India vs England: ಎರಡನೇ ಏಕದಿನ ಪಂದ್ಯಕ್ಕೆ ಪಿಚ್- ಹವಾಮಾನ ವರದಿ, ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ
India vs England: ಎಂಸಿಎ ಕ್ರೀಡಾಂಗಣದಲ್ಲಿ ವಿಕೆಟ್ ಖಂಡಿತವಾಗಿಯೂ ವೇಗಿಗಳಿಗೆ ನೆರವಾಗಲಿದೆ. ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸನ್ನು ಅನುಭವಿಸದಿದ್ದರೂ, ನಾಳಿನ ಪಂದ್ಯದಲ್ಲಿ ಮ್ಯಾಜಿಕ್ ನಡೆದರು ನಡೆಯಬಹುದು.
ಮಾರ್ಚ್ 26 ರ ಶುಕ್ರವಾರ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆತಿಥೇಯರು 66 ರನ್‌ಗಳ ಅಂತರದಿಂದ ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತವು ನಿಧಾನಗತಿಯ ಆರಂಭಿಕ ಪಾಲುದಾರಿಕೆಯ ನಂತರ ವೇಗವನ್ನು ಹೆಚ್ಚಿಸಿತು. ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಒಟ್ಟಿಗೆ ಎರಡನೇ ವಿಕೆಟ್ಗೆ 105 ರನ್ ಗಳಿಸಿದರು. ಆದರೆ, ಕೊಹ್ಲಿ ಔಟಾದ ನಂತರ ಆತಿಥೇಯರು ವಿಕೆಟ್ ಕಳೆದುಕೊಳ್ಳುತ್ತಿದ್ದರು. 98 ರನ್‌ಗಳಿಗೆ ಔಟಾದ ಧವನ್ ಅರ್ಹ ಶತಕವನ್ನು ಕಳೆದುಕೊಂಡರು. ಆದಾಗ್ಯೂ, ನಂ .5 ರಲ್ಲಿ ಬ್ಯಾಟಿಂಗ್ ಮಾಡಲು ಬಂದ ಕೆ.ಎಲ್. ರಾಹುಲ್, ಭಾರತದ ಇನ್ನಿಂಗ್ಸ್ ಅನ್ನು 300ರ ಗಡಿ ದಾಟಿಸಿದರು. ಇದಕ್ಕೆ ಚೊಚ್ಚಲ ಪಂದ್ಯವನ್ನಾಡಿದ ಕ್ರುನಾಲ್ ಪಾಂಡ್ಯ ಸಹ ಕೈಜೋಡಿಸಿದರು.
6 ಬೌಂಡರಿ, 7 ಸಿಕ್ಸರ್ ಸಹಿತ 94 ರನ್ ಕೂಡಿಸಿದರು ಉತ್ತಮ ಮೊತ್ತದ ಬೆನ್ನತ್ತಿದ ಇಂಗ್ಲೆಂಡ್ಗೆ ಉತ್ತಮ ಆರಂಭವೇನೋ ಒದಗಿತು. ಆದರೆ ಮಧ್ಯಮ ಕ್ರಮಾಂಕ ಪ್ರಯೋಜನಕಾರಿ ಆಟವಾಡಲಿಲ್ಲ. ಇಂಗ್ಲೆಂಡ್ ಪರ ಉತ್ತಮ ಆಟವಾಡಿದ ಜೇಸನ್ ರಾಯ್ 46 ಹಾಗೂ ಬೇರ್ಸ್ಟೋ 66 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ ಸಹಿತ 94 ರನ್ ಕೂಡಿಸಿದರು. ಈ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಬಹುದೇನೋ ಎಂದು ಅಂದುಕೊಳ್ಳುವಂತೆ ಆಡಿದರು. ಆದರೆ ಅವರಿಬ್ಬರ ಹೊರತಾಗಿ ಉಳಿದ ಆಟಗಾರರು 30 ರನ್ ಗಳಿಸುವುದರೊಳಗೆ ಸುಸ್ತಾಗಿ ಬಿಟ್ಟರು. ಭಾರತೀಯ ಸಂಘಟಿತ ದಾಳಿಗೆ ಶರಣಾದರು.
ಭಾರತದ ಪರವಾಗಿ ಪ್ರಸಿದ್ಧ್ ಕೃಷ್ಣ 4, ಶಾರ್ದೂಲ್ ಠಾಕುರ್ 3 ಹಾಗೂ ವೇಗಿ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ನಿಂದ ಗಮನ ಸೆಳೆದ ಕೃನಾಲ್ ಪಾಂಡ್ಯ, 10 ಓವರ್ಗಳನ್ನೂ ಎಸೆದು 5.9 ಎಕನಮಿಯಲ್ಲಿ 59 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಬೌಲಿಂಗ್ನಲ್ಲೂ ಉತ್ತಮ ಆಟವನ್ನೇ ಕಾಣಿಸಿದರು.
