AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆಯ ಕಾಡಿಗಟ್ಟುವಲ್ಲಿ ಕೊನೆಗೂ ಅರಣ್ಯ ಸಿಬ್ಬಂದಿ ಯಶಸ್ವಿ

ಆರ್​ಆರ್ ನಗರದಲ್ಲಿ ವ್ಯಕ್ತಿಯ ಕೊಂದಿದ್ದ ಕಾಡಾನೆಯ ಕಾಡಿಗಟ್ಟುವಲ್ಲಿ ಕೊನೆಗೂ ಅರಣ್ಯ ಸಿಬ್ಬಂದಿ ಯಶಸ್ವಿ

ಅರುಣ್ ಕುಮಾರ್​ ಆರ್​.
| Edited By: |

Updated on: Sep 29, 2026 | 10:40 AM

Share

ಆರ್​ಆರ್​​ ನಗರದಲ್ಲಿ ವೃದ್ಧನ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಬನ್ನೇರುಘಟ್ಟ ಅರಣ್ಯಕ್ಕೆ ವಾಪಸ್ ಕಳುಹಿಸಿದ್ದಾರೆ. ಬಿ.ಎಂ. ಕಾವಲು ಮೀಸಲು ಅರಣ್ಯದಲ್ಲಿ ಅಡಗಿದ್ದ ಆನೆಯನ್ನು ಡಿಸಿಎಫ್ ಚಕ್ರಪಾಣಿ ನೇತೃತ್ವದಲ್ಲಿ, ರಾತ್ರಿ ಇಡೀ ಥರ್ಮಲ್ ಡ್ರೋನ್ ಮತ್ತು ನೂರಕ್ಕೂ ಅಧಿಕ ಸಿಬ್ಬಂದಿಯ ಸಹಾಯದಿಂದ ಎಲಿಫೆಂಟ್ ಕಾರಿಡಾರ್ ಮೂಲಕ ಸುರಕ್ಷಿತವಾಗಿ ಓಡಿಸಲಾಯಿತು.

ಬೆಂಗಳೂರು, ಸೆಪ್ಟೆಂಬರ್ 29: ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗದ ಅಂಚೆಪಾಳ್ಯದಲ್ಲಿ ನಾಗರಾಜ್ (60) ಎಂಬವರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಅಂತಿಮವಾಗಿ ಯಶಸ್ವಿಯಾಗಿ ಕಾಡಿಗೆ ಹಿಂದಿರುಗಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆ ಆನೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿ.ಎಂ. ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಈ ಕಾಡಾನೆಯನ್ನು, ರಾತ್ರಿ ಇಡೀ ನಡೆದ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಎಲಿಫೆಂಟ್ ಕಾರಿಡಾರ್ ಮೂಲಕ ಕಾಡಿಗೆ ರವಾನಿಸಲಾಯಿತು. ಈ ಮಹತ್ವದ ಕಾರ್ಯಾಚರಣೆಯು ಡಿಸಿಎಫ್ ಚಕ್ರಪಾಣಿ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಗಾಗಿ ಎರಡು ಥರ್ಮಲ್ ಡ್ರೋನ್​ಗಳನ್ನು ಬಳಸಿಕೊಳ್ಳಲಾಗಿತ್ತು ಮತ್ತು ನೂರಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಥರ್ಮಲ್ ಡ್ರೋನ್​ಗಳ ನೆರವಿನಿಂದ ಆನೆಯ ಚಲನವಲನಗಳನ್ನು ನಿರಂತರವಾಗಿ ಗಮನಿಸಲಾಗುತ್ತಿತ್ತು. ಸುದೀರ್ಘ ಪ್ರಯತ್ನದ ನಂತರ, ಕಾಡಾನೆಯನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅದರ ನೈಸರ್ಗಿಕ ಆವಾಸಸ್ಥಾನಕ್ಕೆ ಹಿಂದಿರುಗಿಸಲು ಸಾಧ್ಯವಾಯಿತು.

ಸೋಮವಾರ ಬೆಳಗ್ಗೆ ವಾಕಿಂಗ್ ತೆರಳಿದ್ದ ಸಂದರ್ಭದಲ್ಲಿ ನಾಗರಾಜ್ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಸರ್ಕಾರ ಅವರ ಕುಟುಂಬದವರಿಗೆ 20 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅರುಣ್ ಕುಮಾರ್​ ಆರ್​.
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More