Sign In

By signing in or creating an account, you agree with Associated Broadcasting Company's Terms & Conditions and Privacy Policy.

ಊಟ ಹಾಕಿದವನಿಗಾಗಿ 600 ಕಿ.ಮೀ ನಡೆದ ಗರ್ಭಿಣಿ ನಾಯಿ! ಇಲ್ಲಿದೆ ಮನಕಲಕುವ ಘಟನೆ

ಜಂಗಾರೆಡ್ಡಿಗೂಡೆಂ​ನ ಮಡ್ಡಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಇವರಿಗೆ ಎರಡು ಶ್ವಾನದ ಭೇಟಿ ಆಗಿತ್ತು. ಅಚ್ಚರಿ ಎಂದರೆ, ಇವರ ಹಿಂದೆಯೇ ಅವು ಹೆಜ್ಜೆ ಹಾಕಲು ಆರಂಭಿಸಿದ್ದವು.

ಊಟ ಹಾಕಿದವನಿಗಾಗಿ 600 ಕಿ.ಮೀ ನಡೆದ ಗರ್ಭಿಣಿ ನಾಯಿ! ಇಲ್ಲಿದೆ ಮನಕಲಕುವ ಘಟನೆ
ವ್ಯಕ್ತಿ ಜತೆ ನಡೆದ ಶ್ವಾನ
Follow us
ರಾಜೇಶ್ ದುಗ್ಗುಮನೆ
|

Updated on:Apr 12, 2021 | 6:48 PM

ನಾಯಿಗಳಿಗೆ ಸ್ವಲ್ಪ ಪ್ರೀತಿ ತೋರಿದರೂ ಸಾಕು, ಅವು ನಮಗೆ ದುಪ್ಪಟ್ಟು ಪ್ರೀತಿ ನೀಡುತ್ತವೆ ಎನ್ನುವುದಕ್ಕೆ ತೆಲಂಗಾಣದಲ್ಲಿ ನಡೆದ ಘಟನೆ ಜೀವಂತ ಸಾಕ್ಷಿ. ಅವರ ಹೆಸರು ಪ್ರತಾಪ್​ ರೆಡ್ಡಿ. ವೃತ್ತಿಯಲ್ಲಿ ಕಾಂಟ್ರ್ಯಾಕ್ಟರ್​. ಪಶ್ಚಿಮ ಗೋದಾವರಿಯ ಜಂಗಾರೆಡ್ಡಿಗೂಡೆಂ​ನವರು. ಕಳೆದ ತಿಂಗಳು ಗೆಳೆಯ ರವಿ ಜತೆ ತಿರುಪತಿಗೆ ಕಾಲ್ನಡಿಗೆಯಲ್ಲಿ ಹೋಗುವ ನಿರ್ಧಾರಕ್ಕೆ ಬಂದಿದ್ದರು. ಜಂಗಾರೆಡ್ಡಿಗೂಡೆಂನಿಂದ ತಿರುಮಲಕ್ಕೆ ಸುಮಾರು 600 ಕಿ.ಮೀ. ಅಂತರ. ಇದನ್ನು ಕಾಲ್ನಡಿಗೆಯಲ್ಲಿ ಸಾಗುವಾಗ ಇವರಿಗೆ ಅಚ್ಚರಿಯ ಗೆಳೆಯನ ಭೇಟಿ ಆಗಿದೆ. ಅಷ್ಟೇ ಅಲ್ಲ, ಈಗ ಜೀವನದ ಒಂದು ಭಾಗವಾಗಿ ಬಿಟ್ಟಿದೆ.

ಪ್ರತಾಪ್​ ರೆಡ್ಡಿ ಅವರು ಮೊದಲ ಬಾರಿ ಒಂಟಿಯಾಗಿ ನಡೆದು ತಿರುಮಲಕ್ಕೆ ಹೋಗಿದ್ದರು. ಎರಡನೇ ಬಾರಿ ರವಿ ಅವರು ಇವರಿಗೆ ಜತೆಯಾಗಿದ್ದರು. ಮೂರನೇ ಬಾರಿ ಇಬ್ಬರೂ ಸೇರಿ ತಿರುಪತಿಗೆ ತೆರಳಲು ನಿರ್ಧರಿಸಿದ್ದರು.  ಜಂಗಾರೆಡ್ಡಿಗೂಡೆಂ​ನ ಮಡ್ಡಿ ಆಂಜನೇಯ ಸ್ವಾಮಿ ದೇವಾಲಯದ ಸಮೀಪ ಪ್ರತಾಪ್​ ರೆಡ್ಡಿ ಹಾಗೂ ರವಿಯನ್ನು ಎರಡು ಶ್ವಾನಗಳು ಹಿಂಬಾಲಿಸಿಕೊಂಡು ಬಂದಿದ್ದವು. ಒಂದು ನಾಯಿ ದಾರಿ ಮಧ್ಯೆ ಕಾಣೆಯಾದರೆ ಮತ್ತೊಂದು ಇವರ ಜತೆ ಬರಲು ಆರಂಭಿಸಿತ್ತು. ಇವರು ಊಟ ಮಾಡುವಾಗ, ಶ್ವಾನಕ್ಕೂ ಊಟ ನೀಡಿದ್ದರು.

