IPL 2021: ಆಂದ್ರೆ ರಸ್ಸೆಲ್ ಬೌಲಿಂಗ್ ಅಬ್ಬರದೆದುರು ನಲುಗಿದ ಮುಂಬೈ ಬ್ಯಾಟ್ಸ್ಮನ್ಗಳು ಗಳಿಸಿದ್ದು 153 ರನ್ ಮಾತ್ರ!
ಕೈರನ್ ಪೊಲ್ಲಾರ್ಡ್, ಕೃಣಾಲ್ ಪಾಂಡೆ, ಮಾರ್ಕೊ ಜಾನ್ಸೆನ್, ರಾಹುಲ್ ಚಹರ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ವಿಕೆಟ್ಗಳನ್ನು ರಸ್ಸೆಲ್ ಪಡೆದರು. ಐಪಿಎಲ್ನಲ್ಲಿ ಇದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಚೆನೈ: ಇಲ್ಲಿ ಇಂದು ರಸ್ಸೆಲ್ ಮೇನಿಯಾ, ಆದರೆ ಬ್ಯಾಟ್ನಿಂದಲ್ಲ, ಕರಾರುವಕ್ಕಾದ ಬೌಲಿಂಗ್ನಿಂದ! ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿರುವ ವೆಸ್ಟ್ ಇಂಡೀಸ್ ದೈತ್ಯ ಇವತ್ತು ಬದಲಾವಣೆಗೆ ಎಂಬಂತೆ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಮಿಂಚಿ 5 ವಿಕೆಟ್ ಪಡೆಯುವ ಸಾಧನೆ ಮಾಡಿದರು. ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ ಅವರು ಕೇವಲ 2 ಓವರ್ನ್ಲಲಿ 15 ರನ್ ನೀಡಿ 5 ವಿಕೆಟ್ ಕಬಳಿಸಿದರು. ಪ್ರಚಂಡ ದಾಳಿಯಿಂದ ಮುಂಬೈ ಆಟಗಾರರನ್ನು ಅಕ್ಷರಶ: ತತ್ತರಿಸುವಂತೆ ಮಾಡಿದ ರಸ್ಸೆಲ್ಗೆ ಎರಡು ಬಾರಿ ಹ್ಯಾಟ್ರಿಕ್ ಪಡೆಯುವ ಅವಕಾಶವಿತ್ತು.
ಕೈರನ್ ಪೊಲ್ಲಾರ್ಡ್, ಕೃಣಾಲ್ ಪಾಂಡೆ, ಮಾರ್ಕೊ ಜಾನ್ಸೆನ್, ರಾಹುಲ್ ಚಹರ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ವಿಕೆಟ್ಗಳನ್ನು ರಸ್ಸೆಲ್ ಪಡೆದರು. ಐಪಿಎಲ್ನಲ್ಲಿ ಇದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಇದಕ್ಕೆ ಮೊದಲು ಅವರು 20 ರನ್ ನೀಡಿ 4 ವಿಕೆಟ್ ಪಡೆದಿದ್ದು ಅತ್ಯುತ್ತಮ ಸಾಧನೆಯಾಗಿತ್ತು.
ನಾಯಕ ರೋಹಿತ್ ಶರ್ಮ (43, 32 ಎಸೆತ, 3ಬೌಂಡರಿ 1 ಸಿಕ್ಸ್) ಮತ್ತು ಸೂರ್ಯಕುಮಾರ ಯಾದವ್ (56 36 ಎಸೆತ 7 ಬೌಂಡರಿ 2 ಸಿಕ್ಸರ್) ಅವರ ಕಾಂಟ್ರಿಬ್ಯೂಷನ್ ಮತ್ತು ಎರಡನೇ ವಿಕೆಟ್ಗೆ ಅವರು ಸೇರಿಸಿದ 76 ರನ್ ಬಿಟ್ಟರೆ, ಮುಂಬೈ ಟೀಮಿನ ಆಟದ ಬಗ್ಗೆ ಹೇಳುವಂಥದ್ದು ಏನೂ ಇಲ್ಲ. ತಂಡವು 20 ಓವರ್ ಅಂತ್ಯಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡು 152 ರನ್ ಗಳಿಸಿದೆ. ಪಂದ್ಯ ಗೆಲ್ಲಲು ಕೋಲ್ಕತ್ತಾ ನೈಟ್ ರೈಡರ್ಸ್ಗೆ 153 ರನ್ ಬೇಕಿದೆ. ಕೋಲ್ಕತ್ತಾದ ಇತರ ಬೌಲರ್ಗಳಲ್ಲಿ ಕಮಿನ್ಸ್ 2 ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.
Published On - 10:03 pm, Tue, 13 April 21