IPL 2021 ಪಂದ್ಯ ವೀಕ್ಷಿಸಲು ಏರ್​ಟೆಲ್, ಜಿಯೊ ಮತ್ತು ವೊಡಾಫೋನ್​ ಐಡಿಯಾದಿಂದ ಬೆಸ್ಟ್ ರೀಚಾರ್ಜ್​ ಪ್ಲಾನ್​

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್​ ಐಡಿಯಾದಲ್ಲಿ ಹಾಟ್‌ಸ್ಟಾರ್​ಗೆ ಪ್ರವೇಶಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಿದ್ದು, ಮೊಬೈಲ್​ ಮೂಲಕ ಆನ್‌ಲೈನ್‌ನಲ್ಲಿ ಪಂದ್ಯಗಳನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಪ್ರೀಪೇಯ್ಡ್ ಅನ್ನು ಪೋಸ್ಟ್‌ಪೇಯ್ಡ್ ಮಾಡಲು ಅವಕಾಶ ನೀಡುತ್ತಿವೆ. ವೊಡಾಫೋನ್​ ಐಡಿಯಾ ಇತ್ತೀಚೆಗೆ 3 ಜಿಬಿ ದೈನಂದಿನ ಡೇಟಾ ನೀಡಲು ಪ್ರಾರಂಭಿಸಿದೆ.

IPL 2021 ಪಂದ್ಯ ವೀಕ್ಷಿಸಲು ಏರ್​ಟೆಲ್, ಜಿಯೊ ಮತ್ತು ವೊಡಾಫೋನ್​ ಐಡಿಯಾದಿಂದ ಬೆಸ್ಟ್ ರೀಚಾರ್ಜ್​ ಪ್ಲಾನ್​
ಜಿಯೋ, ಏರ್​ಟೆಲ್​, ವೊಡಾಫೋನ್​ ಚಂದಾದಾರರಿಗೆ ಆಫರ್​
Follow us
shruti hegde
| Updated By: Digi Tech Desk

Updated on:Apr 14, 2021 | 2:42 PM

ಐಪಿಎಲ್​ ಪಂದ್ಯ ಈಗಾಗಲೇ ಆರಂಭಗೊಂಡಿದೆ. ಹೆಚ್ಚುತ್ತಿರುವ ಕೊವಿಡ್ ಸಾಂಕ್ರಾಮಿಕ ಪ್ರಕರಣಗಳ ಮಧ್ಯ ನಿಮ್ಮ ಮೊಬೈಲ್​ನಲ್ಲಿ ಐಪಿಎಲ್​ ಸ್ಕೋರ್​ ಪರಿಶೀಲಿಸಲು ಅಥವಾ ಬೇರೊಂದು ಕೆಲಸ ಮಾಡುತ್ತಾ ಕ್ರಿಕೆಟ್​ ಪಂದ್ಯವನ್ನು ನೋಡಲು ಏರ್​ಟೆಲ್​, ಜಿಯೋ ಮತ್ತು ವೊಡಾಫೋನ್​ ಐಡಿಯಾ ಇಂಟರ್​ನೆಟ್​ ಆಫರ್​ ನೀಡಿದೆ.

ಏರ್‌ಟೆಲ್, ಜಿಯೋ ಮತ್ತು ವೊಡಾಫೋನ್​ ಐಡಿಯಾದಲ್ಲಿ ಹಾಟ್‌ಸ್ಟಾರ್​ಗೆ ಪ್ರವೇಶಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಿದ್ದು, ಮೊಬೈಲ್​ ಮೂಲಕ ಆನ್‌ಲೈನ್‌ನಲ್ಲಿ ಪಂದ್ಯಗಳನ್ನು ನೋಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಇದರಿಂದಾಗಿ ಪ್ರೀಪೇಯ್ಡ್ ಅನ್ನು ಪೋಸ್ಟ್‌ಪೇಯ್ಡ್ ಮಾಡಲು ಅವಕಾಶ ನೀಡುತ್ತಿವೆ. ವೊಡಾಫೋನ್​ ಐಡಿಯಾ ಇತ್ತೀಚೆಗೆ 3 ಜಿಬಿ ದೈನಂದಿನ ಡೇಟಾ ನೀಡಲು ಪ್ರಾರಂಭಿಸಿದೆ.

