Ramadan Time Table 2021: ಪವಿತ್ರ ಕುರಾನ್ ಸ್ವರ್ಗದಿಂದ ಭೂಮಿಗೆ ಬಂದಿದ್ದು ಇದೇ ರಂಜಾನ್ ತಿಂಗಳಲ್ಲಿ.. ರಂಜಾನ್ ಉಪವಾಸದ ವಿವರ ಇಲ್ಲಿದೆ
ಈ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯಕ್ಕೂ ಮುನ್ನ ತಿಂಡಿಯನ್ನು ಸೇವಿಸುತ್ತಾರೆ. ಅದನ್ನು ಸಹಾರ್ ಎಂದು ಕರೆಯಲಾಗುತ್ತೆ. ಹಾಗೂ ಸಂಜೆ ಇಫ್ತಾರ್ ಮೂಲಕ ಉಪವಾಸವನ್ನು ಮುಕ್ತಾಯಗೊಳಿಸುತ್ತಾರೆ.
ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳಿಗೆ ಬರುವ ರಂಜಾನ್ ಹಬ್ಬದಲ್ಲಿ ಉಪವಾಸ ಇರುವುದೇ ಅತಿ ಮುಖ್ಯವಾದ ವಿಷಯ. ಉಪವಾಸಕ್ಕೆ ಅದರದೇ ಆದ ಮಹತ್ವವಿದೆ. ಪವಿತ್ರ ರಂಜಾನ್ ತಿಂಗಳಿನಲ್ಲಿ ವಿಶ್ವದಾದ್ಯಂತ ಮುಸ್ಲಿಮರು ರೋಜಾ ಅಂದರೆ ಉಪವಾಸ ಇರುತ್ತಾರೆ. ಸೂರ್ಯೋದಯಕ್ಕೂ ಮುನ್ನ ಒಮ್ಮೆ ತಿಂಡಿ ತಿಂದರೆ ಮತ್ತೆ ಸೂರ್ಯಾಸ್ತದ ಬಳಿಕವೇ ಉಪವಾಸವನ್ನು ಮುಕ್ತಾಯ ಮಾಡಲಾಗುತ್ತೆ. ಉಪವಾಸದ ವೇಳೆ ಪವಿತ್ರ ಕುರಾನ್ ಓದುವುದು ಮತ್ತು ಅಲ್ಲಾಹುವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಸ್ಲಾಮಿನ ಐದು ರೀತಿ ರಿವಾಜುಗಳ ಪೈಕಿ ಉಪವಾಸವೂ ಕೂಡ ಒಂದಾಗಿದೆ. ಆದ್ದರಿಂದಲೇ ರಂಜಾನ್ ಮಹತ್ವ ಪಡೆದುಕೊಂಡಿದ್ದು ಉಪವಾಸವಿರುವುದನ್ನು ಶ್ರೇಷ್ಠ ಎನ್ನಲಾಗಿದೆ.
ಇನ್ನು ಇದಲ್ಲದೆ ಇಸ್ಲಾಮಿಕ್ ಕ್ಯಾಲೆಂಡರ್ನ 9ನೇ ತಿಂಗಳಾದ ರಂಜಾನ್ ತಿಂಗಳಲ್ಲೇ ಪವಿತ್ರ ಕುರಾನ್ ಸ್ವರ್ಗದಿಂದ ಭೂಮಿಗೆ ಬಂದಿದ್ದು ಅದನ್ನು ಪ್ರವಾದಿ ಮೊಹಮ್ಮದ್ ಬಹಿರಂಗಪಡಿಸಿ ಮುಸ್ಲಿಮರಿಗೆ ಪರಿಚಯಿಸಿದ್ರು ಎಂದು ನಂಬಲಾಗಿದೆ. ಈ ಘಟನೆ ನಡೆದ ದಿನವನ್ನು ಲಾಯ್ಲತ್ ಅಲ್-ಖಾದ್ರ್ (Laylat al-Qadr) ಎಂದು ಕರೆಯಲಾಗುತ್ತೆ. ಹಾಗೂ ಕುರಾತ್.. ದೇವರೇ ಸೃಷ್ಟಿಸಿದ ಗ್ರಂಥವಾಗಿದ್ದು ಅದನ್ನು ಯಾರೋ ಬರೆದುದಲ್ಲ ಎಂದು ಮುಸ್ಲಿಮರು ನಂಬುತ್ತಾರೆ.