ಎರಡನೇ ಪಂದ್ಯದ ಹವಾಮಾನ ವರದಿ ಎರಡನೇ ಏಕದಿನ ಪಂದ್ಯದಂದು ಪುಣೆಯಲ್ಲಿ ಬಿಸಿಲಿನ ವಾತಾವರಣ ಇರಲಿದೆ. ಮಳೆಯಾಗುವ ಯಾವುದೇ ಸಂಭವಗಳಿಲ್ಲ. ಸರಾಸರಿ ತಾಪಮಾನವು ಸುಮಾರು 36 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಪಿಚ್ ವರದಿ ಎಂಸಿಎ ಕ್ರೀಡಾಂಗಣದಲ್ಲಿ ವಿಕೆಟ್ ಖಂಡಿತವಾಗಿಯೂ ವೇಗಿಗಳಿಗೆ ನೆರವಾಗಲಿದೆ. ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸನ್ನು ಅನುಭವಿಸದಿದ್ದರೂ, ನಾಳಿನ ಪಂದ್ಯದಲ್ಲಿ ಮ್ಯಾಜಿಕ್ ನಡೆದರು ನಡೆಯಬಹುದು. ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ನೆರವಾಗಲಿದೆ ಮತ್ತು ಮತ್ತೊಂದು ಹೆಚ್ಚಿನ ಸ್ಕೋರಿಂಗ್ ಪಂದ್ಯವನ್ನು ಗುರುವಾರ ನಿರೀಕ್ಷಿಸಲಾಗಿದೆ.
ಭಾರತದ ಪ್ಲೇಯಿಂಗ್ ಇಲೆವೆನ್ ಗಾಯಗೊಂಡ ಶ್ರೇಯಸ್ ಅಯ್ಯರ್ ಬದಲಿಗೆ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆಯುವ ಸಾಧ್ಯತೆಯಿದ್ದರೆ, ಕುಲದೀಪ್ ಯಾದವ್ ಬದಲಿಗೆ ಯುಜ್ವೇಂದ್ರ ಚಹಲ್ ಬರಬಹುದು. ಆದರೆ ಭಾರತವು ಕುಲದೀಪ್ ಅವರಿಗೆ ಮತ್ತೊಂದು ಅವಕಾಶವನ್ನು ನೀಡಲು ಆಯ್ಕೆ ಮಾಡಬಹುದು.
ಭಾರತ: ಶಿಖರ್ ಧವನ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಸಿ), ಸೂರ್ಯಕುಮಾರ್ ಯಾದವ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ಪ್ರಸಾದ್ ಕೃಷ್ಣ, ಮತ್ತು ಯುಜ್ವೇಂದ್ರ ಚಾಹಲ್ / ಕುಲದೀಪ್ ಯಾದವ್.
ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಇಯಾನ್ ಮೋರ್ಗಾನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಇಬ್ಬರೂ ಗಾಯಗಳಿಂದ ಬಳಲುತ್ತಿರುವ ಇಂಗ್ಲೆಂಡ್ ತಮ್ಮ ಇಲೆವನ್ ಇಲೆವನ್‌ನಲ್ಲಿ ಒಂದೆರಡು ಬದಲಾವಣೆಗಳನ್ನು ಮಾಡಬೇಕಾಗಬಹುದು. ಬಿಲ್ಲಿಂಗ್ಸ್ ಬದಲಾಗಿ ಲಿಯಾಮ್ ಲಿವಿಂಗ್‌ಸ್ಟೋನ್ ಬರಬಹುದು, ನಾಯಕ ಮೊರ್ಗಾನ್ ಬದಲಿಗೆ ಡೇವಿಡ್ ಮಲನ್ ಅವರನ್ನು ಆಡಿಸುವ ಸಾಧ್ಯತೆಯಿದೆ. ಮೋರ್ಗನ್ ಅನುಪಸ್ಥಿತಿಯಲ್ಲಿ ಜೋಸ್ ಬಟ್ಲರ್ ತಂಡವನ್ನು ಮುನ್ನಡೆಸಲಿದ್ದಾರೆ.
ಇಂಗ್ಲೆಂಡ್: ಜೇಸನ್ ರಾಯ್, ಜಾನಿ ಬೈರ್‌ಸ್ಟೋವ್, ಇಯೊನ್ ಮೋರ್ಗಾನ್ / ಡೇವಿಡ್ ಮಲನ್, ಸ್ಯಾಮ್ ಬಿಲ್ಲಿಂಗ್ಸ್ / ಲಿಯಾಮ್ ಲಿವಿಂಗ್‌ಸ್ಟೋನ್, ಬೆನ್ ಸ್ಟೋಕ್ಸ್, ಮೊಯೀನ್ ಅಲಿ, ಜೋಸ್ ಬಟ್ಲರ್ (ನಾಯಕ/ ವಿಕೆಟ್ ಕೀಪರ್), ಸ್ಯಾಮ್ ಕುರ್ರನ್, ಟಾಮ್ ಕುರ್ರನ್, ಮಾರ್ಕ್ ವುಡ್ ಮತ್ತು ಆದಿಲ್ ರಶೀದ್.
ಪಂದ್ಯದ ಭವಿಷ್ಯ ಆತ್ಮವಿಶ್ವಾಸದ ಟೀಮ್ ಇಂಡಿಯಾ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು ಸೋಲಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: India vs England: 2ನೇ ಏಕದಿನ ಪಂದ್ಯ ಆರಂಭವಾಗುವ ಸಮಯ, ದಿನಾಂಕ, ನೇರ ಪ್ರಸಾರ ಯಾವ ಚಾನೆಲ್ನಲ್ಲಿ? ಇಲ್ಲಿದೆ ಮಾಹಿತಿ