IPL 2021: ಆರ್​ಸಿಬಿ ರಣತಂತ್ರ! ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನಾವು ಹರಾಜಿಗೂ ಮುನ್ನವೇ ತೀರ್ಮಾನಿಸಿದ್ದೇವು

IPL 2021: ನಿಸ್ಸಂಶಯವಾಗಿ, ನಾವು ಐಪಿಎಲ್​ ಹರಾಜಿಗೂ ಮೊದಲು ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮಾತನಾಡಿದ್ದವು.

IPL 2021: ಆರ್​ಸಿಬಿ ರಣತಂತ್ರ! ಐಪಿಎಲ್​ನಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ನಾವು ಹರಾಜಿಗೂ ಮುನ್ನವೇ ತೀರ್ಮಾನಿಸಿದ್ದೇವು
ವಿರಾಟ್​ ಕೊಹ್ಲಿ ಜೊತೆ ದೇವದತ್ ಪಡಿಕ್ಕಲ್
Follow us
|

Updated on:Mar 25, 2021 | 1:03 PM

ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬರುವ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನ್ನಿಂಗ್ಸ್ ಆರಂಭಿಸುವುದಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಐದನೇ ಮತ್ತು ಅಂತಿಮ ಟಿ 20 ಐ ನಂತರ ಖಚಿತಪಡಿಸಿದ್ದರು. ಸಾಮಾನ್ಯವಾಗಿ ಕಡಿಮೆ ಸ್ವರೂಪ ಮತ್ತು ಐವತ್ತು ಓವರ್ ಫಾರ್ಮ್ಯಾಟ್‌ಗಳಲ್ಲಿ ನಂ .3 ರಲ್ಲಿ ಬ್ಯಾಟ್ ಮಾಡುವ ಕೊಹ್ಲಿ, 5 ನೇ ಟಿ 20 ಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್​ ಆರಂಭಿಸಿದ್ದರು. ಇದರಿಂದ ಟೀಂ ಇಂಡಿಯಾ ಕೂಡ ಭರ್ಜರಿ ಜಯ ಗಳಿಸಿತ್ತು. ಪಂದ್ಯದ ನಂತರ ಈ ಬಗ್ಗೆ ಮಾತಾನಾಡಿದ್ದ ಕೊಹ್ಲಿ, ಈ ಬಾರಿಯ ಐಪಿಎಲ್​ನಲ್ಲೂ ನಾನು ಆರಂಭಿಕನಾಗಿ ಬ್ಯಾಟ್​ ಬೀಸಲಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ಕೊಹ್ಲಿ ಹೇಳಿಕೆಗೆ ಸ್ಪಷ್ಟನೇ ನೀಡಿರುವ ಆರ್‌ಸಿಬಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್, ಫೆಬ್ರವರಿಯಲ್ಲಿ ಐಪಿಎಲ್ ಹರಾಜಿಗೆ ಮುಂಚಿತವಾಗಿ ಕೊಹ್ಲಿ ಇನ್ನಿಂಗ್ಸ್ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮಾತನಾಡಿದ್ದವು ನಿಸ್ಸಂಶಯವಾಗಿ, ನಾವು ಐಪಿಎಲ್​ ಹರಾಜಿಗೂ ಮೊದಲು ಕೊಹ್ಲಿ ಆರಂಭಿಕನಾಗಿ ಆಡುವ ಬಗ್ಗೆ ಮಾತನಾಡಿದ್ದವು. ಏಕೆಂದರೆ ಆ ಚಿಂತನೆ ನಮ್ಮ ಬ್ಯಾಟಿಂಗ್​ ಶ್ರೇಣಿಯನ್ನು ಹೇಗೆ ರಚಿಸಬೇಕೆಂಬುದರ ದೃಷ್ಟಿಯಿಂದ ನಮ್ಮ ಹರಾಜು ಯೋಜನೆ ಸೃಷ್ಟಿಯಾಗಿತ್ತು. ಆದ್ದರಿಂದ ಖಂಡಿತವಾಗಿಯೂ ಅಲ್ಲಿ ಆಶ್ಚರ್ಯವಿಲ್ಲ ಎಂದು ಹೆಸ್ಸನ್ ಹೇಳಿದರು. ಟಿ 20 ಯಲ್ಲಿ 52 ಎಸೆತಗಳಲ್ಲಿ 80 ರನ್‌ಗಳಿಸಿದ್ದ ಕೊಹ್ಲಿ ಅಜೇಯರಾಗಿ ಉಳಿದಿದ್ದರು. ಇದರ ಫಲವಾಗಿ ಭಾರತವು 36 ರನ್‌ಗಳ ಗೆಲುವು ದಾಖಲಿಸಿ ಸರಣಿಯನ್ನು 3-2ರಿಂದ ಗೆದ್ದುಕೊಂಡಿತು.

