RR vs PBKS, IPL 2021: ಕೊನೆಯ ಓವರ್ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ
ರಾಜಸ್ಥಾನ್ ಪರ ಘಟಾನುಘಟಿ ದಾಂಡಿಗರು ಕೂಡ ಸಂಜುಗೆ ಸೂಕ್ತ ಜೊತೆಯಾಟ ನೀಡಲು ವಿಫಲವಾದಾಗ, ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ, ಕೊನೆಗೂ ರಾಜಸ್ಥಾನ್ಗೆ ಗೆಲುವು ಸಿಗಲಿಲ್ಲ.
ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಾಟದಲ್ಲಿ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ನಡೆಸಿ ಮಿಂಚಿದರು. ಅದ್ಭುತ ಪ್ರದರ್ಶನ ತೋರಿದ ಸಂಜು ಶತಕದ ಆಟವಾಡಿ ತಂಡವನ್ನು ಗೆಲ್ಲಿಸುವ ಶತಪ್ರಯತ್ನ ಮಾಡಿದರು. 63 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 119 ರನ್ ದಾಖಲಿಸಿದರು. ಆದರೂ ಪಂಜಾಬ್ ಕಿಂಗ್ಸ್ ನೀಡಿದ್ದ 222 ರನ್ಗಳ ಬೃಹತ್ ಟಾರ್ಗೆಟ್ ಗುರಿ ತಲುಪುವಲ್ಲಿ 4 ರನ್ಗಳಿಂದ ಹಿಂದೆ ಬಿದ್ದರು.
ರಾಜಸ್ಥಾನ್ ಪರ ಘಟಾನುಘಟಿ ದಾಂಡಿಗರು ಕೂಡ ಸಂಜುಗೆ ಸೂಕ್ತ ಜೊತೆಯಾಟ ನೀಡಲು ವಿಫಲವಾದಾಗ, ಸಂಜು ಸ್ಯಾಮ್ಸನ್ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಆದರೆ, ಕೊನೆಗೂ ರಾಜಸ್ಥಾನ್ಗೆ ಗೆಲುವು ಸಿಗಲಿಲ್ಲ. ಅರ್ಶ್ದೀಪ್ ಎಸೆದ ಕೊನೆಯ ಓವರ್ನಲ್ಲಿ 3 ಬಾಲ್ಗೆ 11 ರನ್ ಆಗಬೇಕಿತ್ತು. ಈ ವೇಳೆ ಸಂಜು ಸ್ಯಾಮ್ಸನ್ ಒಂದು ಸಿಕ್ಸ್ ಬಾರಿಸಿ, 2 ಬಾಲ್ಗೆ 5 ರನ್ ಬೇಕು ಎಂಬಲ್ಲಿಗೆ ಪಂದ್ಯವನ್ನು ತಂದು ನಿಲ್ಲಿಸಿದರು.
2 ಬಾಲ್ಗೆ 5 ರನ್ ಬೇಕಾದ ರೋಚಕ ಹಂತಕ್ಕೆ ಆಟ ತಲುಪಿ ನಿಂತಿತ್ತು. ಮುಂದಿನ ಬಾಲ್ಗೆ ಸಂಜು ಸ್ಯಾಮ್ಸನ್ ಎಕ್ಸ್ಟ್ರಾ ಕವರ್ನತ್ತ ಬಾರಿಸಿದರು. ಆದರೆ, ಸಿಂಗಲ್ ಓಟವನ್ನು ಓಡಿ, ಕ್ರಿಸ್ ಮಾರಿಸ್ಗೆ ಕ್ರೀಸ್ ಬಿಟ್ಟುಕೊಡುವುದನ್ನು ಸ್ಯಾಮ್ಸನ್ ನಿರಾಕರಿಸಿದರು. ಸ್ಯಾಮ್ಸನ್ ಸ್ವತಃ ಸ್ಟ್ರೈಕ್ ಉಳಿಸಿಕೊಂಡು, 1 ಬಾಲ್ಗೆ 5 ರನ್ ಗುರಿ ಪಡೆದುಕೊಂಡರು. ಒಂದುವೇಳೆ ಸಿಂಗಲ್ ಓಡಿದ್ದರೆ, ಮತ್ತೊಂದು ಬೌಂಡರಿ ಬಾರಿಸುವುದು ಮಾರಿಸ್ಗೆ ಕಷ್ಟವಾಗುತ್ತಿರಲಿಲ್ಲ. ಸಿಂಗಲ್ ಓಡಬೇಕಿತ್ತು. ಸಂಜು ಸ್ಯಾಮ್ಸನ್ ಓವರ್ ಕಾನ್ಫಿಡೆನ್ಸ್ ತೋರಿದರು ಎಂಬ ಮಾತು ಕೇಳಿಬಂತು. ಆದರೆ, ಕೆಲವರು ಸಂಜು ನಿರ್ಧಾರವನ್ನು ಸಮರ್ಥಿಸಿಕೊಂಡರು.
