ಶ್ರೀಲೀಲಾ ಹೊಸ ದಾಖಲೆ; ದಳಪತಿ ವಿಜಯ್, ಸಲ್ಮಾನ್ ಖಾನ್ ಅವರನ್ನೇ ಹಿಂದಿಕ್ಕಿದ ಕನ್ನಡತಿ
ನಟಿ ಶ್ರೀಲೀಲಾ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದಕ್ಕೆ ಬರೋಬ್ಬರಿ 1.11 ಕೋಟಿ ಲೈಕ್ಸ್ ದೊರೆತಿದ್ದು, ಹೊಸ ದಾಖಲೆ ನಿರ್ಮಿಸಿದ್ದಾರೆ. ದಳಪತಿ ವಿಜಯ್ ಹಾಗೂ ಸಲ್ಮಾನ್ ಖಾನ್ ಅವರ ಪೋಸ್ಟ್‌ಗಳನ್ನು ಹಿಂದಿಕ್ಕಿರುವ ಶ್ರೀಲೀಲಾ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಿಜಿಟಲ್ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ಮುನ್ನುಗ್ಗುತ್ತಿದ್ದಾರೆ .

ಮುಖ್ಯಾಂಶಗಳು
- ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀಲೀಲಾ ಹವಾ
- 1.11 ಕೋಟಿ ಲೈಕ್ಸ್‌ನೊಂದಿಗೆ ಹೊಸ ಹಿಸ್ಟರಿ
- ಸೋಶಿಯಲ್ ಮೀಡಿಯಾ ಕ್ವೀನ್ ಆದ ಶ್ರೀಲೀಲಾ
ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ ಪ್ರಸ್ತುತ ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ದಾಖಲೆ ಮಾಡಿದ್ದಾರೆ. ಇತ್ತೀಚೆಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೋ ಒಂದಕ್ಕೆ ಬರೋಬ್ಬರಿ 1.11 ಕೋಟಿಗೂ (11.1 ಮಿಲಿಯನ್) ಹೆಚ್ಚು ಲೈಕ್ಸ್ ಹಾಗೂ 25.8 ಕೋಟಿಗೂ ಹೆಚ್ಚು ವೀವ್ಸ್ ಬಂದಿವೆ. ಈ ಮೂಲಕ ಡಿಜಿಟಲ್ ಜಗತ್ತಿನಲ್ಲಿ ಅವರು ಭಾರಿ ಸೆನ್ಸೇಸನ್ ಸೃಷ್ಟಿಸಿದ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಲೈಕ್ಸ್ ಗಳಿಸಿದ ನಟ-ನಟಿಯರ ಪಟ್ಟಿಯಲ್ಲಿ ಶ್ರೀಲೀಲಾ ಅವರ ಈ ಪೋಸ್ಟ್ ಹೊಸ ಇತಿಹಾಸ ಬರೆದಿದೆ. ತಮಿಳಿನ ಸೂಪರ್ ಸ್ಟಾರ್ ದಳಪತಿ ವಿಜಯ್ ಪಡೆದಿದ್ದ 97 ಲಕ್ಷ ಲೈಕ್ಸ್ ದಾಖಲೆಯನ್ನು ಇವರು ಮುರಿದಿದ್ದಾರೆ. ತೆಲುಗು ನಟ ರಾಮ್ ಪೋತಿನೇನಿ ಹಾಗೂ ಬಾಲಿವುಡ್‌ನ ಸಲ್ಮಾನ್ ಖಾನ್ ಅವರ ಪೋಸ್ಟ್‌ಗಳ ಲೈಕ್ಸ್ ಸಂಖ್ಯೆಯನ್ನು ಶ್ರೀಲೀಲಾ ಸುಲಭವಾಗಿ ಹಿಂದಿಕ್ಕಿದ್ದಾರೆ.
ಈ ಸಾಧನೆಯು ಶ್ರೀಲೀಲಾ ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗಿದೆ. ಅವರ ಆನ್‌ಲೈನ್ ಜನಪ್ರಿಯತೆಯು ಚಲನಚಿತ್ರಗಳ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ಪ್ರಸ್ತುತ ಟಾಲಿವುಡ್ ಹಾಗೂ ಬಾಲಿವುಡ್‌ನಲ್ಲಿ ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿರುವ ಅವರಿಗೆ ಈ ಡಿಜಿಟಲ್ ಬೆಂಬಲ ವರದಾನವಾಗಲಿದೆ.
View this post on Instagram
ಶ್ರೀಲೀಲಾ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿವಿಧ ರೀತಿಯ ಪೋಸ್ಟ್ಗಳಿವೆ. ಅವರು ಬಾಲ್ಯದ ಭರತನಾಟ್ಯ ವೀಡಿಯೋಗಳು ಮತ್ತು ಗ್ಲಾಮರಸ್ ಫೋಟೋಶೂಟ್‌ಗಳನ್ನು ಹಂಚಿಕೊಳ್ಳುವ ಮೂಲಕ 1.65 ಕೋಟಿ ಹಿಂಬಾಕರನ್ನು ಸಂಪಾದಿಸಿದ್ದಾರೆ. ಅವರ ನೃತ್ಯ ಕೌಶಲ್ಯವೇ ಇನ್‌ಸ್ಟಾಗ್ರಾಮ್‌ನಲ್ಲಿ ದೊಡ್ಡ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.
ಇದನ್ನೂ ಓದಿ: ಧನುಶ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ ಶ್ರೀಲೀಲಾ, ಸಿನಿಮಾ ಯಾವುದು?
ಸಿನಿಮಾ ರಂಗದಲ್ಲೂ ತಮ್ಮ ಅದ್ಭುತ ಡ್ಯಾನ್ಸ್ ಹಾಗೂ ಅಭಿನಯದ ಮೂಲಕ ಶ್ರೀಲೀಲಾ ಯುವಕರ ನೆಚ್ಚಿನ ನಟಿಯಾಗಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಸಿರುವ ಈ ದಾಖಲೆಯು ಅವರ ಸ್ಟಾರ್‌ಡಮ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಮುಂದಿನ ದಿನಗಳಲ್ಲಿ ಅವರ ಸಿನಿಮಾಗಳಿಗೆ ಈ ಡಿಜಿಟಲ್ ಕ್ರೇಜ್ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




