ಕತ್ತೆಗಳಿಗೆ ಮದುವೆ ಮಾಡಿಸಿದ ವಾಟಾಳ್ ನಾಗರಾಜ್: ಪ್ರೇಮ ವಿವಾಹಕ್ಕೆ ಸರ್ಕಾರ 3 ಲಕ್ಷ ರೂ. ನೀಡಬೇಕು
ವಾಟಾಳ್ ನಾಗರಾಜ್ ಅವರು ಪ್ರೇಮಿಗಳ ದಿನದಂದು ಕತ್ತೆಗಳ ಮದುವೆ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ಬೆಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಈ ಸಮಾರಂಭ ನಡೆಯಿತು, ಗಂಡು ಕತ್ತೆ ಓಡಿಹೋದ ಹಾಸ್ಯಮಯ ಘಟನೆಯೂ ನಡೆಯಿತು. ಪ್ರಾಣಿಗಳಲ್ಲೂ ಪ್ರೀತಿಯಿದೆ ಎಂದು ಸಾರಿದ ವಾಟಾಳ್, ಪ್ರೇಮ ವಿವಾಹಗಳಿಗೆ 3 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರು, ಫೆ.14: ಇಂದು ಪ್ರೇಮಿಗಳ ದಿನವನ್ನು (Valentine’s Day) ಆಚರಣೆ ಮಾಡಲಾಗುತ್ತಿದೆ. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಕತ್ತೆಗಳಿಗೆ ಮದುವೆ ಮಾಡಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಕತ್ತೆಗಳ ಮೆರವಣಿಗೆ ನಡೆಸಿದೆ. ಎರಡು ಕತ್ತೆಗಳಿಗೆ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಹೂವಿನ ಹಾರ ಹಾಕಿ ತಾಳಿ ಕಟ್ಟಿದ್ದಾರೆ. ಮದುವೆಯ ಶಾಸ್ತ್ರಗಳು ನಡೆಯುತ್ತಿದ್ದಾಗಲೇ ‘ಗಂಡು ಕತ್ತೆ’ ಹಠಾತ್ತನೆ ಅಲ್ಲಿಂದ ಓಡಿಹೋಗಿದೆ. ಇದನ್ನು ಕಂಡು ನೆರೆದಿದ್ದ ಸಾರ್ವಜನಿಕರು ನಗೆಗಡಲಲ್ಲಿ ತೇಲಿದ್ದಾರೆ. ನಂತರ ಕತ್ತೆಯನ್ನು ಹಿಡಿದು ತಂದು ಮದುವೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು. “ಪ್ರೇಮ ಎನ್ನುವುದು ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ, ಅದು ಪ್ರಾಣಿ-ಪಕ್ಷಿಗಳಿಗೂ ಇದೆ. ಕತ್ತೆ ಬಹಳ ಪವಿತ್ರವಾದ ಪ್ರಾಣಿ, ಪುರಾಣಗಳಲ್ಲೂ ಕತ್ತೆಯ ಉಲ್ಲೇಖಗಳಿವೆ ಎಂದು ಹೇಳಿದ್ದಾರೆ. ಪ್ರೇಮ ವಿವಾಹವಾಗುವವರಿಗೆ ಸರ್ಕಾರ 3 ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಬೇಕು ಮತ್ತು ಅವರಿಗೆ ಸೂಕ್ತ ಭದ್ರತೆ ಒದಗಿಸಬೇಕು,” ಎಂದು ಒತ್ತಾಯಿಸಿದರು.
ವರದಿ: ಅರುಣ್ ಕುಮಾರ್ , ಮೆಟ್ರೋ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ

