IPL 2021: ಐಪಿಎಲ್ನಲ್ಲಿ 350 ಸಿಕ್ಸರ್ ಬಾರಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆದ ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್
ಬೆನ್ ಸ್ಟೋಕ್ಸ್ ಅವರ ಎಸೆತವೊಂದನ್ನು ಡೀಪ್ ಸ್ಕ್ವೇರ್ಲೆಗ್ ಬೌಂಡರಿ ಮೇಲೆ ಸಿಕ್ಸರ್ ಬಾರಿಸಿ ಗೇಲ್ ಈ ಮೈಲಿಗಲ್ಲನ್ನು ಸ್ಥಾಪಿಸಿದರು. ಟಿ20 ಕ್ರಿಕೆಟ್ ವಿಷಯಕ್ಕೆ ಬಂದರೆ ಗೇಲ್ರಂಥ ವಿಧ್ವಂಸಕ ಬ್ಯಾಟ್ಸ್ಮನ್ ಕ್ರಿಕೆಟಿಂಗ್ ವಿಶ್ವದಲ್ಲಿ ಮತ್ತೊಬ್ಬನಿಲ್ಲ. ಹಾಗಾಗೇ, ಯೂನಿವರ್ಸ್ ಬಾಸ್ ಅನ್ವರ್ಥ ನಾಮ ಅವರಿಗೆ ಚೆನ್ನಾಗಿ ಸೂಟ್ ಆಗುತ್ತದೆ.
ಅದೊಂದು ಕಾಲವಿತ್ತು, ಬ್ಯಾಟ್ಸ್ಮನ್ ಒಬ್ಬ ಸಿಕ್ಸರ್ ಬಾರಿಸಿದರೆ, ‘ಹೌದಾ ಸಿಕ್ಸರ್ ಬಾರಿಸಿದ್ನಾ!’ ಅಂತ ಜನ ಉದ್ಗಾರ ತೆಗೆಯುತ್ತಿದ್ದರು. ಪ್ರಸಕ್ತ ಕಾಲಮಾನಕ್ಕೆ ಫಾಸ್ಟ್ ಫಾರ್ವರ್ಡ್ ಮಾಡಿ; ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಇನ್ನಿಂಗ್ಸೊಂದರಲ್ಲಿ ಸಿಕ್ಸರ್ ಬಾರಿಸದೆ ಔಟಾದರೆ, ‘ಹೌದಾ ಒಂದೂ ಸಿಕ್ಸ್ ಬಾರಿಸ್ಲಿಲ್ವಾ,’ ಅಂತ ಕೇಳ್ತಾರೆ. ಗೇಲ್ ಹೆಸರಿನ ಈ ದೈತ್ಯ ಕ್ರಿಕೆಟ್ನ ಭಾಷ್ಯವನ್ನು ಅಷ್ಟರಮಟ್ಟಿಗೆ ಬದಲಾಯಿದ್ದಾರೆಂದರೆ ಉತ್ಪ್ರೇಕ್ಷೆ ಅನಿಸದು. ಪವರ್-ಹಿಟ್ಟಿಂಗ್ಗೆ ಮತ್ತೊಂದು ಹೆಸರು ಕ್ರಿಸ್ ಗೇಲ್. ಸೋಮವಾರದಂದು ಅವರು ಮಾಡಿದ ಸಾಧನೆಯನ್ನು ಸ್ವಲ್ಪ ಗಮನಿಸಿ. ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ 350 ಸಿಕ್ಸರ್ಗಳನ್ನು ಬಾರಿಸಿದ ಮೊದಲ ಆಟಗಾರನೆಂಬ ಖ್ಯಾತಿಯನ್ನು ಅವರು ತಮ್ಮ ಹೆಸರಿಗೆ ಬರೆದುಕೊಂಡರು. ಈ ಸಾಧನೆ ಅವರು ಮಾಡಿದ್ದು ಪಂಜಾಬ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ. ಈ ಪಂದ್ಯವನ್ನು ಕೆ.ಎಲ್.ರಾಹುಲ್ ನೇತೃತ್ವದ ಪಂಜಾಬ್ ತಂಡ 4 ರನ್ಗಳಿಂದ ಗೆದ್ದಿತು.