ಸಿಕ್ಸರ್, ಫೋರ್ ಸಿಡಿಸಿ ಫಾರ್ಮ್ನಲ್ಲಿದ್ದ ಸ್ಯಾಮ್ಸನ್ ಆಡುವುದು, ಆಗಷ್ಟೇ ಕ್ರಿಸ್ಗೆ ಬಂದ ಮಾರಿಸ್ ಆಡುವುದಕ್ಕಿಂತ ಒಳ್ಳೆಯ ನಿರ್ಧಾರವಾಗಿತ್ತು. ಹಾಗಾಗಿ, ಸ್ಯಾಮ್ಸನ್ ತೆಗೆದುಕೊಂಡ ನಿರ್ಧಾರವೇ ಸರಿ ಅಥವಾ ಅದು ತಪ್ಪಲ್ಲ ಎಂದು ಹಲವು ಆಟಗಾರರು, ಕ್ರಿಕೆಟ್ ಪಂಡಿತರು ಸಮರ್ಥಿಸಿಕೊಂಡಿದ್ದಾರೆ.
Not necessarily. It’s whether you think Samson is more likely to hit a 6 than Morris is to hit 4 or 6. The way Samson was hitting it I can see why he would have confidence in himself.
No wrong answer really https://t.co/shzLCGkxRZ
— Jimmy Neesham (@JimmyNeesh) April 12, 2021
Greater possibility of Samson hitting a six in that form than new batsman in Morris hitting a four. Right call by Samson to keep strike last ball I thought.
— Sanjay Manjrekar (@sanjaymanjrekar) April 12, 2021
Great run chase, but Samson’s brilliant one man show ends in agony. Should he have taken single off second last delivery? I think he should have trusted Morris who can olay shots too. Heartbreak for RR, Punjab will not be believing their luck
— Cricketwallah (@cricketwallah) April 12, 2021
I see a lot of people criticising Samson for not taking that single – but wasn’t Samson being on strike RR’s best shot at winning this? #RRvPBKS
— Diya (@TheCricketGirll) April 12, 2021
ಇದನ್ನೂ ಓದಿ: RR vs PBKS, IPL 2021: ಬೌಂಡರಿ ಬಳಿ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್; ವಿಡಿಯೋ ನೋಡಿ
ಇದನ್ನೂ ಓದಿ: RR vs PBKS, IPL 2021 Match 4 Result: ರೋಚಕ ಪಂದ್ಯದಲ್ಲಿ ಗೆದ್ದ ಪಂಜಾಬ್ ಕಿಂಗ್ಸ್; ಸಂಜು ಸ್ಯಾಮ್ಸನ್ ಶತಕ ವ್ಯರ್ಥ!
(RR vs PBKS IPL 2021 Sanju Samson denies to take single in last over here is how others reacted to it)
Published On - 2:49 pm, Tue, 13 April 21