ವಿರಾಟ್, ಪಡಿಕಲ್​ ಜೊತೆ ಇನ್ನಿಂಗ್ಸ್​ ಆರಂಭಿಸುವುದನ್ನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ. ಎಡ ಮತ್ತು ಬಲ ಸಂಯೋಜನೆ ಬ್ಯಾಟಿಂಗ್​ನಲ್ಲಿ ಉತ್ತಮ ರನ್​ ಗಳಿಸಲು ಸಹಾಯ ಮಾಡಬಲ್ಲದು. ವಿರಾಟ್ ಪವರ್‌ಪ್ಲೇನಲ್ಲಿ ಆಡಿದಾಗ ಅವರ ದಾಖಲೆಯನ್ನು ನಾವು ತಿಳಿದಿದ್ದೇವೆ. ಆದ್ದರಿಂದ ಕೊಹ್ಲಿ ಆರಂಭಿಕರಾಗಿ ಬ್ಯಾಟ್​ ಮಾಡಿದರೆ, ನಂತರ ಯಾವ ಆಟಗಾರನನ್ನು ಬ್ಯಾಟಿಂಗ್​ಗೆ ಕಳುಹಿಸಬಹುದು ಎಂಬುದನ್ನು ನಾವು ತೀರ್ಮಾನಿಸಬಹುದಾಗಿದೆ ಎಂದರು.

ಎಬಿ ಡಿವಿಲಿಯರ್ಸ್ ಹೆಚ್ಚು ಒತ್ತಡವಿಲ್ಲದೆ ಬ್ಯಾಟ್​ ಬೀಸಲಿದ್ದಾರೆ ಪಂದ್ಯಾವಳಿಯ ಹಿಂದಿನ ಆವೃತ್ತಿಯಲ್ಲಿ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್‌ಗೆ ಮರಳಿದ್ದರು. ಆದರೆ ಈ ವರ್ಷದ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಜ್ಞ ವಿಕೆಟ್‌ಕೀಪರ್‌ಗಳಾದ ಮೊಹಮ್ಮದ್ ಅಜರುದ್ದೀನ್ ಮತ್ತು ಕೆ.ಎಸ್. ಭರತ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದ ಎಬಿ ಡಿವಿಲಿಯರ್ಸ್ ಹೆಚ್ಚು ಒತ್ತಡವಿಲ್ಲದೆ ಬ್ಯಾಟ್​ ಬೀಸಲಿದ್ದಾರೆ ಎಂದರು. ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್ ಇಷ್ಟಪಟ್ಟಿದ್ದರಿಂದ ನಾವು ಅದನ್ನು ಮುಂದುವರೆಸಲು ಹೇಳಿದ್ದವು. ಇದು ಎಬಿ ಡಿವಿಲಿಯರ್ಸ್ ಅವರ ಸ್ವಂತ ತೀರ್ಮಾನವಾಗಿತ್ತು ಎಂದು ಹೆಸ್ಸನ್ ಹೇಳಿದರು.

ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ.. ಅಂತಿಮ ಟಿ20 ಪಂದ್ಯದ ಗೆಲುವಿನ ಬಳಿಕ ಮಾತಾನಾಡಿದ ನಾಯಕ ಕೊಹ್ಲಿ ಹೌದು, ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ. ನೋಡಿ, ನಾನು ಈ ಹಿಂದೆ ಬೇರೆ ಬೇರೆ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ, ಆದರೆ ನಾವು ಈಗ ಬಹಳ ಮಧ್ಯಮ ಕ್ರಮಾಂಕವನ್ನು ಹೊಂದಿದ್ದೇವೆ ಎಂದು ನನಗೆ ಅನಿಸುತ್ತದೆ. ಹೀಗಾಗಿ ಇಬ್ಬರು ಶ್ರೇಷ್ಠ ಆಟಗಾರರಿಗೆ ಆಡಲು ಅತಿ ಹೆಚ್ಚು ಎಸೆತಗಳು ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ. ಹಾಗಾಗಿ ನಾನು ಖಂಡಿತವಾಗಿಯೂ ಓಪನರ್​ ಆಗಿ ರೋಹಿತ್‌ ಜೊತೆ ಉತ್ತಮ ಜೊತೆಯಾಟ ಆಡಲು ಇಷ್ಟಪಡುತ್ತೇನೆ. ಏಕೆಂದರೆ ಇಬ್ಬರಲ್ಲಿ ಒಬ್ಬರು ಕ್ರೀಸ್‌ನಲ್ಲಿ ಇದ್ದರೂ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಆತ್ಮವಿಶ್ವಾಸ ಸಿಗಲಿದೆ. ಇದರಿಂದ ತಂಡದ ಮೊತ್ತವೂ ಹೆಚ್ಚಲಿದೆ. ಆಟಗಾರರು ಭಯಬಿಟ್ಟು ಮೈದಾನದಲ್ಲಿ ಬ್ಯಾಟ್​ ಬೀಸುತ್ತಾರೆ. ಹೀಗಾಗಿ ಇದನ್ನೇ ಮುಂದುವರಿಯಲು ಇಚ್ಚಿಸುತ್ತೇನೆ ಎಂದು ಕೊಹ್ಲಿ ಹೇಳಿದ್ದರು.

ಇದನ್ನೂ ಓದಿ:IPL 2021: ಧೋನಿ ಇದ್ದಿದ್ದಕ್ಕೆ ನಿನ್ನನ್ನು ಸಿಎಸ್‌ಕೆಗೆ ತೆಗೆದುಕೊಳ್ಳಲಾಯ್ತು ಅನ್ನೋ ಮಾತು ನಾಳೆ ಬರಬಾರದು ಅಲ್ವಾ? ಉತ್ತಪ್ಪಗೆ ಕರೆ ಮಾಡಿದ್ದ ಧೋನಿ ಹೇಳಿದ್ದಿಷ್ಟು!

Published On - 1:00 pm, Thu, 25 March 21

ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್