ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್ಗೆ ತೆರಳಿದ್ದ ವೃದ್ಧ ಬಲಿ! ಅರಣ್ಯ ಇಲಾಖೆಯ ವಿರುದ್ಧ ಕುಟುಂಬಸ್ಥರ ಆಕ್ರೋಶ
ಬೆಂಗಳೂರಿನ ಮೈಸೂರು ರಸ್ತೆಯ ಅಂಚೆಪಾಳ್ಯದಲ್ಲಿ ಮುಂಜಾನೆ ವಾಕಿಂಗ್ ತೆರಳಿದ್ದ ನಾಗರಾಜ್ (60) ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಬನ್ನೇರುಘಟ್ಟದಿಂದ ಬಂದ ಶಂಕಿತ ಆನೆಯಿಂದ ಈ ದುರಂತ ಸಂಭವಿಸಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯ ಖಂಡಿಸಿ ಹಾಗೂ ಮೃತರ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರು ಆರ್‌ಆರ್ ಆಸ್ಪತ್ರೆ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
- Arun Kumar R
- Updated on: Sep 28, 2026
- 10:58 am
ಬೀದಿದೀಪ ನಿರ್ವಹಣೆಯಲ್ಲಿ ಲೋಪ: ಗುತ್ತಿಗೆದಾರರಿಗೆ 13 ಲಕ್ಷ ರೂ ದಂಡ
ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಬೀದಿ ದೀಪ ನಿರ್ವಹಣೆಯಲ್ಲಿ ಲೋಪ ಎಸಗಿದ ಮೂರು ಗುತ್ತಿಗೆದಾರ ಕಂಪನಿಗಳಿಗೆ ಒಟ್ಟು 13 ಲಕ್ಷ ರೂ ದಂಡ ವಿಧಿಸಿದೆ. ಸೆಪ್ಟೆಂಬರ್ 1ರಿಂದ 23ರ ವರೆಗೆ ‘ಸಹಾಯ’ ಆ್ಯಪ್‌ನಲ್ಲಿ ಬಂದ ದೂರುಗಳ ಪರಿಶೀಲನೆ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ಸಮರ್ಪಕವಾಗಿ ಪರಿಶೀಲನೆ ಹಾಗೂ ದುರಸ್ತಿ ಮಾಡದ ಕಾರಣ ಹಲವು ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಪತ್ತೆಯಾಗಿದೆ.
- Arun Kumar R
- Updated on: Sep 26, 2026
- 9:12 pm
ಹಾಲಿನ ದರ ಏರಿಕೆಯಾದ್ರೆ ಟೀ, ಕಾಫಿ ದರವೂ ಹೆಚ್ಚಳವಾಗುವ ಸಾಧ್ಯತೆ!
ನಂದಿನಿ ಹಾಲು ಬೆಲೆ ಏರಿಕೆ ಪ್ರಸ್ತಾವನೆಯು ಕರ್ನಾಟಕದಲ್ಲಿ ಕಾಫಿ, ಚಹಾ ಪ್ರಿಯರಿಗೆ ಆತಂಕ ತಂದಿದೆ. ಕೆಎಂಎಫ್ 8-10 ರೂ. ಏರಿಕೆಗೆ ಬೇಡಿಕೆ ಇಟ್ಟಿದ್ದು, ಇದು ಟೀ, ಕಾಫಿ ಬೆಲೆಯನ್ನು ಹೆಚ್ಚಿಸುವುದು ಖಚಿತ. ಈಗಾಗಲೇ ದುಬಾರಿಯಾದ ಕಾಫಿ, ಚಹಾ ಮತ್ತೆ 20-22 ರೂ. ತಲುಪುವ ಸಾಧ್ಯತೆ ಇದೆ. ಇದು ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.
- Arun Kumar R
- Updated on: Sep 26, 2026
- 12:25 pm
ಕರ್ನಾಟಕದಲ್ಲಿ ಅಕ್ಕಿ ದರ ದಿಢೀರ್ ಏರಿಕೆ: ತಿಂಗಳಲ್ಲಿ 2ನೇ ಬಾರಿ ಹಚ್ಚಳ, ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ
ಕರ್ನಾಟಕ ಅಕ್ಕಿ ಬೆಲೆ ಏರಿಕೆ: ರಾಜ್ಯದಲ್ಲಿ ಒಂದು ವಾರದ ಅವಧಿಯಲ್ಲಿ ಅಕ್ಕಿ ದರ ಎರಡನೇ ಬಾರಿ ಏರಿಕೆಯಾಗಿದೆ. ಮಳೆ ಕೊರತೆ, ನೀರಿನ ಸಮಸ್ಯೆ ಇತ್ಯಾದಿಗಳಿಂದ ಇಳುವರಿ ಕುಸಿತವಾಗಿದ್ದು ಸಹ ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.