ಏರ್​ಟೆಲ್​ 448 ರೂಪಾಯಿ VS ಜಿಯೋ 401 ರೂ. VS ವೊಡಾಫೋನ್​ ಐಡಿಯಾ 401 ರೂ. ಪ್ರಿಪೇಯ್ಡ್​ ಪ್ಲಾನ್​ ಏರ್​ಟೆಲ್​ನಲ್ಲಿ 448 ಪ್ರೀಪೇಡ್​ ಪ್ಲಾನ್: ಐಪಿಲ್​ ನಡೆಯುತ್ತಿರುವ ಸಮಯದಲ್ಲಿ ತನ್ನ ಬಳಕೆದಾರರಿಗಾಗಿ ಏರ್​ಟೆಲ್​ ಹೊಸ ಪ್ಲಾನ್​ ನೀಡಿದೆ. 448 ರೂಪಾಯಿಗೆ 28 ದಿನಗಳ ವ್ಯಾಲಿಡಿಟಿ, ದಿನಕ್ಕೆ 3ಜಿಬಿ ಡೇಟಾ ಜೊತೆ ಅನ್​ಲಿಮಿಟೆಡ್​ ಕಾಲ್ ಸೌಲಭ್ಯ ನೀಡಿದೆ. ಈ ಆಫರ್​ನಿಂದ ಪ್ರೆಕ್ಷಕರು ಆನ್​ಲೈನ್​ ಮೂಲಕ ಐಪಿಲ್​ ನೋಡಬಹುದಾಗಿದೆ. ಇದರ ಜತೆಗೆ ಡಿಸ್ನಿ+ ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಿಂದ ಸ್ಟ್ರೀಮಿಂಗ್ ಪ್ರಯೋಜನಗಳನ್ನು ನೀಡುತ್ತದೆ.

ಜಿಯೋ 401 ರೂಪಾಯಿ ಪ್ರಿಪೇಯ್ಡ್ ಪ್ಲಾನ್: 401 ರೂಪಾಯಿ ಪ್ಯಾಕ್​ಗೆ ಪ್ರತಿನಿತ್ಯ 3ಜಿಬಿ ಹೈ-ಸ್ಪೀಡ್​ ಡೇಟಾದೊಂದಿಗೆ, ಅನಿಯಮಿತ ಕರೆ (ಅನ್​ಲಿಮಿಟೆಡ್​ ಕಾಲ್) ನೀಡಲಾಗಿದೆ. ಜೊತೆಗೆ ದಿನಕ್ಕೆ 100 ಉಚಿತ ಎಸ್​ಎಮ್​ಎಸ್ ನೀಡಿದೆ. ಈ ಇಂಟರ್​ನೆಟ್​ ಪ್ಯಾಕ್​ 28 ದಿನಗಳ ಅವಧಿಗೆ ಸೀಮಿತವಾಗಿರುತ್ತದೆ. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ಗೆ ಉಚಿತ ಸಬ್​ಸ್ಕ್ರಿಪ್ಷನ್​ ಪಡೆಯಲು 28 ದಿನಗಳ ಕಾಲ ಮಾತ್ರ ಅವಕಾಶವಿರುತ್ತದೆ.

ವಡಾಫೋನ್​ ಐಡಿಯಾ 401ರೂಪಾಯಿ ಪ್ರಿಪೇಯ್ಡ್ ಪ್ಲಾನ್​: 401 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ಗೆ​ 3 ಜಿಬಿ ಡೇಟಾ ಜೊತೆಗೆ ಅನಿಯಮಿತ ಕರೆಯನ್ನು ನೀಡುತ್ತದೆ. ಜೊತೆಗೆ ಡಿಸ್ನಿ+ ಹಾಟ್​ಸ್ಟಾರ್​ ಪ್ರವೇಶಿಸಲು ಅನುಕೂಲ ಮಾಡಿಕೊಡುತ್ತದೆ. ಈ ಪ್ರೀಪೇಯ್ಡ್​ ಪ್ಲಾನ್​ನಲ್ಲಿ 100 ಎಸ್​ಎಂಎಸ್​ಗಳನ್ನು ದಿನಕ್ಕೆ ನೀಡಲಾಗುತ್ತಿದೆ. ಜೊತೆಗೆ 16 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ.

