IPL 2021: ಆರ್​ಸಿಬಿ 15 ಕೋಟಿ ಕೊಟ್ಟು ಖರೀದಿಸಿದ್ದ ನ್ಯೂಜಿಲ್ಯಾಂಡ್​ ವೇಗಿಗೆ ಶಾಕ್​ ಮೇಲೆ ಶಾಕ್!

IPL 2021: ಐಸಿಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೇಮೀಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಪಂದ್ಯದ ತೀರ್ಪುಗಾರ ವಿಧಿಸಿದ ಶಿಕ್ಷೆಯನ್ನು ಸಹ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

IPL 2021: ಆರ್​ಸಿಬಿ 15 ಕೋಟಿ ಕೊಟ್ಟು ಖರೀದಿಸಿದ್ದ ನ್ಯೂಜಿಲ್ಯಾಂಡ್​ ವೇಗಿಗೆ ಶಾಕ್​ ಮೇಲೆ ಶಾಕ್!
ಕೈಲ್ ಜಾಮಿಸನ್
Follow us
ಪೃಥ್ವಿಶಂಕರ
|

Updated on: Mar 25, 2021 | 4:01 PM

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಆರ್​ಸಿಬಿ ಪ್ರಾಂಚೈಸಿ, ನ್ಯೂಜಿಲ್ಯಾಂಡ್​ ವೇಗದ ಬೌಲರ್ ಕೈಲ್ ಜಾಮಿಸನ್ ಅವರನ್ನು ಹೆಚ್ಚಿನ ಬೆಲೆಗೆ ಖರೀದಿಸಿದಾಗಿನಿಂದ ಅವರಿಗೆ ಅದೃಷ್ಟ ಸರಿಯಾಗಿ ಕೈಕೊಡುತ್ತಿದೆ. ಮೊದಲನೆಯದಾಗಿ, ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಲ್ಲಿ ಜಾಮಿಸನ್ ಕಳಪೆ ಪ್ರದರ್ಶನ ನೀಡಿದ್ರು. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಅವರು ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ. ಎರಡನೇ ಪಂದ್ಯದಲ್ಲಿ, ತಮ್ಮದೇ ಎಸೆತದಲ್ಲಿ ಉತ್ತಮ ಕ್ಯಾಚ್ ತೆಗೆದುಕೊಂಡರೂ, ಮೂರನೇ ಅಂಪೈರ್ ಅವರ ಪರವಾಗಿ ನಿರ್ಧಾರವನ್ನು ನೀಡಲಿಲ್ಲ. ಈಗ ಪಂದ್ಯದ ಸಮಯದಲ್ಲಿ ಅವರ ವರ್ತನೆಯಿಂದಾಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಹ ಅವರಿಗೆ ಶಿಕ್ಷೆ ವಿಧಿಸಿದೆ ಮತ್ತು ಅವರ ಪಂದ್ಯದ ಶುಲ್ಕವನ್ನು ಕಡಿತಗೊಳಿಸಲಾಗಿದೆ.

ಅಂಪೈರ್ ವಿರುದ್ಧ ವಿರೋಧ ವ್ಯಕ್ತಪಡಿಸಿದರು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ, 15 ನೇ ಓವರ್‌ನಲ್ಲಿ, ಕೈಲ್ ಜಾಮಿಸನ್ ತಮೀಮ್ ಇಕ್ಬಾಲ್ ರನ್ನು ತಮ್ಮದೇ ಎಸೆತದಲ್ಲಿ ಕ್ಯಾಚ್ ಪಡೆದರು. ಬಾಂಗ್ಲಾ ಆಟಗಾರ ತಮೀಮ್, ಬೌಲರ್ ಕಡೆಗೆ ಬಾಲನ್ನು ಬಾರಿಸಿದರು. ಎದುರಿಗಿದ್ದ ಜೇಮೀಸನ್ ತನ್ನ ಎಡಕ್ಕೆ ಧುಮುಕುವ ಮೂಲಕ ಕ್ಯಾಚ್ ತೆಗೆದುಕೊಂಡರು. ಆದಾಗ್ಯೂ, ಆನ್-ಫೀಲ್ಡ್ ಅಂಪೈರ್ ಅದನ್ನು ಮೂರನೇ ಅಂಪೈರ್ಗೆ ಹಸ್ತಾಂತರಿಸಿದರು. ಅಂಪೈರ್ ನಾಟ್​ಔಟ್​ ಎಂದು ಸಾಫ್ಟ್ ಸಿಗ್ನಲ್ ನೀಡಿದರು. ಇದರಿಂದ ಮೂರನೇ ಅಂಪೈರ್ ಸಹ ಬ್ಯಾಟ್ಸ್‌ಮನ್ ಪರವಾಗಿ ತೀರ್ಪು ನೀಡಿ ನಾಟ್ ಔಟ್ ಎಂದು ಘೋಷಿಸಿದರು. ಜೇಮ್ಸನ್ ಈ ನಿರ್ಧಾರದಿಂದ ಅಸಮಾಧಾನಗೊಂಡು ಅಂಪೈರ್ ವಿರುದ್ಧ ವಿರೋಧ ವ್ಯಕ್ತಪಡಿಸಿದರು.

