Nitish Rana IPL 2021 KKR Team Player: ನಿತಿಷ್ ರಾಣಾನ ಪ್ರತಿಭೆ ಗುರುತಿಸಿದ್ದು ಒಬ್ಬ ಲೆಜೆಂಡ್, ಅದನ್ನು ಸುಧಾರಿಸಿಕೊಳ್ಳಲು ನೆರವಾಗಿದ್ದು ಮತ್ತೊಬ್ಬ ಲೆಜೆಂಡ್!

ಐಪಿಎಲ್​ನಲ್ಲಿನ ಪ್ರದರ್ಶನಗಳು ಅವರ ಪ್ರಥಮ ದರ್ಜೆ ಕ್ರಿಕೆಟ್​ಗೆ ನೆರವಾದವು. 2017-18ರಣಜಿ ಋತುವಿನಲ್ಲಿ ಅವರು ಆಡಿದ 8 ಪಂದ್ಯಗಳಿಂದ 55.72 ಸರಾಸರಿಯೊಂದಿಗೆ 613 ರನ್ ಕಲೆ ಹಾಕಿದರು.

Nitish Rana IPL 2021 KKR Team Player: ನಿತಿಷ್ ರಾಣಾನ ಪ್ರತಿಭೆ ಗುರುತಿಸಿದ್ದು ಒಬ್ಬ ಲೆಜೆಂಡ್, ಅದನ್ನು ಸುಧಾರಿಸಿಕೊಳ್ಳಲು ನೆರವಾಗಿದ್ದು ಮತ್ತೊಬ್ಬ ಲೆಜೆಂಡ್!
ನಿತಿಷ್ ರಾಣಾ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಆಯೇಷಾ ಬಾನು

Updated on: Apr 11, 2021 | 1:55 PM

2015 ರ ಇಂಡಿಯನ್ ಪ್ರಿಮೀಯರ್ ಸೀಸನ್​ಗೆ ಮೊದಲು ದೆಹಲಿ ರಣಜಿ ತಂಡಕ್ಕೆ ಆಡುತ್ತಿದ್ದ ನಿತಿಷ್ ರಾಣಾ ಅವರಿಗೆ ದೆಹಲಿಯಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯಗಳನ್ನು ನೋಡುವ ಆಸೆಯಿಂದಲೇ ಮೈದಾನಕ್ಕೆ ಹೋಗುತ್ತಿದ್ದರಾದರೂ ದೆಹಲಿ ಪರ ಚೀರ್ ಲೀಡರ್ ಆಗಿದ್ದ ಖ್ಯಾತ ಬಾಲಿವುಡ್ ನಟ ಅಕ್ಷಯಕುಮಾರ್ ಆವರನ್ನು ನೋಡುವುದು ಸಹ ಅವರಿಗೆ ಅಷ್ಟೇ ಇಷ್ಟವಾಗುತ್ತಿತ್ತು, ಮುಂದೊಂದು ದಿನ ತಾನು ಐಪಿಎಲ್​ನಲ್ಲಿ ಆಡಲಿದ್ದೇನೆ ಎಂಬ ಕನಸು ಅವರಿಗೆ ಆಗ ಇರಲಿಲ್ಲ. ಅವರ ಪ್ರತಿಭೆಯನ್ನು ಎಲ್ಲರಿಗಿಂತ ಮೊದಲು ಗುರುತಿಸಿದ್ದು ಯಾರಿರಬಹುದೆಂದು ಊಹಿಸಬಲ್ಲಿರಾ? ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್.

