AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 MI vs KKR Live streaming: ಮುಂಬೈ ಮತ್ತು ಕೆಕೆಆರ್ ಪಂದ್ಯ ಎಲ್ಲಿ ನಡೆಯಲಿದೆ ಮತ್ತು ಯಾವಾಗ ಆರಂಭವಾಗುತ್ತದೆ? ಇಲ್ಲಿದೆ ಮಾಹಿತಿ

2019 ರ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನಲ್ಲಿ ಡಿ ಕಾಕ್ ಸ್ಥಿರ ಪ್ರದರ್ಶನಗಳನ್ನು ನೀಡಿದ್ದಾರೆ. ಆದರೆ ಅವರು ತಡವಾಗಿ ಮುಂಬೈ ಟೀಮನ್ನು ಸೇರಿಕೊಂಡಿರುವುದರಿಂದದ ನಾಳಿನ ಪಂದ್ಯದಲ್ಲಿ ಅವರು ಆಡುವರೇ ಎನ್ನುವ ಬಗ್ಗೆ ಗೊಂದಲವಿದೆ.

IPL 2021 MI vs KKR Live streaming: ಮುಂಬೈ ಮತ್ತು ಕೆಕೆಆರ್ ಪಂದ್ಯ ಎಲ್ಲಿ ನಡೆಯಲಿದೆ ಮತ್ತು ಯಾವಾಗ ಆರಂಭವಾಗುತ್ತದೆ? ಇಲ್ಲಿದೆ ಮಾಹಿತಿ
ವಿವೊ ಐಪಿಎಲ್ ಟ್ರೋಫಿ
ಅರುಣ್​ ಕುಮಾರ್​ ಬೆಳ್ಳಿ
| Updated By: Skanda|

Updated on: Apr 13, 2021 | 8:52 AM

Share

ಚೆನೈ: ಇಂಡಿಯನ್ ಪ್ರೀಮಿಯರ್​ ಲೀಗ್ 14ನೇ ಆವೃತ್ತಿ ರಂಗೇರುತ್ತಿದೆ. ಇಂದು (ಏಪ್ರಿಲ್ 13, ಮಂಗಳವಾರ) ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್​ರೈಡರ್ಸ್ ತಂಡಗಳು​ ಚೆನೈನ ಎಮ್ ಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿ ಆಗುತ್ತಿವೆ. ರೋಹಿತ್ ಶರ್ಮ ಅವರ ಮುಂಬೈ ತಂಡ ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಅಂದರೆ 5 ಸಲ ಚಾಂಪಿಯನ್​ಶಿಪ್​ ಗೆದ್ದಿದೆ. ಬಾಲಿವುಡ್​ ನಟ ಶಾರುಖ್​ ಖಾನ್ ಒಡೆತನದ ಕೊಲ್ಕತ್ತಾ ತಂಡ 2 ಬಾರಿ ಪ್ರಶಸ್ತಿ ಗೆದ್ದಿದೆ.

ಈ ನಡುವೆ ಇಂದಿನ ಪಂದ್ಯದಲ್ಲಿ ಅಡಲು ಮುಂಬೈನ ಆರಂಭ ಆಟಗಾರ ಕ್ವಿಂಟನ್  ಅರ್ಹರೇ ಎನ್ನುವ ಪ್ರಶ್ನೆ ಎದ್ದಿದೆ. ಜೊತೆಗೆ 2019 ರ ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನಲ್ಲಿ ಸ್ಥಿರ ಪ್ರದರ್ಶನಗಳನ್ನು ನೀಡಿದ ಡಿ ಕಾಕ್ ತಡವಾಗಿ ಮುಂಬೈ ಟೀಮನ್ನು ಸೇರಿಕೊಂಡಿರುವುದರಿಂದದ ನಾಳಿನ ಪಂದ್ಯದಲ್ಲಿ ಅವರು ಆಡುವರೇ ಎನ್ನುವ ಬಗ್ಗೆಯೂ ಗೊಂದಲವಿದೆ.

ಮುಂಬೈ ಟೀಮಿನ ಬೌಲಿಂಗ್ ಕೋಚ್ ಜಹೀರ್ ಖಾನ್, ನಾಳಿನ ಪಂದ್ಯದಲ್ಲಿ ಡಿ ಕಾಕ್ ಆಡಲಿದ್ದಾರೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ವಿರುದ್ಧ ಸೀಮಿತ ಒವರ್​ಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಟೀಮಿನ ಭಾಗವಾಗಿದ್ದ ಅವರು ಏಪ್ರಿಲ್​ 5 ರಂದು ಭಾರತಕ್ಕೆ ಕಾಲಿಟ್ಟ ನಂತರ 7 ದಿನಗಳ ಕಡ್ಡಾಯ ಕ್ವಾರಂಟೈನ್​ಗೊಳಗಾಗಿದ್ದರು. ಹಾಗಾಗಿ, ಅವರು ಮೊದಲ ಪಂದ್ಯದಲ್ಲಿ ಆಡಿರಲಿಲ್ಲ, ಅವರ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಕ್ರಿಸ್ ಲಿನ್ ಮಿಂಚಿನ 49 ರನ್ ಬಾರಿಸಿದ್ದರು.

