KKR vs MI Predicted Playing 11: ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ-ಮುಂಬೈ ಮುಖಾಮುಖಿ; ಇಲ್ಲಿದೆ ಸಂಭಾವ್ಯ ತಂಡ

ಭಾನುವಾರ ನಡೆದ ಸನ್​ರೈಸರ್ಸ್ ವಿರುದ್ಧದ ಪಂದ್ಯಾಟದಲ್ಲಿ ಗೆಲುವು ಸಾಧಿಸಿ, ಆತ್ಮವಿಶ್ವಾಸದಲ್ಲಿರುವ ಕೋಲ್ಕತ್ತಾ ತಂಡ, ಆರ್​ಸಿಬಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್​ನ್ನು ಹಿಮ್ಮೆಟ್ಟಿಸುವ ಉತ್ಸಾಹದಲ್ಲಿದೆ.

KKR vs MI Predicted Playing 11: ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ-ಮುಂಬೈ ಮುಖಾಮುಖಿ; ಇಲ್ಲಿದೆ ಸಂಭಾವ್ಯ ತಂಡ
ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್
Follow us
TV9 Web
| Updated By: ganapathi bhat

Updated on:Apr 05, 2022 | 12:36 PM

ಐಪಿಎಲ್ 2021ನೇ ಆವೃತ್ತಿಯ ಇಂದು (ಏಪ್ರಿಲ್ 13) ನಡೆಯಲಿರುವ 5ನೇ ಪಂದ್ಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್​ನ್ನು ಎದುರಿಸಲಿದೆ. ಭಾನುವಾರ ನಡೆದ ಸನ್​ರೈಸರ್ಸ್ ವಿರುದ್ಧದ ಪಂದ್ಯಾಟದಲ್ಲಿ ಗೆಲುವು ಸಾಧಿಸಿ, ಆತ್ಮವಿಶ್ವಾಸದಲ್ಲಿರುವ ಕೋಲ್ಕತ್ತಾ ತಂಡ, ಆರ್​ಸಿಬಿ ವಿರುದ್ಧ ಸೋತ ಮುಂಬೈ ಇಂಡಿಯನ್ಸ್​ನ್ನು ಹಿಮ್ಮೆಟ್ಟಿಸುವ ಉತ್ಸಾಹದಲ್ಲಿದೆ. ಮತ್ತೊಂದೆಡೆ ಇಂದು ಗೆದ್ದೇ ಗೆಲ್ಲುವ ತವಕದಲ್ಲಿ ಮುಂಬೈ ಇಂಡಿಯನ್ಸ್ ಆಟಗಾರರು ಇದ್ದಾರೆ.

ಎರಡೂ ತಂಡಗಳು ಒಂದೊಂದು ಪಂದ್ಯಾಟ ಆಡಿರುವುದರಿಂದ ಇಂದಿನ ಪಂದ್ಯಕ್ಕೆ ತಂಡ ಹದಗೊಳಿಸುವ ಸಾಧ್ಯತೆ ಇದೆ. ಪ್ಲೇಯಿಂಗ್ ಇಲೆವೆನ್​ನ್ನು ಕಳೆದ ಪಂದ್ಯದ ಅನುಸಾರ ಬದಲಿಸಿಕೊಳ್ಳುವ ಸೂಚನೆ ಲಭ್ಯವಾಗಿದೆ. ಭಾನುವಾರದ ಮ್ಯಾಚ್​ನಲ್ಲಿ ಕೋಲ್ಕತ್ತಾ ತಂಡದ ಆರಂಭಿಕ ಆಟಗಾರರು ಮಿಂಚಿದ್ದರು. ಉಳಿದಂತೆ ಮಧ್ಯಮ ಕ್ರಮಾಂಕ ಕುಸಿತಗೊಂಡಿತ್ತು. ಜೊತೆಗೆ, ಬೌಲರ್​ಗಳು ಕೂಡ ಹೇಳುವಂತ ಪ್ರದರ್ಶನ ತೋರಿರಲಿಲ್ಲ. ಹೀಗಾಗಿ ಈ ವಿಭಾಗದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂಬ ನಿರೀಕ್ಷೆ ಇದೆ.