- Arun Kumar R
- Updated on: Sep 22, 2026
- 12:07 pm
ಬೀಸಿಲಿನ ಬೇಗೆಯ ನಡುವೆ ರಾಜ್ಯದ ಹಲವೆಡೆ ತಂಪೆರೆದ ವರುಣ: ಬೆಂಗಳೂರು, ಯಾದಗಿರಿಯಲ್ಲಿ ಭರ್ಜರಿ ಮಳೆ
ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ರಾಜಧಾನಿ ಬೆಂಗಳೂರು, ಯಾದಗಿರಿ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ದಿಢೀರ್ ಭರ್ಜರಿ ಮಳೆಯಾಗಿದ್ದು, ಹನೂರಿನಲ್ಲಿ ಮಳೆಯಿಂದಾಗಿ ಬೆಳೆ ನಷ್ಟ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನ ಸಂಭವಿಸಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯ ಮಳೆ ಇಲ್ಲದೆ ಚಿಂತೆಗೀಡಾಗಿದ್ದ ಅನ್ನದಾತರ ಮೇಲೆ ವರುಣ ಕೊಂಚ ದಯೆ ತೋರಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
- Arun Kumar R
- Updated on: Sep 21, 2026
- 5:34 pm
ಕಸ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಪಿವಿಆರ್ ಹಾಗೂ ಫೋರಂ ಮಾಲ್‌ಗೆ 1.25 ಲಕ್ಷಕ್ಕೂ ಅಧಿಕ ದಂಡ
ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ್ದಕ್ಕೆ ನಗರದ ಖಾಸಗಿ ಸಂಸ್ಥೆಗಳಿಗೆ ಬೆಂಗಳೂರು ದಕ್ಷಿಣ ಪಾಲಿಕೆ ಅಧಿಕಾರಿಗಳು ಭಾರೀ ದಂಡ ವಿಧಿಸಿದ್ದಾರೆ. ಆಯುಕ್ತ ಕೆ.ಎನ್. ರಮೇಶ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿವಿಆರ್ ಸಿನಿಮಾಸ್ ಮತ್ತು ಪೋರಂ ಮಾಲ್‌ಗೆ ಸಾವಿರಾರು ರೂ ದಂಡ ವಿಧಿಸಲಾಗಿದೆ.
- Arun Kumar R
- Updated on: Sep 16, 2026
- 8:11 pm
ಕೇವಲ ಬಿಲ್ ಮಾಡೋದಕ್ಕಷ್ಟೇ ಕೆಲಸ ಮಾಡ್ತಿದ್ದೀರಾ?: ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್
ಅಭಿವೃದ್ಧಿ ಕಾಮಗಾರಿಗಳ ನಿಧಾನಗತಿಯಿಂದ ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮರ್ಥ್ಯ, ಸಂಪನ್ಮೂಲಗಳಿದ್ದರೂ ಇಚ್ಛಾಶಕ್ತಿ ಕೊರತೆ ಕುರಿತು ಪ್ರಶ್ನಿಸಿದ ಅವರು, ಬಿಲ್ ಮಾಡುವುದಕ್ಕೆ ಮಾತ್ರ ಸೀಮಿತರಾಗಿದ್ದೀರಾ ಎಂದು ಗರಂ ಆಗಿದ್ದಾರೆ. ಈ ವ್ಯವಸ್ಥೆಯಲ್ಲಿನ ಲೋಪಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
- Arun Kumar R
- Updated on: Sep 16, 2026
- 1:13 pm
ಗಣಪತಿ ಮೆರವಣಿಗೆಗೆ ಕಂಡೀಷನ್ ಹಾಕುವ ಸರ್ಕಾರ, ಈದ್ ಮಿಲಾದ್ಗೆ ಯಾಕೆ ಹಾಕಲ್ಲ?: ಆರ್. ಅಶೋಕ್
ಯಡಿಯೂರು ಕೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಮಾತನಾಡಿದ ಆರ್. ಅಶೋಕ್, ಗಣಪತಿ ಪ್ರತಿಷ್ಠಾಪನೆಗೆ ಕಠಿಣ ನಿಯಮಾವಳಿಗಳನ್ನು ವಿಧಿಸಿ, 70-80% ಗಣಪತಿ ವಿಸರ್ಜನೆ ಕಡಿಮೆಯಾಗಲು ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಈದ್ ಮಿಲಾದ್ ಮತ್ತು ಉರುಸ್‌ಗಳಿಗೆ ಯಾವುದೇ ಮೈಕ್, ಡಿಜೆ ನಿರ್ಬಂಧಗಳಿಲ್ಲದಿರುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದರು.