ಸೋಮವಾರದಂದು ಸುದ್ದಿಗಾರರೊಂದಿಗೆ ಮಾತಾಡಿದ ಜಹೀರ್, ‘ಕ್ವಿಂಟನ್​ ಅವರ ಕ್ವಾಂರಟೈನ್ ಅವಧಿ ಮುಗಿದಿದೆ, ನಿನ್ನೆಯಿಂದ ಅವರು ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ, ಹಾಗಾಗಿ ನಾಳಿನ ಕೆಕೆಆರ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅವರು ಲಭ್ಯರಿದ್ದಾರೆ,’ ಎಂದು ಹೇಳಿದ್ದಾರೆ.

ಕಳೆದ ಸೀಸನ್​ ಮಧ್ಯಭಾಗದಿಂದ ಇಂಗ್ಲೆಂಡ್​ನ ಸೀಮಿತ ಓವರ್​ಗಳ ತಂಡಕ್ಕೆ ನಾಯಕನಾಗಿರುವ ಅಯಾನ್ ಮಾರ್ಗನ್ ಕೆಕೆಆರ್​ ನಾಯಕತ್ವ ವಹಿಸಿಕೊಂಡಿದ್ದಾರೆ. 2019 ರ ಸೀಸನ್​ನಲ್ಲಿ ನಾಯಕರಾಗಿದ್ದ ದಿನೇಶ್ ಕಾರ್ತಿಕ್ ತಮಗೆ ಬ್ಯಾಟಿಂಗ್​ ಮೇಲೆ ಫೋಕಸ್ ಮಾಡಲು ಆಗುತ್ತಿಲ್ಲ ಅಂತ ಹೇಳಿ ನಾಯಕತ್ವ ತ್ಯಜಿಸಿದ್ದರು. ಇನ್ನೊಂದೆಡೆ ಕೆಕೆಆರ್ ಟೀಮಿನಲ್ಲಿ ಕೆಲ ಸ್ಫೋಟಕ ಆಲ್​ರೌಂಡರ್​ಗ​ಳಿದ್ದು, ರಸ್ಸೆಲ್ ಮತ್ತು ಶಕೀಬ್ ಅಲ್​ ಹಸನ್ ತಮ್ಮ ವೈಯಕ್ತಿಕ ಸಾಮರ್ಥ್ಯಗಳಿಂದ ಪಂದ್ಯದ ತಿರುವನ್ನು ಬದಲಾಯಿಸಬಲ್ಲವರಾದ್ದರಿಂದ ಈ ಪಂದ್ಯ ಕುತೂಹಲ ಮೂಡಿಸಿದೆ.

ಹಾಗಾದರೆ, ರೋಹಿತ್ ಮತ್ತು ಮಾರ್ಗನ್ ತಂಡಗಳ ನಡುವೆ ಮಹತ್ವದ ಪಂದ್ಯ ಎಲ್ಲಿ ನಡೆಯಲಿದೆ.

ಈ ಪಂದ್ಯ ಚೆನೈನ ಎಮ್ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ ಅಂತ ನಿಮಗೆ ಗೊತ್ತಿದೆ ತಾನೆ?

ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಎಂದಿನಂತೆ ಸಂಜೆ 7 ಗಂಟೆಗೆ ನಡೆಯಲಿದೆ.

ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ?

ಸದರಿ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ. ಇದಲ್ಲದೆ, ನೀವು ಲೈವ್ ಮಾಹಿತಿಗಾಗಿ ಮತ್ತು ಓವರ್ ಟು ಓವರ್ ಅಪ್​ಡೆಟ್​ಗಾಗಿ ಟಿವಿ9 ಡಿಜಿಟಲ್ ಲೈವ್​ಬ್ಲಾಗ್​ ವೀಕ್ಷಿಸಿ.

ಇದನ್ನೂ ಓದಿ: Nitish Rana IPL 2021 KKR Team Player: ನಿತಿಷ್ ರಾಣಾನ ಪ್ರತಿಭೆ ಗುರುತಿಸಿದ್ದು ಒಬ್ಬ ಲೆಜೆಂಡ್, ಅದನ್ನು ಸುಧಾರಿಸಿಕೊಳ್ಳಲು ನೆರವಾಗಿದ್ದು ಮತ್ತೊಬ್ಬ ಲೆಜೆಂಡ್!

100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