ಮುಂಬೈ ತಂಡ ಬ್ಯಾಟಿಂಗ್​ಗೆ ಹೋಲಿಸಿದರೆ ಬೌಲಿಂಗ್ ವಿಭಾಗದಲ್ಲಿ ಉತ್ತಮ ಆಟವನ್ನೇ ಆಡಿತ್ತು. ಆರ್​ಸಿಬಿಗೆ ಅಧಿಕ ರನ್​ಗಳ ಟಾರ್ಗೆಟ್ ನೀಡಲು ಬ್ಯಾಟ್ಸ್​ಮನ್​ಗಳು ವಿಫಲಾರಗಿದ್ದರು. ಆದರೂ ಸಂತುಲಿತ ತಂಡವಾಗಿರುವ, 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಗೆಲ್ಲುವುದು ಅಸಾಧ್ಯವೇನಲ್ಲ.

ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ಶುಬ್ಮನ್ ಗಿಲ್ 2) ನಿತೀಶ್ ರಾಣಾ 3) ರಾಹುಲ್ ತ್ರಿಪಾಠಿ 4) ಇಯೊನ್ ಮೋರ್ಗಾನ್ (ನಾಯಕ) 5) ದಿನೇಶ್ ಕಾರ್ತಿಕ್ 6) ಆಂಡ್ರೆ ರಸ್ಸೆಲ್ 7) ಶಕೀಬ್ ಅಲ್ ಹಸನ್ 8) ಹರ್ಭಜನ್ ಸಿಂಗ್ 9) ಪ್ಯಾಟ್ ಕಮ್ಮಿನ್ಸ್ 10) ಪ್ರಸಾದ್ ಕೃಷ್ಣ 11) ವರುಣ್ ಚಕ್ರವರ್ತಿ

ಮುಂಬೈ ಇಂಡಿಯನ್ಸ್ ಸಂಭಾವ್ಯ ಪ್ಲೇಯಿಂಗ್ ಇಲೆವೆನ್: 1) ರೋಹಿತ್ ಶರ್ಮಾ (ನಾಯಕ) 2) ಕ್ರಿಸ್ ಲಿನ್ / ಕ್ವಿಂಟನ್ ಡಿ ಕಾಕ್ 3) ಸೂರ್ಯಕುಮಾರ್ ಯಾದವ್ 4) ಇಶಾನ್ ಕಿಶನ್ 5) ಕೀರನ್ ಪೊಲಾರ್ಡ್ 6) ಹಾರ್ದಿಕ್ ಪಾಂಡ್ಯ 7) ಕೃನಾಲ್ ಪಾಂಡ್ಯ 8) ಮಾರ್ಕೊ ಜಾನ್ಸೆನ್ 9) ರಾಹುಲ್ ಚಹರ್ / ಪಿಯೂಷ್ ಚಾವ್ಲಾ 10) ಜಸ್ಪ್ರಿತ್ ಬುಮ್ರಾ 11) ಟ್ರೆಂಟ್ ಬೌಲ್ಟ್

ಇದನ್ನೂ ಓದಿ: RR vs PBKS, IPL 2021: ಕೊನೆಯ ಓವರ್​ನಲ್ಲಿ ಸಿಂಗಲ್ ಓಟ ನಿರಾಕರಿಸಿದ ಸಂಜು ಸ್ಯಾಮ್ಸನ್​ಗೆ ಕ್ರಿಕೆಟ್ ದಿಗ್ಗಜರು ರಿಯಾಕ್ಟ್ ಮಾಡಿದ್ದು ಹೀಗೆ

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ 350 ಸಿಕ್ಸರ್ ಬಾರಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್

(KKR vs MI Predicted playing 11 Kolkata Knight Riders Mumbai Indians team IPL 2021)

Published On - 4:24 pm, Tue, 13 April 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