Yuvraj Singh: 6,6,6,6,6,6,6.. ಯುವಿ ಸಿಡಿಲಬ್ಬರಕ್ಕೆ ಆಸೀಸ್ ದಿಗ್ಗಜರು ಹೈರಾಣು; ವಿಡಿಯೋ ನೋಡಿ
International Masters League T20: ಭಾರತ ಮಾಸ್ಟರ್ಸ್ ಮತ್ತು ಆಸ್ಟ್ರೇಲಿಯಾ ಮಾಸ್ಟರ್ಸ್ ನಡುವಿನ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಭಾರತ ಏಕಪಕ್ಷೀಯವಾಗಿ ಗೆಲುವು ಸಾಧಿಸಿತು. ಯುವರಾಜ್ ಸಿಂಗ್ ಅವರ ಅದ್ಭುತ 59 ರನ್‌ಗಳ ಇನ್ನಿಂಗ್ಸ್ (30 ಎಸೆತಗಳಲ್ಲಿ 7 ಸಿಕ್ಸರ್‌ಗಳು) ಗೆಲುವಿಗೆ ಪ್ರಮುಖ ಕಾರಣ. ಸಚಿನ್ ಮತ್ತು ಇರ್ಫಾನ್ ಪಠಾಣ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 126 ರನ್‌ಗಳಿಗೆ ಆಲೌಟ್ ಆಯಿತು.

ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ ಟಿ20 ಯ (International Masters League T20) ಮೊದಲ ಸೆಮಿಫೈನಲ್ ಪಂದ್ಯವು ಇಂಡಿಯಾ ಮಾಸ್ಟರ್ಸ್ ಮತ್ತು ಆಸ್ಟ್ರೇಲಿಯಾ ಮಾಸ್ಟರ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ತಂಡ ಏಕಪಕ್ಷೀಯವಾಗಿ ಗೆಲುವು ಸಾಧಿಸಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ತಂಡದ ಈ ಗೆಲುವಿನಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ (Yuvraj Singh) ಅವರ ಸ್ಫೋಟಕ ಇನ್ನಿಂಗ್ಸ್ ಪ್ರಮುಖ ಪಾತ್ರವಹಿಸಿತು. ಆಕ್ರಮಣಕಾರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಯುವರಾಜ್ ಈ ಪಂದ್ಯದಲ್ಲಿಯೂ ತಮ್ಮ ಹಳೆಯ ಫಾರ್ಮ್ ಪ್ರದರ್ಶಿಸಿ ಎದುರಾಳಿ ಬೌಲರ್‌ಗಳನ್ನು ಸದೆಬಡಿದರು.
ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಯುವರಾಜ್ ಆರಂಭದಿಂದಲೂ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದರು. ಯುವಿಯ ಈ ಹೊಡಿಬಡಿ ಆಟ ಆಸೀಸ್ ಬೌಲರ್ಗಳ ಲಯವನ್ನು ಹಾಳು ಮಾಡಿದಲ್ಲದೆ, ಆಸೀಸ್ ಲೆಜೆಂಡ್ಸ್, ಯುವಿ ವಿಕೆಟ್ ಪಡೆಯಲು ಸಾಕಷ್ಟು ಬೆವರು ಹರಿಸಬೇಕಾಯಿತು. ಕ್ರೀಸ್ನಲ್ಲಿ ಇರುವವರೆಗೂ ಆಸೀಸ್ ಬೌಲರ್‌ಗಳನ್ನು ಕಾಡಿದ ಯುವಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದಿದಲ್ಲದೆ, ಸೆಮಿಫೈನಲ್‌ನಲ್ಲಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
𝐘𝐮𝐯𝐫𝐚𝐣’𝐬 𝐬𝐢𝐱-𝐬𝐚𝐭𝐢𝐨𝐧𝐚𝐥 5️⃣0️⃣! 💪
His powerful display leads him to a remarkable half-century! ⚡🙌
Watch the action LIVE ➡ on @JioHotstar, @Colors_Cineplex & @CCSuperhits! #IMLT20 #TheBaapsOfCricket #IMLonJioHotstar #IMLonCineplex pic.twitter.com/QhJRdyh4zu
— INTERNATIONAL MASTERS LEAGUE (@imlt20official) March 13, 2025
ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಕೇವಲ 30 ಎಸೆತಗಳಲ್ಲಿ 196.67 ಸ್ಟ್ರೈಕ್ ರೇಟ್‌ನಲ್ಲಿ 59 ರನ್ ಚಚ್ಚಿದರು. ಯುವಿಯ ಈ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಅಂದರೆ ಯುವಿ ತಮ್ಮ ಇನ್ನಿಂಗ್ಸ್‌ನಲ್ಲಿ ಕೇವಲ ಸಿಕ್ಸರ್‌ಗಳಿಂದಲೇ 42 ರನ್‌ಗಳನ್ನು ಕಲೆಹಾಕಿದರು. ಈ ಲೀಗ್‌ನಲ್ಲಿ ಒಂದೇ ಗೇರ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಯುವಿ ಆಡಿರುವ 5 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ 193.02 ಸ್ಟ್ರೈಕ್ ರೇಟ್ ಮತ್ತು 166.00 ಸರಾಸರಿಯಲ್ಲಿ 166 ರನ್ ಗಳಿಸಿದ್ದಾರೆ. ಇದರಲ್ಲಿ 13 ಬೌಂಡರಿ ಮತ್ತು 13 ಸಿಕ್ಸರ್‌ಗಳು ಸೇರಿವೆ.
ಇದನ್ನೂ ಓದಿ:IML 2025: ಸಚಿನ್, ಯುವಿ ಸಿಡಿಲಬ್ಬರ; ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಫೈನಲ್ಗೇರಿದ ಇಂಡಿಯಾ
ಇಂಡಿಯಾ ಮಾಸ್ಟರ್ಸ್‌ಗೆ ಏಕಪಕ್ಷೀಯ ಗೆಲುವು
ಪಂದ್ಯದ ಬಗ್ಗೆ ಹೇಳುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 220 ರನ್ ಗಳಿಸಿತು. ತಂಡದ ಪರ ಸಚಿನ್ ತೆಂಡೂಲ್ಕರ್ 30 ಎಸೆತಗಳಲ್ಲಿ 42 ರನ್ ಗಳಿಸಿ ನಾಯಕತ್ವದ ಇನ್ನಿಂಗ್ಸ್ ಆಡಿದರೆ, ಯೂಸುಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಗಳಿಸಿದರು. ಇರ್ಫಾನ್ ಪಠಾಣ್ ಕೂಡ 7 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗುಳಿದರು. ಮತ್ತೊಂದೆಡೆ, ಈ ಸವಾಲಿನ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 18.1 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಆಯಿತು. ಬೌಲಿಂಗ್‌ನಲ್ಲಿ ಮಿಂಚಿದ ಶಹಬಾಜ್ ನದೀಮ್ ಗರಿಷ್ಠ 4 ವಿಕೆಟ್‌ಗಳನ್ನು ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