ಒಂದೆರಡು ಕಿಲೋಮೀಟರ್​ ಬಂದು ಶ್ವಾನ ಹಿಂದಿರುಗಬಹುದು ಎಂಬುದು ಇವರ ಆಲೋಚನೆ ಆಗಿತ್ತು. ಆದರೆ, ಹಾಗಾಗಲೇ ಇಲ್ಲ. 600 ಕಿ.ಮೀ ನಡೆದು ತಿರುಮಲ ತಲುಪುವವರೆಗೂ ಶ್ವಾನ ಇವರ ಜತೆಯೇ ಇತ್ತು.

15 ದಿನಗಳ ನಡಿಗೆಯಲ್ಲಿ ಪ್ರತಿ ರಾತ್ರಿ ಈ ಶ್ವಾನ ಇವರ ಕಾಲ ಕೆಳಗೆ ಮಲಗುತ್ತಿತ್ತು. ಇವರ ಜತೆಯೇ ಊಟ ಮಾಡುತ್ತಿತ್ತು. ಬಿಸಿಲಿನಿಂದ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಶ್ವಾನಕ್ಕೆ ಇವರು ತಂಪಾದ ಹಾಲು ಹಾಗೂ ಮೊಸರನ್ನು ನೀಡಿದ್ದರು.

ತಿರುಪತಿ ಬೆಟ್ಟದ ಕೆಳಭಾಗದಲ್ಲಿ ತಲುಪಿದಾಗ ಶ್ವಾನವನ್ನು ಮೇಲೆ ತೆಗೆದುಕೊಂಡು ಹೋಗಲು ಭದ್ರತಾ ಸಿಬ್ಬಂದಿ ಬಿಟ್ಟಿಲ್ಲ. ಹೀಗಾಗಿ, ಸಂಬಂಧಿಗಳ ಮನೆಯಲ್ಲಿ ಶ್ವಾನವನ್ನು ಬಿಟ್ಟು ಇವರು ಬೆಟ್ಟ ಹತ್ತಿ ಬಂದಿದ್ದರು.

ಇಲ್ಲೊಂದು ಅಚ್ಚರಿಯ ವಿಚಾರ ಇದೆ. ಸಂಬಂಧಿಗಳ ಮನೆಯಲ್ಲಿ ನಾಯಿಯನ್ನು ಬಿಟ್ಟಾಗ ಅದು ಏನನ್ನೂ ತಿನ್ನುತ್ತಿರಲಿಲ್ಲವಂತೆ! ವಿಡಿಯೋ ಕಾಲ್​ ಮೂಲಕ ಪ್ರತಾಪ್​ ರೆಡ್ಡಿಯನ್ನು ನೋಡಿದ ಮೇಲೆಯೇ ಶ್ವಾನ ಊಟ ಮಾಡಿದೆ. ಕಾರಿನ ಮೂಲಕ ಇವರು ಜಂಗಾರೆಡ್ಡಿಗೂಡೆಂಗೆ ಹಿಂದಿರುಗಿದ್ದು, ನಾಯಿಯನ್ನೂ ಕರೆತರಲಾಗಿದೆ. ಇತ್ತೀಚೆಗೆ ಪ್ರತಾಪ್​ ರೆಡ್ಡಿ ಸಾಕಿದ್ದ ಶ್ವಾನ ಮೃತಪಟ್ಟಿತ್ತು. ಇದರಿಂದ ಅವರು ತುಂಬಾನೇ ಬೇಸರಗೊಂಡಿದ್ದರು. ಈಗ ಅವರು ಮತ್ತೊಂದು ಶ್ವಾನವನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಈ ಶ್ವಾನ ಗರ್ಭಿಣಿ ಆಗಿತ್ತು ಎನ್ನುವ ವಿಚಾರ ಇವರಿಗೆ ಮನೆಗೆ ಬಂದ ನಂತರ ತಿಳಿದಿದೆ.

ಇದನ್ನೂ ಓದಿ: ಬೇಸಿಗೆಯಿಂದ ಪೊಲೀಸ್ ಶ್ವಾನಗಳಿಗೆ ಕೂಲರ್.!

Published On - 6:34 pm, Mon, 12 April 21

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ತುಂಬ ಸಮಯದ ಬಳಿಕ ಎಸಿ ಆನ್ ಮಾಡುತ್ತೀರಾ? ಒಳಗೆ ಹಾವಿರಬಹುದು ಎಚ್ಚರ!
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್