ಲಾಯ್ಲತ್ ಅಲ್-ಖಾದ್ರ್ ರಂಜಾನ್ನ ಕೊನೆಯ ಹತ್ತು ದಿನಗಳಲ್ಲಿ ಬೆಸ ಸಂಖ್ಯೆಯಲ್ಲಿ ಬರುವ ರಾತ್ರಿಗಳಲ್ಲಿ ಒಂದಾಗಿದೆ. ಆದ್ದರಿಂದ ಮುಸ್ಲಿಮರು ಈ ಅವಧಿಯನ್ನು ಮಹಿಮೆಯುಳ್ಳ ಹಾಗೂ ದೇವರಿಂದ ಆಶೀರ್ವದಿಸಿದ ನಿರ್ದಿಷ್ಟ ಅವಧಿ ಎಂದು ನಂಬುತ್ತಾರೆ. ಇನ್ನು ಮುಸ್ಲಿಮರು ದಿನಕ್ಕೆ ಐದು ಬಾರಿ ನಮಾಜ್ (ಸಲಾತ್) ಮಾಡುತ್ತಾರೆ. ಉಪವಾಸದ ತಿಂಗಳಲ್ಲೂ ಹಾಗೂ ಇತರೆ ದಿನಗಳಲ್ಲೂ.. ಮುಸ್ಲಿಮರ ದಿನ ಶುರುವಾಗುವುದೇ ಬೆಳಗ್ಗಿನ ಫರ್ಜ್ ನಮಾಜ್ ಎಂಬ ಮುಂಜಾನೆ ಪ್ರಾರ್ಥನೆಯಿಂದ. ನಂತರ ಜೋಹರ್ ನಮಾಜ್ (ಮಧ್ಯಾಹ್ನ), ಅಸರ್ ನಮಾಜ್ (ಮಧ್ಯಾಹ್ನ), ಮಗ್ರೀಬ್ (ಸಂಜೆ) ಮತ್ತು ಇಶಾ(ರಾತ್ರಿ) ಸೇರಿ ಐದು ಬಾರಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಇನ್ನು ಈ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯಕ್ಕೂ ಮುನ್ನ ತಿಂಡಿಯನ್ನು ಸೇವಿಸುತ್ತಾರೆ. ಅದನ್ನು ಸಹಾರ್ ಎಂದು ಕರೆಯಲಾಗುತ್ತೆ. ಹಾಗೂ ಸಂಜೆ ಇಫ್ತಾರ್ ಮೂಲಕ ಉಪವಾಸವನ್ನು ಮುಕ್ತಾಯಗೊಳಿಸುತ್ತಾರೆ. ಈ ಸಮಯ ಮಹತ್ವವಾಗಿದ್ದು ಈ ಎರಡು ಸಮಯದ ಅಂತರದಲ್ಲಿ ಉಪವಾಸ ಆಚರಣೆ ನಡೆಯುತ್ತೆ. ಹಾಗಾದ್ರೆ ಭಾರತದಲ್ಲಿ ಸಹಾರ್ ಮತ್ತು ಇಫ್ತಾರ್ ಸಮಯ ಯಾವಾಗ.. ಮಾಹಿತಿ ಇಲ್ಲಿದೆ.
ರಂಜಾನ್ ಉಪವಾಸ ವೇಳಾಪಟ್ಟಿ ಇಲ್ಲಿದೆ
ಇದನ್ನೂ ಓದಿ: Ramadan 2021: ರಂಜಾನ್ ಹಬ್ಬದ ಪ್ರಾಮುಖ್ಯತೆ, ಉಪವಾಸದ ಆರಂಭ.. ಇವೆಲ್ಲದರ ಡಿಟೇಲ್ಸ್ ಇಲ್ಲಿದೆ
(India Ramadan Calendar 2021 Ramazan Timings Sehr Iftar Timetable for Bangalore Gulbarga Other Kerala Metro Cities in Kannada)