ಬೆನ್ ಸ್ಟೋಕ್ಸ್ ಅವರ ಎಸೆತವೊಂದನ್ನು ಡೀಪ್ ಸ್ಕ್ವೇರ್ಲೆಗ್ ಬೌಂಡರಿ ಮೇಲೆ ಸಿಕ್ಸರ್ ಬಾರಿಸಿ ಗೇಲ್ ಈ ಮೈಲಿಗಲ್ಲನ್ನು ಸ್ಥಾಪಿಸಿದರು. ಟಿ20 ಕ್ರಿಕೆಟ್ ವಿಷಯಕ್ಕೆ ಬಂದರೆ ಗೇಲ್ರಂಥ ವಿಧ್ವಂಸಕ ಬ್ಯಾಟ್ಸ್ಮನ್ ಕ್ರಿಕೆಟಿಂಗ್ ವಿಶ್ವದಲ್ಲಿ ಮತ್ತೊಬ್ಬನಿಲ್ಲ. ಹಾಗಾಗೇ, ‘ಯೂನಿವರ್ಸ್ ಬಾಸ್’ ಎಂಬ ಅನ್ವರ್ಥ ನಾಮ ಅವರಿಗೆ ಚೆನ್ನಾಗಿ ಸೂಟ್ ಆಗುತ್ತದೆ. ವಿಶ್ವದ ಅಗ್ರಮಾನ್ಯ ಬೌಲರ್ಗಳನ್ನೂ ಅವರು ದುಸ್ವಪ್ನವಾಗಿ ಕಾಡಿದ್ದಾರೆ ಮತ್ತು ಕಾಡುತ್ತಿದ್ದಾರೆ. ಸ್ಟೋಕ್ಸ್ ಅವರ ಎಸೆತವನ್ನು ಸಿಕ್ಸ್ ಎತ್ತಿದ ನಂತರ ಅವರು ರಾಹುಲ ತೆವಾಟಿಯಾ ಅವರ ದಾಳಿಯಲ್ಲಿ ಇನ್ನೊಂದು ಸಿಕ್ಸ್ ಬಾರಿಸಿ ತಮ್ಮ ಸಿಕ್ಸ್ಗಳ ಟ್ಯಾಲಿಯನ್ನು 351ಕ್ಕೆ ಕೊಂಡ್ಯೊಯ್ದರು. ಸಿಕ್ಸ್ಗಳನ್ನು ಬೇರೆ ಬ್ಯಾಟ್ಸ್ಮನ್ಗಳೂ ಬಾರಿಸಿರುತ್ತಾರೆ, ಆದರೆ ಸಿಕ್ಸ್ ಬಾರಿಸುವ ಆಯಾಮದಲ್ಲಿ ಗೇಲ್ ಅವರ ಅಧಿಪತ್ಯಕ್ಕೆ ಸವಾಲೆಸೆಯುವವರು ಯಾರೂ ಇಲ್ಲ.
ಐಪಿಎಲ್ನಲ್ಲಿ ಅತಿಹೆಚ್ಚು ಸಿಕ್ಸರ್ಗಳನ್ನು ಬಾರಿಸಿರುವವರ ಪೈಕಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡುವ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್. ಅವರು ಇದುವರೆಗೆ 237 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ವ್ಯತ್ಯಾಸ ಗಮನಿಸಿ. ಗೇಲ್, ಎಬಿಡಿಗಿಂತ 114 ಸಿಕ್ಸ್ಗಳನ್ನು ಜಾಸ್ತಿ ಬಾರಿಸಿದ್ದಾರೆ. ಮತ್ತೊಂದು ವ್ಯತ್ಯಾಸವನ್ನು ನಾವಿಲ್ಲಿ ಗಮನಿಸಬೇಕು. ಐಪಿಎಲ್ನಲ್ಲಿ ಗೇಲ್ ಕೇವಲ 133 ಪಂದ್ಯಗಳನ್ನಾಡಿದ್ದರೆ, ಡಿ ವಿಲಿಯರ್ಸ್ 170 ಪಂದ್ಯಗಳನ್ನಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಭಾರತೀಯ ಆಟಗಾರರ ಪೈಕಿ ಚೆನೈ ಸೂಪರ್ ಕಿಂಗ್ಸ್ ಟೀಮಿನ ನಾಯಕ ಮಹೇಂದ್ರಸಿಂಗ್ ಧೋನಿ 205 ಪಂದ್ಯಗಳಲ್ಲಿ 216 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಸೋಮವಾರದ ಪಂದ್ಯ ಆರಂಭವಾಗುವ ಮೊದಲು ಪಂಜಾಬ್ ತಂಡದ ನಿಕೊಲಾಸ್ ಪೂರನ್ ಅವರು ಗೇಲ್ ಬ್ಯಾಟಿಂಗ್ ಕುರಿತು ಮಾತಾಡುತ್ತಾ, ಅವರು ‘ಗೇಲ್ ಸ್ಟಾರ್ಮ್’ ಸೃಷ್ಟಿಸಲಿದ್ದಾರೆ ಅಂತ ಹೇಳಿದ್ದರು. ಗೇಲ್ ಉತ್ತಮ ಸ್ಪರ್ಶದಲ್ಲಿ ಕಂಡರಾದರೂ 28 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು.
