಿನಲ್ಲಿದ್ದ ಯುವಕ ಕಾರು ಗುದ್ದಿಸಿ ಮಹಿಳೆ ಜೀವ ತೆಗೆದಿದ್ದರೂ ಕೂಡ ಪಶ್ಚಾತಾಪವಿಲ್ಲದೆ ದರ್ಪದಿಂದ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆತ ಇನ್ನೊಬ್ಬರ ಜೀವ ತೆಗೆಯುತ್ತೀನಿ ಎನ್ನುವಂತೆ ಅನದರ್ ರೌಂಡ್ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಚಾಲಕನನ್ನು ರಕ್ಷಿತ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ವಾರಣಾಸಿ ನಿವಾಸಿಯಾಗಿದ್ದು, ವಡೋದರಾದ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