ಮುಂಬೈ ವಿರುದ್ದ ಅವರು ರಣಜಿ ಪಂದ್ಯವೊಂದನ್ನು ಆಡುತ್ತಿದ್ದಾಗ ಅವರ ಸ್ನೇಹಿತನೊಬ್ಬ ರಾಣಾ ಇದ್ದಲ್ಲಿಗೆ ಬಂದು ನೀನು ಈ ಸಾಲಿನ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿರುವೆ ಅಂತ ಹೇಳಿದಾಗ ಅವನೆಲ್ಲೋ ತಮಾಷೆ ಮಾಡುತ್ತಿರಬಹುದೆಂದು ರಾಣಾ ಭಾವಿಸಿದರಂತೆ. ಆದರೆ, ಅ ಸ್ನೇಹಿತ ಸಚಿನ್ ಆಗ ಮುಂಬೈ ಇಂಡಿಯನ್ಸ್ ತಂಡದ ಮ್ಯಾನೇಜರ್ ಅಗಿದ್ದ ಭಾರತದ ಮಾಜಿ ಆಟಗಾರ ರಾಹುಲ್ ಸಾಂಘ್ವಿ ಅವರೊಂದಿಗೆ ಮಾತಾಡುತ್ತಾ ರಾಣಾ ಕುರಿತು, ‘ಈ ಹುಡುಗ ಯಾರು, ಅವನು ಬ್ಯಾಟಿಂಗ್ ಮಾಡುತ್ತಿರುವದನ್ನು ನೋಡುವಾಗ ದೃಷ್ಟಿಯನ್ನು ಬೇರಡೆ ತಿರುಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಅಷ್ಟು ಸೊಗಸಾಗಿ ಆಡುತ್ತಾನೆ ಎಂದು ಹೇಳಿದ್ದನ್ನು ಕೇಳಿಸಿಕೊಂಡಿದ್ದನಂತೆ. ಹಾಗೆಯೇ ಮಾಸ್ಟರ್ ಬ್ಲಾಸ್ಟರ್ ರಾಣಾನನ್ನು ಆ ಸಾಲಿನ ಹರಾಜಿನಲ್ಲಿ ತಂಡಕ್ಕೆ ಖರೀದಿಸಲು ಹೇಳಿದ್ದನ್ನೂ ಅವನು ಕೇಳಿಸಿಕೊಂಡನಂತೆ.

ಅದು ಹಾಗೆಯೇ ಅಯಿತು, ಮುಂಬೈ ಇಂಡಿಯನ್ಸ್ ರಾಣಾನನ್ನು 2015 ಸೀಸನ್​ಗೆ 10 ಲಕ್ಷ ರೂಪಾಯಿಗಳ ಮೂಲ ಬೆಲೆಗೆ ಖರೀದಿಸಿತು. ರಾಣಾನ ಕನಸು ನನಸಾಗಿತ್ತು.

Sacin Tendulkar and Ricky Pointing

ಸಚಿನ್ ತೆಂಡೂಲ್ಕರ್ ಮತ್ತು ರಿಕ್ಕಿ ಪಾಂಟಿಂಗ್

ಆ ಸೀಸನ್​ನಲ್ಲಿ ಮುಂಬೈಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಎದುರಾಗಿತ್ತು. ಆಗ ಟೀಮಿನ ಕೋಚ್ ಆಗಿದ್ದ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ರಾಣಾರನ್ನು ಪಕ್ಕಕ್ಕೆ ಕರೆದು,‘ಯಾವ ಎಸೆತವನ್ನೂ ಡಿಫೆಂಡ್ ಮಾಡಬೇಡ, ನೀನು ಬಿಗ್ ಹಿಟ್​ಗಳನ್ನು ಆಡಬಲ್ಲೆ, ಯಾವುದಕ್ಕೂ ಹೆದರದೆ ಹೊಡೆತಗಳನ್ನು ಬಾರಿಸು’ ಎಂದು ಹೇಳಿದರಂತೆ. ಯುವ ಆಟಗಾರನಿಗೆ ಅಷ್ಟು ಸಾಕಿತ್ತು. ಭಾರಿ ದೇಹಧಾರ್ಡ್ಯ ಹೊಂದಿರುವ ಈ ಎಡಚ 36 ಎಸೆತಗಲ್ಲಿ 70 ರನ್ ಬಾರಿಸಿದರಾದರೂ ಮುಂಬೈ ಆ ಪಂದ್ಯವನ್ನು ಸೋತಿತು. ಅದರೆ ಒಬ್ಬ ಐಪಿಎಲ್ ದಿಗಂತದಲ್ಲಿ ಒಂದು ಹೊಸ ತಾರೆ ಉದಯಿಸಿತ್ತು!

ಪಾಂಟಿಂಗ್ ಅವರ ಸಲಹೆ ಮತ್ತು ಮಾರ್ಗದರ್ಶನ ತನ್ನ ಕರೀಯರ್​ನ ದಿಕ್ಕನ್ನೇ ಬದಲಿಸಿತು ಎಂದು ರಾಣಾ ಹೇಳಿದ್ದರು.