ಐಪಿಎಲ್ ಪಂದ್ಯಗಳ ಪ್ರಸರಣದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ ಚ್ಯಾನೆಲ್ನಲ್ಲಿ ಪಂದ್ಯ ಆರಂಭಕ್ಕೆ ಮೊದಲು ಮಾತಾಡಿದ ಫೂರನ್, ‘ಭಾರತಕ್ಕೆ ವಾಪಸ್ಸು ಬಂದಿರುವುದು ತುಂಬಾ ಸಂತೋಷವಾಗಿದೆ. ಪಂಜಾಬ್ ಕಿಂಗ್ಸ್ ಪರ ಮತ್ತೊಂದು ಸೀಸನ್ ಆಡುತ್ತಿರುವ ಬಗ್ಗೆ ರೋಮಾಂಚನ ಉಂಟಾಗುತ್ತಿದೆ. ಎಲ್ಲ ಆಟಗಾರರು ಮೊದಲ ಪಂದ್ಯ ಆರಂಭವವಾಗುವುದನ್ನು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ನಾನು ಬೇರೆಯಯವರನ್ನು ಅನುಕರಿಸುವ ಗೋಜಿಗೆ ಹೋಗದೆ, ನನ್ನ ಎಂದಿನ ಶೈಲಿಯಲ್ಲೇ ಆಡುವುದನ್ನು ಮುದುವರೆಸಿ ಎಲ್ಲರಿಗೆ ಮನರಂಜನೆ ನೀಡುವ ಉದ್ದೇಶವಿಟ್ಟುಕೊಂಡಿದ್ದೇನೆ’ ಎಂದು ಹೇಳಿದ್ದರು.
‘ನಮ್ಮ ಗಮನ ಕೇವಲ ಆಟದ ಮೇಲೆ ಕೇಂದ್ರೀಕೃತಗೊಂಡಿರಬೇಕು, ಪ್ರತಿಯೊಬ್ಬ ಆಟಗಾರ ತನಗೆ ನೀಡಿರುವ ಜವಾಬ್ದಾರಿ ಮೇಲೆ ಪೋಕಸ್ ಮಾಡಿದರೆ, ನಮ್ಮ ತಂಡ ಉತ್ತಮ ಪ್ರದರ್ಶನ ನೀಡುವುದರಲ್ಲಿ ಸಂದೇಹವೇ ಇಲ್ಲ. ಕ್ರಿಸ್ ಗೇಲ್ ನಮ್ಮೊಂದಿಗಿದ್ದಾರೆ, ಅವರು ‘ಗೇಲ್ ಬಿರುಗಾಳಿಯನ್ನು’ ಸೃಷ್ಟಿಸಿ ಎಲ್ಲರನ್ನು ಮನರಂಜಿಸುತ್ತಾರೆ ಎಂಬ ನಂಬಿಕೆ ನಮಗಿದೆ’ ಎಂದು ಪೂರನ್ ಹೇಳಿದ್ದರು
Published On - 4:16 pm, Tue, 13 April 21