- Arun Kumar R
- Updated on: Sep 14, 2026
- 7:34 pm
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ: ಕಲುಷಿತ ನೀರು ಹೊರಬಿಟ್ಟ ಆರೋಪದ ಬೆನ್ನಲ್ಲೇ ಪ್ರಯೋಗಾಲಯ ತನಿಖೆ
ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರಿನ ಥಣಿಸಂದ್ರದಲ್ಲಿರುವ ಅನಲಿಟಿಕಲ್ ರಿಸರ್ಚ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಲಿನ ನೀರನ್ನು ಹೊರಗೆ ಬಿಟ್ಟಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ತನಿಖೆ ಕೈಗೊಳ್ಳಲಾಗಿದೆ. ಪ್ರಯೋಗಾಲಯವು ಎಸ್ಟಿಪಿ, ಕೆರೆ ನೀರು, ಅಂತರ್ಜಲ ಹಾಗೂ ಇತರೆ ಕೈಗಾರಿಕೆಗಳ ನೀರನ್ನು ಪರೀಕ್ಷಿಸಿ ವರದಿ ನೀಡುತ್ತದೆ. ಸ್ಯಾನಿಟರಿ ನೀರನ್ನು ಹೊರಹಾಕುವ ಬಗ್ಗೆಯೂ ಮಾತುಕತೆ ನಡೆಯಿತು.
- Arun Kumar R
- Updated on: Sep 12, 2026
- 7:09 pm
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ಉಷ್ಣಾಂಶ
ಮಳೆಗಾಲದ ನಡುವೆಯೂ ಬೆಂಗಳೂರಿನಲ್ಲಿ ಅಸಾಮಾನ್ಯ ಬಿಸಿಲಿನ ತಾಪ ಹೆಚ್ಚಾಗಿದ್ದು, ಕಳೆದ ಒಂದು ವಾರದಿಂದ 31.22°C ಗರಿಷ್ಠ ತಾಪಮಾನ ದಾಖಲಾಗಿದೆ. ಇದು ಸೆಪ್ಟೆಂಬರ್‌ನಲ್ಲಿ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಅತಿ ಹೆಚ್ಚು ತಾಪಮಾನವಾಗಿದೆ. ಎಲ್ ನಿನೋ ಪರಿಣಾಮ, ಮಳೆ ಮತ್ತು ಮೋಡಗಳ ಕೊರತೆಯಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರುವ ಸಾಧ್ಯತೆಯಿದೆ.
- Arun Kumar R
- Updated on: Sep 10, 2026
- 11:56 am
ಪ್ರೊ. ಸಿಎನ್ಆರ್ ರಾವ್‌ಗೆ ಯಾವುದೇ ನೋಟಿಸ್ ಜಾರಿ ಮಾಡಿಲ್ಲ: ಚುನಾವಣಾಧಿಕಾರಿ ಸ್ಪಷ್ಟನೆ
ಭಾರತ ರತ್ನ ಪ್ರೊ. ಸಿಎನ್ಆರ್ ರಾವ್ ಅವರಿಗೆ ಮತದಾರರ ಪಟ್ಟಿ ನೋಟಿಸ್ ಜಾರಿ ಮಾಡಿಲ್ಲ ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾದದ್ದು ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
- Arun Kumar R
- Updated on: Sep 9, 2026
- 3:43 pm
ಬೆಂಗಳೂರಿನ ವಾಹನ ಸವಾರರಿಗೆ ಜಿಬಿಯಿಂದ ಬಿಗ್ ರಿಲೀಫ್; 107 ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಮಾಸ್ಟರ್ ಪ್ಲಾನ್!
ಬೆಂಗಳೂರಿನ ಸರಣಿ ಟ್ರಾಫಿಕ್ ಜ್ಯಾಮ್‌ಗೆ ಪರಿಹಾರ ಕಂಡುಕೊಳ್ಳಲು ಜಿಬಿಎ ಮತ್ತು ಬಿಎಂಟಿಸಿ ಮಹತ್ವದ ಮಾಸ್ಟರ್ ಪ್ಲಾನ್ ರೂಪಿಸಿವೆ. ಸಿಗ್ನಲ್ ಹಾಗೂ ಜಂಕ್ಷನ್ ಬಳಿ ಇರುವ 107 ಬಸ್ ನಿಲ್ದಾಣಗಳನ್ನು ಕನಿಷ್ಠ 50 ಮೀಟರ್ ದೂರಕ್ಕೆ ಸರಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕೆ ಹೈಟೆಕ್ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದ್ದು, ವಾಹನ ಸಂಚಾರ ಸುಗಮವಾಗಲಿದೆ.
- Arun Kumar R
- Updated on: Sep 9, 2026
- 7:51 am