ಏರ್​ಟೆಲ್​ 599ರೂಪಾಯಿ vs ಜಿಯೋ 598 ರೂಪಾಯಿ vs ವೊಡಾಫೋನ್​ ಐಡಿಯಾ 601 ರೂಪಾಯಿ ಪ್ರಿಪೇಯ್ಡ್​ ಪ್ಲಾನ್​ ಏರ್​ಟೆಲ್​ 599 ರೂಪಾಯಿ ಪ್ರಿಪೇಯ್ಡ್​ ಪ್ಲಾನ್: 599 ರೂಪಾಯಿಯ ಪ್ರೀಪೇಯ್ಡ್​ ಪ್ಲಾನ್​ನಲ್ಲಿ ದಿನಕ್ಕೆ 2 ಜಿಬಿ ಡೇಟಾ ಜೊತೆಗೆ 56 ದಿನ ವ್ಯಾಲಿಡಿಟಿ ನೀಡಲಾಗುತ್ತಿದೆ. ಇದರೊಂದಿಗೆ ಅನಿಯಮಿತ ಕರೆಯನ್ನು ನೀಡಲಾಗುತ್ತಿದೆ. ಇದರಲ್ಲಿ ಡಿಸ್ನಿ+ ಹಾಟ್​ಸ್ಟಾರ್​ ಮತ್ತು ಅಮೆಜಾನ್​ ಪ್ರೈಮ್​ ವಿಡಿಯೋ ಕಂಟೆಂಟ್ ವೀಕ್ಷಿಸಲು ಅವಕಾಶವಿದೆ.

ಜಿಯೋ 598 ರೂಪಾಯಿ ಪ್ರಿಪೇಯ್ಡ್ ಪ್ಲಾನ್: ಜಿಯೋ ನೀಡಿದ 598 ರೂಪಾಯಿ ಪ್ರೀಪೇಯ್ಡ್​ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಡೇಟಾ ನೀಡುತ್ತಿದೆ. ಅನಿಯಮಿತ ಕರೆ ಜೊತೆಗೆ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಪ್ರಯೋಜನ ಜಿಯೋ ಅಪ್ಲಿಕೇಶನ್​ ಹೊಂದಿರುವ ಬಳಕೆದಾರರಿಗೆ ಮಾತ್ರ ಸಿಗುತ್ತದೆ. 56 ದಿನಗಳವರೆಗೆ ಈ ಪ್ಯಾಕ್​ನ ವ್ಯಾಲಿಡಿಟಿ ಇರುತ್ತದೆ.

ವೊಡಾಫೋನ್​ ಐಡಿಯಾ 601 ರೂಪಾಯಿ ಪ್ರಿಪೇಯ್ಡ್ ಪ್ಲಾನ್​: 601 ರೂಪಾಯಿಯ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಪ್ರತ ದಿನ​ 3 ಜಿಬಿ ಡೇಟಾ ದೊರೆಯುತ್ತದೆ. ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್​ಎಂಎಸ್​ಗಳನ್ನು ಉಚಿತವಾಗಿ ನೀಡಲಾಗುತ್ತದೆ.

ವೊಡಾಫೋನ್​ ಐಡಿಯಾ 801 ರೂಪಾಯಿ vs ಜಿಯೊ 777 ರೂಪಾಯಿ ಪ್ರಿಪೇಯ್ಡ್ ಪ್ಲಾನ್​ ಜಿಯೋ 777 ರೂಪಾಯಿ ಪ್ರಿಪೇಯ್ಡ್​ ಪ್ಲಾನ್​: ಜಿಯೋ ನೀಡುತ್ತಿರುವ 777 ರೂಪಾಯಿ ಡೇಟಾ ಪ್ಯಾಕ್​ನಲ್ಲಿ​ ಅನಿಯಮಿತ ಕರೆಗಳ ಜೊತೆಗೆ ದಿನಕ್ಕೆ 1.5 ಜಿಬಿ ಡೇಟಾವನ್ನು ನೀಡುತ್ತಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಸಹ ನೀಡುತ್ತಿದೆ. ಪ್ರಿಪೇಯ್ಡ್ ಪ್ಲಾನ್​ 84 ದಿನಗಳ ಕಾಲಾವಕಾಶವನ್ನು ಹೊಂದಿರುತ್ತದೆ.