ಒಬ್ಬ ಲೆಜೆಂಡ್ ಅವರ ಪ್ರತಿಭೆಯನ್ನು ಗುರುತಿಸಿದ್ದರು ಮತ್ತೊಬ್ಬ ಲೆಜೆಂಡ್ ಅದನ್ನು ಫೈನ್ ಟ್ಯೂನ್ ಮಾಡಿದ್ದರು. ಮುಂಬೈ ಟೀಮಿಗೆ ಬ್ಯಾಟ್​ನಿಂದ ಉತ್ತಮ ಕಾಣಿಕೆ ನೀಡುವದನ್ನು ರಾಣಾ ಮುಂದುವರೆಸಿ 2 ಸೀಸನ್​ಗಳನ್ನು ಅಂಬಾನಿಗಳ ತಂಡಕ್ಕೆ ಆಡಿದರು. ಆದರೆ 2017 ರ ಸೀಸನ್​ನಲ್ಲಿ ಅವರ ಪ್ರದರ್ಶನದ ಮಟ್ಟ ಕುಸಿಯಿತು. ಆಡುವ ಎಲೆವೆನ್​ನಿಂದ ಅವರು ಸ್ಥಾನ ಕಳೆದುಕೊಂಡಿದ್ದರು ಮತ್ತು ಆ ಸೀಸನ್​ ನಂತರ ಮುಂಬೈ ಟೀಮ್ ಅವರನ್ನು ರಿಲೀಸ್ ಮಾಡಿತ್ತು.

ಆದರೆ, ಐಪಿಎಲ್​ನಲ್ಲಿನ ಪ್ರದರ್ಶನಗಳು ಅವರ ಪ್ರಥಮ ದರ್ಜೆ ಕ್ರಿಕೆಟ್​ಗೆ ನೆರವಾದವು. 2017-18ರಣಜಿ ಋತುವಿನಲ್ಲಿ ಅವರು ಆಡಿದ 8 ಪಂದ್ಯಗಳಿಂದ 55.72 ಸರಾಸರಿಯೊಂದಿಗೆ 613 ರನ್ ಕಲೆ ಹಾಕಿದರು. ಅವರ ಈ ಪ್ರದರ್ಶನದಿಂದ ಇಂಪ್ರೆಸ್ ಆದ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು 2018 ರ ಐಪಿಎಲ್ ಸೀಸನ್​ಗೆ ಅವರನ್ನು 3.4 ಕೋಟಿ ರೂಪಾಯಿಗಳಿಗೆ ಖರೀದಿಸಿತು. ಎಲ್ಲಿಯ 10 ಲಕ್ಷ, ಎಲ್ಲಿಯ 3.4 ಕೋಟಿ ರೂಪಾಯಿ?

2018ರಿಂದ ರಾಣಾ ಕೆಕೆಆರ್ ತಂಡದ ಪ್ರಮುಖ ಟಾಪ್ ಆರ್ಡರ್ ಬ್ಯಾಟ್ಸ್​ಮನ್ ಆಗಿ ಹೊರಹೊಮ್ಮಿದ್ದಾರೆ. ತಮ್ಮ ಎತ್ತರವನ್ನು ಲೀಲಾಜಾಲವಾಗಿ ಹೊಡೆತಗಳನ್ನು ಬಾರಿಸಲು ಅವರು ಉಪಯೋಗಿಸಿಕೊಳ್ಳುತ್ತಾರೆ. ಖಾನ್ ಸಾಹೇಬರ ತಂಡಕ್ಕೆ ರಾಣಾ ಹಲವಾರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​ಗಳನ್ನು ಆಡಿದ್ದಾರೆ.

2016 ರ ಸೀಸನಲ್ಲಿ ಮುಂಬೈ ಪರ 4 ಪಂದ್ಯಗಳನ್ನಾಡಿದ ರಾಣಾ 70 ಅತ್ಯಧಿಕ ಸ್ಕೊರಿನೊಂದಿಗೆ 104 ರನ್ ಗಳಿಸಿದರು. ಸರಾಸರಿ 34.66 ಮತ್ತು ಸ್ಟ್ರೈಕ್​ರೇಟ್ 135. ಮರುವರ್ಷ ಅವರು 13 ಪಂದ್ಯಗಳನ್ನಾಡಿ ಅಜೇಯ 62ರನ್ ಅತ್ಯಧಿಕ ಸ್ಕೋರ್​ನೊಂದಿಗೆ 30.17 ಸರಾಸರಿ ಮತ್ತು 126.13 ಸ್ಟ್ರೈಕ್​ರೇಟ್​ನೊಂದಿಗೆ 333 ರನ್ ಗಳಿಸಿದರು. ಆ ಸಾಲಿನಲ್ಲಿ ಅವರು 3 ಅರ್ಧ ಶತಕಗಳನ್ನು ಬಾರಿಸಿದರು.

