Bhuvaneshwar Kumar: ಐಸಿಸಿ ಮಾರ್ಚ್ ತಿಂಗಳ ಆಟಗಾರ ಅವಾರ್ಡ್ ಪಡೆದ ಭುವನೇಶ್ವರ್ ಕುಮಾರ್

ICC Player of the Month Award: ಈ ಕ್ರಿಕೆಟ್ ಪ್ರಯಾಣದಲ್ಲಿ ಸಹಕಾರ ನೀಡಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನನ್ನ ಕುಟುಂಬ, ಗೆಳೆಯರು, ಸಹ ಆಟಗಾರರು ಎಲ್ಲರಿಗೂ ನಾನು ಆಭಾರಿ ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

Bhuvaneshwar Kumar: ಐಸಿಸಿ ಮಾರ್ಚ್ ತಿಂಗಳ ಆಟಗಾರ ಅವಾರ್ಡ್ ಪಡೆದ ಭುವನೇಶ್ವರ್ ಕುಮಾರ್
ಭುವನೇಶ್ವರ್ ಕುಮಾರ್
Follow us
TV9 Web
| Updated By: ganapathi bhat

Updated on:Apr 05, 2022 | 12:36 PM

ಭಾರತದ ಅನುಭವಿ ಯುವ ಬೌಲರ್ ಭುವನೇಶ್ವರ್ ಕುಮಾರ್ ಮಂಗಳವಾರ ಐಸಿಸಿ ಪ್ಲೇಯರ್ ಆಫ್ ದ ಮಂತ್ (ICC Player of the Month Award) ಅವಾರ್ಡ್ ಪಡೆದುಕೊಂಡಿದ್ದಾರೆ. ಮಾರ್ಚ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್​ಗಳ ಪಂದ್ಯಾಟದಲ್ಲಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ತೋರಿದ್ದರು. 31 ವರ್ಷ ವಯಸ್ಸಿನ ಭುವಿ, 3 ಏಕದಿನ ಪಂದ್ಯಗಳಲ್ಲಿ 4.65ರ ಎಕನಮಿಯಲ್ಲಿ 6 ವಿಕೆಟ್ ಕಬಳಿಸಿದ್ದರು. ಹಾಗೂ 5 ಟಿ20 ಪಂದ್ಯಾಟದಲ್ಲಿ 6.38ರ ಎಕನಮಿಯಲ್ಲಿ 4 ವಿಕೆಟ್ ಕಿತ್ತಿದ್ದರು.

ಬಹಳ ಕಾಲದ ನಂತರ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವುದಕ್ಕೆ ಸಂತಸವಿದೆ. ನನ್ನ ಫಿಟ್​ನೆಸ್ ಹಾಗೂ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಈ ನಡುವೆ ಶ್ರಮಿಸಿದ್ದೇನೆ. ನನ್ನ ದೇಶದ ತಂಡಕ್ಕಾಗಿ ಆಟವಾಡಿ ವಿಕೆಟ್ ಪಡೆದಿರುವುದರ ಬಗ್ಗೆ ಖುಷಿ ಇದೆ ಎಂದು ಭುವನೇಶ್ವರ್ ಹೇಳಿದ್ದಾರೆ.

ಈ ಅವಾರ್ಡ್ ಈ ವರ್ಷದ ಆರಂಭದಲ್ಲಿ ಶುರುವಾಯಿತು. ಆ ಬಳಿಕ ಈ ಅವಾರ್ಡ್ ಪಡೆದಿರುವ 3ನೇ ಬೌಲರ್ ಆಗಿ ಭುವನೇಶ್ವರ್ ಕುಮಾರ್ ಹೊರಹೊಮ್ಮಿದ್ದಾರೆ. ಜನವರಿಯಲ್ಲಿ ಪ್ಲೇಯರ್ ಆಫ್ ದ ಮಂತ್ ಅವಾರ್ಡ್​ನ್ನು ವಿಕೆಟ್ ಕೀಪರ್- ಬ್ಯಾಟ್ಸ್​ಮನ್ ಆಗಿರುವ ರಿಷಭ್ ಪಂತ್ ಪಡೆದಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ ಆಟಕ್ಕಾಗಿ ರವಿಚಂದ್ರನ್ ಅಶ್ವಿನ್ ಫೆಬ್ರವರಿಯಲ್ಲಿ ಈ ಅವಾರ್ಡ್ ಪಡೆದಿದ್ದರು.

ಈ ಕ್ರಿಕೆಟ್ ಪ್ರಯಾಣದಲ್ಲಿ ಸಹಕಾರ ನೀಡಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ನನ್ನ ಕುಟುಂಬ, ಗೆಳೆಯರು, ಸಹ ಆಟಗಾರರು ಎಲ್ಲರಿಗೂ ನಾನು ಆಭಾರಿ ಎಂದು ಅವರು ಹೇಳಿದ್ದಾರೆ. ಐಸಿಸಿ ವೋಟಿಂಗ್ ಅಕಾಡೆಮಿ ಹಾಗೂ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.

ಭುವನೇಶ್ವರ್ ಕುಮಾರ್ ಜೊತೆಗೆ, ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್, ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಕೂಡ ಈ ಅವಾರ್ಡ್​ಗೆ ನಾಮನಿರ್ದೇಶನಗೊಂಡಿದ್ದರು. ಐಸಿಸಿ ವೋಟಿಂಗ್ ಅಕಾಡೆಮಿ ಪ್ರತಿನಿಧಿಸುತ್ತಿರುವ ವಿವಿಎಸ್ ಲಕ್ಷ್ಮಣ್, ಭುವನೇಶ್ವರ್ ಕುಮಾರ್ ಸುಮಾರು ಒಂದು ವರ್ಷ ಅಂದರೆ ಕೆಲವಾರು ಅಂತಾರಾಷ್ಟ್ರೀಯ ಕ್ರಿಕೆಟ್ ಕೂಟಗಳನ್ನು ಇಂಜೂರಿ ಕಾರಣದಿಂದ ಕಳೆದುಕೊಂಡರು. ಭುವಿ ಪವರ್​ಪ್ಲೇ ಓವರ್​ಗಳಲ್ಲಿ ಹಾಗೂ ಡೆತ್ ಓವರ್​ಗಳಲ್ಲೂ ಅತ್ಯುತ್ತಮವಾಗಿ ಬೌಲ್ ಮಾಡಬಲ್ಲರು ಎಂದೂ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ಇದನ್ನೂ ಓದಿ: Bhuvneshwar Kumar IPL 2021 SRH Team Player: ತೆಂಡೂಲ್ಕರ್​ರನ್ನು ಮೊಟ್ಟ ಮೊದಲ ಬಾರಿಗೆ ಸೊನ್ನೆಗೆ ಔಟ್ ಮಾಡಿದ ಭುವನೇಶ್ವರ್ ಹೈದರಾಬಾದ್​ನ ಪ್ರಮುಖ ಬೌಲಿಂಗ್ ಅಸ್ತ್ರ

(Indian seamer Bhuvneshwar Kumar wins ICC Player of the Month Award for March)

Published On - 5:03 pm, Tue, 13 April 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