ಪಂದ್ಯದ ಶುಲ್ಕದ 15% ಕಡಿತಗೊಳಿಸಲಾಗಿದೆ ಐಸಿಸಿಯ ನೀತಿ ಸಂಹಿತೆಯ ವಿರುದ್ಧ ಕೈಲ್ ಜಾಮಿಸನ್ ನಡವಳಿಕೆಯನ್ನು ಪರಿಗಣಿ ಅಂಪೈರ್ಗಳು ಪಂದ್ಯದ ರೆಫರಿಗೆ ದೂರು ನೀಡಿದರು. ಪಂದ್ಯದ ರೆಫರಿ ಜೆಫ್ ಕ್ರೋವ್, ಕೈಲ್ ಜಾಮಿಸನ್ ಲೆವೆಲ್ 1 ಉಲ್ಲಂಘನೆಗೆ ತಪ್ಪಿತಸ್ಥರೆಂದು ಪರಿಗಣಿಸಿ ಪಂದ್ಯದ ಶುಲ್ಕದ 15 ಪ್ರತಿಶತದಷ್ಟು ದಂಡವನ್ನು ವಿಧಿಸಲಾಗಿದೆ. ಐಸಿಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, ಜೇಮೀಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಪಂದ್ಯದ ತೀರ್ಪುಗಾರ ವಿಧಿಸಿದ ಶಿಕ್ಷೆಯನ್ನು ಸಹ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆದಾಗ್ಯೂ, ಈ ಪಂದ್ಯದಲ್ಲಿ ಜಾಮಿಸನ್ ವಿಕೆಟ್ ಪಡೆದರು. ಮೆಹಮದುಲ್ಲಾ ಅವರನ್ನು ಔಟ್ ಮಾಡುವ ಮೂಲಕ ಜೇಮೀಸನ್ ಬಾಂಗ್ಲಾದೇಶ ತಂಡಕ್ಕೆ ಐದನೇ ಹೊಡೆತ ನೀಡಿದರು. ನಾಯಕ ಟಾಮ್ ಲಾಥಮ್ ಅವರ ಶತಕದ ಸಹಾಯದಿಂದ ನ್ಯೂಜಿಲ್ಯಾಂಡ್​ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿತು.

ಹರಾಜಿನ ನಂತರ ಕೆಟ್ಟ ಸ್ಥಿತಿ ಬಲಗೈ ವೇಗದ ಬೌಲರ್ ಜಾಮಿಸನ್ನನ್ನು ಕಳೆದ ತಿಂಗಳು ಐಪಿಎಲ್ 2021 ರ ಹರಾಜಿನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿತು. ಈ ಹರಾಜಿಗೂ ಮೊದಲು, ಜಾಮಿಸನ್ ನ್ಯೂಜಿಲ್ಯಾಂಡ್​ ಪರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಹರಾಜಿನ ನಂತರದ ಪಂದ್ಯಗಳು ಅವರಿಗೆ ಉತ್ತಮವಾಗಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಆಡಿದ 4 ಟಿ 20 ಪಂದ್ಯಗಳಲ್ಲಿ, ಜಾಮಿಸನ್ ಕೇವಲ ಒಂದು ವಿಕೆಟ್ ಪಡೆದರೆ, ಬ್ಯಾಟ್ಸ್‌ಮನ್‌ಗಳು ಅವರ ಎಸೆತಗಳಲ್ಲಿ ರನ್‌ಗಳನ್ನು ಲೂಟಿ ಮಾಡಿದರು. ಅದೇ ಸಮಯದಲ್ಲಿ ಅವರು ಬಾಂಗ್ಲಾದೇಶ ವಿರುದ್ಧದ 2 ಏಕದಿನ ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: IPL 2021: ಆರ್​ಸಿಬಿ ರಣತಂತ್ರ! ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನಾವು ಹರಾಜಿಗೂ ಮುನ್ನವೇ ತೀರ್ಮಾನಿಸಿದ್ದೇವು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