2018ರಿಂದ ಕೆಕೆಆರ್ ಪರ ಆಡಲಾರಂಭಿಸಿದ ರಾಣಾ ಮೊದಲ ಸೀಸನಲ್ಲಿ 15 ಪಂದ್ಯಗಳನ್ನಾಡಿ 23.38 ಸರಾಸರಿ ಮತ್ತು 131.03 ಸ್ಟ್ರೈಕ್​ರೇಟ್​ನೊಂದಿಗೆ 304 ರನ್ ಗಳಿಸಿದರು. ಅತ್ಯಧಿಕ ಸ್ಕೋರ್ 59 ಆಗಿತ್ತು ಮತ್ತು ಅದು ಆ ಸಾಲಿನಲ್ಲಿ ಅವರ ಏಕೈಕ ಅರ್ಧ ಶತಕವಾಗಿತ್ತು. ಮರುವರ್ಷದ ಸೀಸನಲ್ಲಿ ರಾಣಾ 14 ಪಂದ್ಯಗಳಲ್ಲಿ ಕಾಣಿಸಿಕೊಂಡು 34.4 ಸರಾಸರಿ ಮತ್ತು 146.38 ಸ್ಟ್ರೈಕ್​ರೇಟ್​ನಲ್ಲಿ 344 ರನ್ ಬಾರಿಸಿದರು. ಅವರ ಅತ್ಯಧಿಕ ಸ್ಕೋರ್ ಅಜೇಯ 85 ಆಗಿತ್ತು ಮತ್ತು 3 ಅರ್ಧ ಶತಕಗಳನ್ನು ಬಾರಿಸಿದರು. ಕಳೆದ ಬಾರಿ ಯುಎಈಯಲ್ಲಿ ನಡೆದ ಐಪಿಎಲ್ ಸೀಸನಲ್ಲಿ ಅವರು 14 ಪಂದ್ಯಗಳಿಂದ 25.14 ಸರಾಸರಿಯಲ್ಲಿ 352 ರನ್ ಬಾರಿಸಿದರು. 87 ಅವರ ಗರಿಷ್ಠ ಸ್ಕೋರ್ ಆಗಿತ್ತು ಮತ್ತು 3 ಅರ್ಧ ಶತಕಗಳನ್ನು ಸಿಡಿಸಿದರು.

ಒಟ್ಟಾರೆಯಾಗಿ ಇದುವರೆಗೆ 60 ಪಂದ್ಯಗಳನ್ನಾಡಿರುವ ರಾಣಾ, 28.17 ಸರಾಸರಿಯಲ್ಲಿ 1,437 ರನ್ ಗಳಿಸಿದ್ದಾರೆ ಇದರಲ್ಲಿ 11 ಅರ್ಧ ಶತಕ ಸೇರಿವೆ. ಅವರ ಸ್ಟ್ರೈಕ್​ರೇಟ್ 135.36 ಆಗಿದೆ.

ನಿಯಮಿತ ಬೌಲರ್ ಅಲ್ಲದಿದ್ದರೂ ಆಫ್-ಬ್ರೇಕ್ ಬೌಲಿಂಗ್ ಮಾಡುವ ರಾಣಾ ಐಪಿಎಲ್​ನಲ್ಲಿ 14 ವಿಕೆಟ್ ಸಹ ಪಡೆದಿದ್ದಾರೆ.

ಇದನ್ನೂ ಓದಿ: IPL 2021: ಆರ್​ಸಿಬಿ 15 ಕೋಟಿ ಕೊಟ್ಟು ಖರೀದಿಸಿದ್ದ ನ್ಯೂಜಿಲ್ಯಾಂಡ್​ ವೇಗಿಗೆ ಶಾಕ್​ ಮೇಲೆ ಶಾಕ್!

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