ವೊಡಾಫೋನ್​ ಐಡಿಯಾ 801 ರೂಪಾಯಿ ಪ್ರಿಪೇಯ್ಡ್ ಪ್ಲಾನ್​: 3 ಜಿಬಿ ದೈನಂದಿನ ಡೇಟಾ ಜೊತೆಗೆ ಅನಿಯಮಿತ ಕರೆ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ಗೆ ಪ್ರವೇಶವನ್ನು ನೀಡಿದೆ. ಈ ಯೋಜನೆಯು 100 ಎಸ್‌ಎಂಎಸ್‌ಗೆ 48 ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತದೆ.

ಏರ್​ಟೆಲ್ 2,698 ರೂಪಾಯಿ ಮತ್ತು ಜಿಯೋ 2,599 ರೂಪಾಯಿ ಪ್ರಿಪೇಯ್ಡ್ ಪ್ಲಾನ್ ಜಿಯೋ 2599 ರೂಪಾಯಿ ಪ್ರಿಪೇಯ್ಡ್ ಪ್ಲಾನ್​: ಇದು ಒಂದು ವರ್ಷದ ಇಂಟರ್​ನೆಟ್​ ಪ್ಯಾಕ್​ ಆಗಿದ್ದು, ಜಿಯೋ ಟು ಜಿಯೋ ಅನ್​ಲಿಮಿಟೆಡ್​ ಕರೆಯನ್ನು ನೀಡುತ್ತದೆ. ಜೊತೆಗೆ ದಿನಕ್ಕೆ 100 ಎಸ್​ಎಂಎಸ್​ಗಳನ್ನು ಬಳಕೆದಾರರಿಗೆ ಜಿಯೋ ನೀಡಿದೆ. 399 ರೂಪಾಯಿ ಮೌಲ್ಯದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿಗೆ ಉಚಿತ ಸಬ್​ಸ್ಕ್ರಿಪ್ಷನ್​ಅನ್ನು ನೀಡುತ್ತದೆ. ಇದನ್ನು ವೀಕ್ಷಿಸಿದರೆ ದಿನಕ್ಕೆ 2 ಜಿಬಿ ಡೇಟಾದಂತೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ನೀಡುತ್ತದೆ.

ಏರ್‌ಟೆಲ್ 2,698 ರೂಪಾಯಿ ಪ್ರಿಪೇಯ್ಡ್ ಪ್ಲಾನ್​: ಏರ್​ಟೆಲ್​ನ 2,698 ರೂಪಾಯಿ ಡೇಟಾ ಪ್ಯಾಕ್​ 2 ಜಿಬಿ ದೈನಂದಿನ ಡೇಟಾವನ್ನು 365 ದಿನಗಳಿಗೆ ನೀಡುತ್ತದೆ. ಜೊತೆಗೆ ಡಿಸ್ನಿ + ಹಾಟ್‌ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋವನ್ನು ಆನ್​ಲೈನ್​ ಮೂಲಕ ಮೊಬೈಲ್​ನಲ್ಲಿ ನೋಡಲು ಅವಕಾಶ ಕಲ್ಪಿಸಿಕೊಟ್ಟಿದೆ.

ಇದನ್ನೂ ಓದಿ: Jio IPL Plans: ಐಪಿಎಲ್​ ವೀಕ್ಷಿಸುವ ಜಿಯೋ ಚಂದಾದಾರರಿಗೆ ಭರ್ಜರಿ ಕೊಡುಗೆ; ರೀಚಾರ್ಜ್​ ಮೇಲೆ ಉಚಿತ 10 ಜಿಬಿ ಡೇಟಾ ನೀಡಲಿದೆ ಜಿಯೋ

ಗ್ರಾಹಕರಿಗೆ ಆಕರ್ಷಕ ಆಫರ್​ಗಳನ್ನು ಘೋಷಿಸಿದ ಬಿಎಸ್ಎನ್ಎಲ್, ಕೇವಲ ರೂ.129 ಗಳಿಗೆ 300 ಚ್ಯಾನೆಲ್​ಗಳು!.

(Best IPL 2021 Live Streaming plans Recharge from Airtel Jio and Vodafone Idea)

Published On - 12:50 pm, Wed, 14 April 21

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​