Vaishno Devi Yatra 2021: ನವರಾತ್ರಿ ವಿಶೇಷವಾಗಿ ಜಮ್ಮು-ಕಾಶ್ಮೀರದ ವೈಷ್ಣೋ ದೇವಿಯ ದರ್ಶನ ಪಡೆದ ಭಕ್ತರು
Navratri 2021: ಶರನ್ನವರಾತ್ರಿ ಎಂದು ಕರೆಯುವ ಈ ದಿನದಂದು ದುರ್ಗಾದೇವಿಯು ಮಹಿಶಾಸುರನನ್ನು ಸಂಹಾರ ಮಾಡಿದ ದಿನವಾಗಿದೆ. ನವರಾತ್ರಿ ವಿಶೇಷ 10ನೇ ದಿನವನ್ನು ವಿಜಯ ದಶಮಿ ದಿನವನ್ನು ಆಚರಿಸಲಾಗುತ್ತದೆ.
ಜಮ್ಮು ಕಾಶ್ಮೀರ: ಆಕರ್ಷಕವಾಗಿ ವಿವಿಧ ಬಣ್ಣಗಳ ದೀಪಗಳಿಂದ ಅಲಂಕರಿಸಲ್ಪಟ್ಟ ಜಮ್ಮು- ಕಾಶ್ಮೀರದ ಕಟ್ರಾದ ಶ್ರಿ ಮಾತಾ ವೈಷ್ಣೋ ದೇವಿ ದೇವಸ್ಥಾನಕ್ಕೆ ಮಂಗಳವಾರ ನವರಾತ್ರಿಯ ಮೊದಲ ದಿನ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಸಾವಿರಾರು ಭಕ್ತರು ನವರಾತ್ರಿ ದಿನದಂದು ಮಾತಾ ವೈಷ್ಣೋ ದೇವಿಯಲ್ಲಿ ಪ್ರಾರ್ಥನೆ ಮಾಡಲು ನೆರೆದಿರುತ್ತಾರೆ. ಆದರೆ ಕೊವಿಡ್ ದಿನೇ ದಿನೇ ಹೆಚ್ಚಾಗುತ್ತಿರುವ ಕಾರಣದಿಂದ ಶ್ರೀ ಮಾತಾ ವೈಷ್ಣೋ ದೇವಿ ಮಂಡಳಿ (ಎಸ್ಎಂವಿಡಿಎಸ್ಬಿ) ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಿದೆ. ವಿವಿಧ ರಾಜ್ಯಗಳಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಕೊವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯ ಮಾಡಿದೆ.
ದೇವಸ್ಥಾನಕ್ಕೆ ಪ್ರವೇಶಿಸುವ ಮೊದಲು ಆರ್ಟಿ-ಪಿಸಿಆರ್ ವರದಿಯನ್ನು ಸಲ್ಲಿಸಿದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿ ಕೊವಿಡ್ ತಡೆ ಹಿಡಿಯಲು ದೇವಸ್ಥಾನದಲ್ಲಿ ಉತ್ತಮ ವ್ಯವಸ್ಥೆ ಕಲ್ಪಿಸಿದೆ ಎಂದು ದೆಹಲಿಯ ಭಕ್ತರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ದೇವಾಲಯಕ್ಕೆ ರೈಲಿನಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ರೈಲಿನಲ್ಲಿ ಬರುವ ಭಕ್ತರಿಗೆ ನಿಲ್ದಾಣದಲ್ಲಿ ಕೊವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ ಎಂದು ಕಟ್ರಾದ ಉಪ ಪೊಲೀಸ್ ವರಿಷ್ಠಾಧಿಕಾರಿ(ಡಿಎಸ್ಪಿ) ಕುಲ್ಜಿತ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ರಮೇಶ್ ಕುಮಾರ್ ದೆವಾಲಯಕ್ಕೆ ಭೇಟಿ ನೀಡಿ ಭಕ್ತರ ಅನುಕೂಲಕ್ಕಾಗಿ ಮಾಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಕಟ್ರಾದ ವಿವಿಧ ಸ್ಥಳಗಳಲ್ಲಿ ಪ್ರಯಾಣ ನೋಂದಣಿ ಕೌಂಟರ್ನಲ್ಲಿ ಹೆಸರು ನೋಂದಾಯಿಸಲು ಮಾಡಿರುವ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿದ್ದಾರೆ.
ಥರ್ಮಲ್ ಸ್ಕ್ಯಾನಿಂಗ್ ಅನ್ನು ತಪ್ಪದೇ ಮಾಡಲಾಗುತ್ತಿದೆ. ಜೊತೆಗೆ ಎಲ್ಲಾ ಕಡೆಯಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಕಟ್ರಾ ರೈಲ್ವೆ ನಿಲ್ದಾಣದಲ್ಲಿ ಭಕ್ತರು ಆಗಮಿಸಿದ ತಕ್ಷಣ ಕೊವಿಡ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ದೇವಸ್ಥಾನದ ಅಧಿಕಾರಿಯೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ನವರಾತ್ರಿಯ ಆಚರಣೆಯಲ್ಲಿ ಒಂಬತ್ತು ದೇವಿಯ ಆರಾಧನೆ ಮಾಡಲಾಗುತ್ತದೆ. ನವರಾತ್ರಿ ಹಬ್ಬವನ್ನು ದೇಶಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಮುಂದಿನ 9 ದಿನಗಳವರೆಗೆ ದುರ್ಗಾದೇವಿಯ ಪೂಜೆಯಲ್ಲಿ ಭಕ್ತರು ತೊಡಗಿರುತ್ತಾರೆ.
ಶರನ್ನವರಾತ್ರಿ ಎಂದು ಕರೆಯುವ ಈ ದಿನದಂದು ದುರ್ಗಾದೇವಿಯು ಮಹಿಶಾಸುರನನ್ನು ಸಂಹಾರ ಮಾಡಿದ ದಿನವಾಗಿದೆ. ನವರಾತ್ರಿ ವಿಶೇಷ 10ನೇ ದಿನವನ್ನು ವಿಜಯ ದಶಮಿ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಹಾರಾಷ್ಟ್ರ to ಜಮ್ಮು-ಕಾಶ್ಮೀರ: ವೈಷ್ಣೋದೇವಿಯ ಸನ್ನಿಧಾನಕ್ಕೆ ವೃದ್ಧೆಯ ‘ಸೈಕಲ್’ಯಾತ್ರೆ!
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ನಂತರ ಕಣಿವೆ ರಾಜ್ಯದಲ್ಲಿ ನೈಜ ಪ್ರಜಾಪ್ರಭುತ್ವ ಜಾರಿಯಾಗಿದೆ: ಪ್ರಧಾನಿ ಮೋದಿ